ಮಾಗಡಿ: ಪುರಸಭೆ 2021-2022ನೇ ಸಾಲಿನ 66.80 ಲಕ್ಷ ರೂ. ಉಳಿತಾಯ ಬಜೆಟ್ ಅನ್ನು ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ ಮಂಡಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಮಂಡಣೆ ಬಳಿಕ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಆಯವ್ಯಯ ಮಂಡಿಸಲಾಗಿದೆ ಎಂದರು.
175 ಲಕ್ಷ ರೂ., ನಿರೀಕ್ಷೆ: 23.11 ಲಕ್ಷ ರೂ ನಲ್ಲಿ 66.80 ಲಕ್ಷ ಉಳತಾಯ ಬಜೆಟ್ ಮಂಡಿಸಿದ್ದು, ಕಲ್ಯಾಣ ನಿಧಿಗೆ 40 ಲಕ್ಷ ರೂ., ಆರ್ಥಿಕವಾಗಿಹಿಂದುಳಿದ ವರ್ಗಗಳಿಗೆ 16 ಲಕ್ಷ ರೂ., ಅಂಗವಿಕಲರ ಕಲ್ಯಾಣ ನಿಧಿಗೆ 10 ಲಕ್ಷ ರೂ.,ಕ್ರೀಡಾ ಚಟುವಟಿಕೆ ಪ್ರೋತ್ಸಾಹಕ್ಕೆ 3.50 ಲಕ್ಷ ರೂ., ಮಹಿಳಾ ಸಬಲೀಕರಣಕ್ಕಾಗಿ 5.50 ಲಕ್ಷ ರೂ., ಬರ ಪರಿಹಾರಕ್ಕೆ 30 ಲಕ್ಷ ರೂ., ಮೀಸಲಿಡಲಾ ಗುವುದು. 15ನೇ ಹಣಕಾಸು ಯೋಜನೆ ಅನು ದಾನ 175 ಲಕ್ಷ ರೂ., ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಮುಂದಿನ ಸಾಮಾನ್ಯ ಸಭೆಯೊಳಗೆ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆ ನಡೆಸಬೇಕು. ಇದಕ್ಕೆಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯುವುದು ಮತ್ತು ಶವ ಸಂಸ್ಕಾರಕ್ಕೆ ವಾಹನ ಖರೀದಿಸಬೇಕು. ಶವಸಂಸ್ಕಾರಕ್ಕೆ ಇರುವ ಸಹಾಯ ನಿಧಿ ಐದು ಲಕ್ಷ ರೂ. ಬದಲಾಗಿ 10 ಲಕ್ಷ ರೂ. ಮೀಸಲಿಡಬೇಕು ಎಂದು ಸದಸ್ಯರಾದ ಎಂ.ಎನ್.ಮಂಜುನಾಥ್, ಕೆ.ವಿ.ಬಾಲು ಆಗ್ರಹಿಸಿದರು.
64/ಸಿ ಬದಲಾವಣೆಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರತಿ ವಾರ್ಡ್‌ಗಳಿಗೂತಲಾ 5 ಮನೆ ನೀಡಬೇಕು. ಎಲ್ಲ ಜಯಂತಿಗಳಿಗೂ ಅನುದಾನ ಮೀಸಲಿಟ್ಟಿರುವಂತೆ ಟಿಪ್ಪು ಜಯಂತಿಗೂ ಮೀಸಲಿಡಬೇಕು ಎಂದು ಸದಸ್ಯ ಎಚ್. ಜೆ.ಪುರುಶೋತ್ತಮ್ ಸಭೆ ಗಮನ ಸೆಳೆದರು. ಬಿಜೆಪಿ ಸರ್ಕಾರದಲ್ಲಿ ಈಗಾಗಲೇ ಟಿಪ್ಪು ಜಯಂತಿ ರದ್ದು ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ನಾಗರಿಕರಿಗೆ ಅನುಕೂಲ ಕಲ್ಪಿಸಿ: ಸದಸ್ಯ ಎಂ.ಎನ್. ಮಂಜುನಾಥ್ ಮಾತನಾಡಿ, ಬರೀ ಪೇಪರ್ ಬಜೆಟ್ ಆಗಬಾರದು. ನಾಗರಿಕರಿಗೆ ಸೌಲಭ್ಯ ಕಲ್ಪಿಸುವಂತ ಯೋಜನೆ ಅನುಷ್ಠಾನಗೊಳಿಸಬೇಕು ಎಂದರು. ಉಪಾಧ್ಯಕ್ಷ ರಹಮತ್, ಲೆಕ್ಕಾಧಿಕಾರಿ ನಾಗೇಂದ್ರ, ಮುಖ್ಯಾಧಿಕಾರಿ ಎಂ.ಎನ್.ಮಹೇಶ್,ಸದಸ್ಯರಾದ ಅನಿಲ್ ಕುಮಾರ್, ಶಿವಕುಮಾರ್, ವೆಂಕಟರಾಮು ರಿಯಾಜ್, ರಘು, ಕಾಂತರಾಜು, ಶಿವರುದ್ರಮ್ಮ, ನಾಗರತ್ನ$ಮ್ಮ ರೇಖಾ ನವೀನ್ ಅಶ್ವಥ್ ನಿಯರ್ ಪ್ರಶಾಂತ್ ಇದ್ದರು.
ನೀರಸ ಬಜೆಟ್: ರಂಗಹನುಮಯ್ಯ :
ಸದಸ್ಯ ರಂಗಹನುಮಯ್ಯ ಮಾತನಾಡಿ, ಪ್ರಸ್ತುತ ಸಾಲಿನ ಪುರಸಭೆ ಬಜೆಟ್ ನೀರಸವಾಗಿದೆ. ಯಾವ ನಿಧಿಯಿಂದಲೂ ಹಣ ಸಂಗ್ರಹ ಮಾಡಿಲ್ಲ. ತೆರಿಗೆ ಬಾಕಿ ವಸೂಲಿ ಬಗ್ಗೆ ಯಾವುದೇ ಚರ್ಚೆ ಮತ್ತು ಕ್ರಮವೂ ಕೈಗೊಂಡಿಲ್ಲ. ಹೊಸ ತೆರಿಗೆ ಕುರಿತು ಚರ್ಚಿಸಿಲ್ಲ. ಬರೀ ಪೊಳ್ಳು ಭರವಸೆ ಬಜೆಟ್ ಆಗಿದೆ. ಸಾರ್ವಜನಿಕರಿಗೆ ಪ್ರಯೋಜನವಿಲ್ಲದ ಬಜೆಟ್ ಇದಾಗಿದ್ದು, ಬಜೆಟ್ ಯಶಸ್ವಿಗೆ ಅಧಿಕಾರಿ ವರ್ಗ ಉತ್ತಮ ಕೆಲಸ ಮಾಡಬೇಕಿದೆ ಎಂದು ಹೇಳಿದರು.