ಬಳ್ಳಾರಿ: ಕಳೆದ ಎರಡು ವರ್ಷಗಳಿಂದ ನಿರೀಕ್ಷಿಸಲಾಗಿದ್ದ ಇಲ್ಲಿನ ಬಳ್ಳಾರಿ ಮಹಾನಗರಪಾಲಿಕೆಗೆ ಚುನಾವಣಾ ಆಯೋಗ ಕೊನೆಗೂ ಮುಹೂರ್ತ ಫಿಕ್ಸ್ ಮಾಡಿದೆ. ಏಪ್ರಿಲ್ 27ರಂದು ಪಾಲಿಕೆಗೆ ಚುನಾವಣಾ ದಿನಾಂಕವನ್ನು ನಿಗದಿಗೊಳಿಸಿಚುನಾವಣಾ ಆಯೋಗವು ಸೋಮವಾರ ಆದೇಶ ಹೊರಡಿಸಿದೆ. ಏ. 30ರಂದು ಮತ ಎಣಿಕೆ ನಡೆಯಲಿದೆ.
ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರ ಅವಧಿ 2019 ಮಾರ್ಚ್ ತಿಂಗಳಿಗೆ ಮುಕ್ತಾಯವಾಯಿತು. ನಂತರ ಚುನಾವಣೆ ಆಗ ಘೋಷಣೆಯಾಗಲಿದೆ, ಈಗ ಘೋಷಣೆಯಾಗಲಿದೆ ಎಂಬೆಲ್ಲ ಸುದ್ದಿಗಳು ಹರಿದಾಡಿದವಾದರೂ, ಘೋಷಣೆಯಾಗಲಿಲ್ಲ. ಈ ನಡುವೆ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದ 35 ವಾರ್ಡ್ ಗಳನ್ನು ಮರು ವಿಂಗಡಿಸಿ 39 ವಾರ್ಡ್‌ಗಳಿಗೆ ಹೆಚ್ಚಿಸಿ, ಮೀಸಲಾತಿಯನ್ನೂ ಘೋಷಣೆ ಮಾಡಲಾಯಿತು.
ಪರಿಣಾಮ ಹಾಲಿ 23ನೇ (ಹಿಂದಿನ 22ನೇ) ವಾರ್ಡ್ ಓಬಿಸಿಗೆ ಮೀಸಲಾಯಿತು. ಪರಿಶಿಷ್ಟಜಾತಿ, ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವಈ ವಾರ್ಡ್‌ನ್ನು ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ವಾರ್ಡ್‌ನ ಸ್ಥಳೀಯ ಮುಖಂಡರೊಬ್ಬರು ಧಾರವಾಡ ಹೈಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಪಾಲಿಕೆಗೆ ಚುನಾವಣೆಯನ್ನು ತಡೆಹಿಡಿಯಲಾಯಿತು. ಹೀಗೆಕಳೆದ ಎರಡು ವರ್ಷಗಳಿಂದ ನಿರೀಕ್ಷಿಸಲಾಗಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯನ್ನುರಾಜ್ಯ ಚುನಾವಣಾ ಆಯೋಗ ಕೊನೆಗೂ ದಿನಾಂಕನಿಗದಿಪಡಿಸಿ ಆದೇಶ ಹೊರಡಿಸಿದ್ದು, ರಾಜಕೀಯಪಕ್ಷಗಳ ಮುಖಂಡರಲ್ಲಿ ತಲ್ಲಣ ಮೂಡಿಸಿದೆ.
ಏ.27ಕ್ಕೆ ಮತದಾನ: ಬಳ್ಳಾರಿ ಮಹಾನಗರ ಪಾಲಿಕೆಗೆ ಏಪ್ರಿಲ್ 8ರಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದ ಆರಂಭವಾಗಲಿರುವ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಏಪ್ರಿಲ್ 15 ಕೊನೆಯ ದಿನವಾಗಿದೆ. ಏಪ್ರಿಲ್ 16 ನಾಮಪತ್ರ ಮರು ಪರಿಶೀಲನೆ ನಡೆಯಲಿದ್ದು,ಮಾ.19 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮಾ. 27ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನಪ್ರಕ್ರಿಯೆ ನಡೆಯಲಿದೆ. ಅವಶ್ಯಕತೆಯಿದ್ದಲ್ಲಿ ಏ. 29ರಂದು ಮರು ಮತದಾನ ನಡೆಯಲಿದ್ದು, ಏ.30ರಂದು ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಆರ್.ನಾಗರಾಜ್ ಆದೇಶದಲ್ಲಿ ತಿಳಿಸಿದ್ದಾರೆ.
ಅನಿರೀಕ್ಷಿತವಾಗಿ ಘೋಷಣೆ: ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯರ ಅವ ಧಿ ಮುಗಿದು 2 ವರ್ಷ ಕಳೆದ ಹಿನ್ನೆಲೆಯಲ್ಲಿ ತಡವಾದರೂ ಚುನಾವಣೆನಡೆಯುವುದು ಖಚಿತವಾದರೂ, ಮೀಸಲಾತಿಸಮಸ್ಯೆ ಹೈಕೋರ್ಟ್‌ನಲ್ಲಿ ಇರುವ ಕಾರಣ ಸದ್ಯದಮಟ್ಟಿಗೆ ಪಾಲಿಕೆ ಚುನಾವಣೆ ಇನ್ನಷ್ಟು ದಿನಗಳು ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿತ್ತು. ಈಹಿನ್ನೆಲೆಯಲ್ಲಿ ಕಳೆದ ವರ್ಷ 2020ರಲ್ಲಿ ಲಾಕ್‌ಡೌನ್ ಅವಧಿಯಲ್ಲಿ ರೇಷನ್ ಕಿಟ್‌ಗಳನ್ನು ಹಂಚುವ ಮೂಲಕ ಜನರ ಬಳಿಗೆ ಬಂದಿದ್ದ ಆಕಾಂಕ್ಷಿಗಳೆಲ್ಲರೂ ಸದ್ಯ ಸೈಲೆಂಟ್ ಆಗಿ ಮರೆಗೆ ಸರಿದಿದ್ದರು.ಇದೀಗ ಅನಿರೀಕ್ಷಿತವಾಗಿ ಪಾಲಿಕೆಗೆ ಚುನಾವಣೆ ಘೋಷಣೆ ಯಾಗಿರುವುದು ಹಾಗೂ ಕಡಿಮೆ ಅವಧಿ ಇರುವುದರಿಂದ ನೂತನ ಆಕಾಂಕ್ಷಿಗಳಲ್ಲಿ ತಲ್ಲಣ ಮೂಡಿಸಿದೆ.