Advertisement

6.3 ಕೆ.ಜಿ. ತೂಕದ ಮಗುವಿಗೆ ಜನ್ಮವಿತ್ತ ತಾಯಿ

12:21 AM Oct 18, 2021 | Team Udayavani |

ವಾಷಿಂಗ್ಟನ್‌: ಸಾಮಾನ್ಯವಾಗಿ ನವಜಾತು ಶಿಶುಗಳು 2-3 ಕೆ.ಜಿ. ತೂಕವಿರುತ್ತವೆ. ಆದರೆ ಅಮೆರಿಕದ ಅರಿಜೋನಾದ ಕಾರಿ ಪಟೋನೈ ಹೆಸರಿನ ಮಹಿಳೆ ಬರೋಬ್ಬರಿ 6.3 ಕೆ.ಜಿ. ತೂಕದ ಫಿನ್ಲೆ ಹೆಸರಿನ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ.

Advertisement

ಗ್ಲೆಂಡೇಲ್‌ ನಗರದಲ್ಲಿರುವ ಬ್ಯಾನರ್‌ ಥಂಡರ್‌ಬರ್ಡ್‌ ಆಸ್ಪತ್ರೆಯಲ್ಲಿ ಅ.4ರಂದು ಕಾರಿ ಹೆರಿಗೆಯಾಗಿದೆ. 2 ಗಂಡು ಮಕ್ಕಳ ತಾಯಿಯಾಗಿರುವ ಕಾರಿ, ಈಗಾಗಲೇ 19 ಬಾರಿ ಗರ್ಭಪಾತದಿಂದ ಬಳಲಿದ್ದಾಳಂತೆ.

ಫಿನ್ಲೆ ಗರ್ಭದಲ್ಲಿದ್ದಾಗ, ಮಗು ಗಾತ್ರ ದೊಡ್ಡವಿರುವುದಾಗಿ ವೈದ್ಯರು ತಿಳಿಸಿದ್ದರಾದರೂ ಅದು, 6 ಕೆ.ಜಿ. ತೂಕದಷ್ಟಿರುತ್ತದೆ ಎಂದು ಅವರು ಊಹಿಸಿರಲಿಲ್ಲವಂತೆ.

ತಮ್ಮ ವೃತ್ತಿ ಜೀವನದಲ್ಲೇ ಇದೇ ಮೊದಲನೇ ಬಾರಿಗೆ ಇಷ್ಟು ತೂಕದ ಮಗುವಿನ ಹೆರಿಗೆ ಮಾಡಿಸಿದ್ದಾಗಿ ವೈದ್ಯರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

Advertisement
Advertisement

Udayavani is now on Telegram. Click here to join our channel and stay updated with the latest news.

Next