Advertisement
ಮುಂಬೈ ನಿವಾಸಿಗಳಾದ ಪ್ರಿಯಾಂಕಾ ರಾಜೇಶ್ ಮೊಗ್ರೆ (29), ಮಹಾದೇವಿ (26) ಹಾಗೂ ನವ ಮುಂಬೈ ನಿವಾಸಿ ವನಿತಾ ಗಾಯ್ಕವಾಡ್ (37) ಬಂಧಿತರು. ಅವರಿಂದ 250 ಗ್ರಾಂ ಚಿನ್ನಾಭರಣ ಹಾಗೂ 100 ಗ್ರಾಂ ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
Related Articles
Advertisement
ಬಾಣಸವಾಡಿ ಉಪವಿಭಾಗದ ಎಸಿಪಿ ನಿಂಗಪ್ಪ ಬಿ. ಸಕ್ರಿ ಮಾರ್ಗದರ್ಶನದಲ್ಲಿ ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್ ಎಂ.ವಸಂತಕುಮಾರ್, ಪಿಎಸ್‌ಐ ನಿಂಗರಾಜ್, ಎಎಸ್‌ಐ ಆಸ್ಕರ್ ಮಿರ್ಜಾ, ಕಾನ್‌ಸ್ಟೇಬಲ್ ಗಳಾದ ಸಂತೋಷ್ ಲಮಾಣಿ, ಸವಿತಾ ಹಾಗೂ ಇತರರ ತಂಡ ಆರೋಪಿಗಳನ್ನು ಪತ್ತೆ ಹಚ್ಚಿದೆ. ಈ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ನೀಡಿದ ಸುಳಿವು : ಆರೋಪಿಗಳು ಮುಂಬೈನಲ್ಲಿ ಮೊಬೈಲ್ ಕದ್ದು ಅದರ ಮೂಲಕವೇ ಫೇಸ್‌ಬುಕ್‌ನಲ್ಲಿ ಮನೆಗೆಲಸದವರು ಲಭ್ಯವಿದ್ದಾರೆ ಎಂದು ಟ್ಯಾಗ್ ಮಾಡುವಾಗ ಕದ್ದ ಮೊಬೈಲ್ ಸಂಖ್ಯೆಯನ್ನೇ ನೀಡಿದ್ದರು. ಪ್ರಕರಣದ ಬಳಿಕ ದೂರುದಾರರ ಮನೆ ಸಮೀಪದ ಸಿಸಿ ಕ್ಯಾಮೆರಾ ಶೋಧಿಸಿದಾಗ ಆರೋಪಿಗಳ ಚಹರೆ ಪತ್ತೆಯಾಗಿತ್ತು. ಬಳಿಕ ಮೊಬೈಲ್ ಸಂಖ್ಯೆ ಜಾಡು ಹಿಡಿದು ಮುಂಬೈಗೆ ತೆರಳಿ ಪರಿಶೀಲಿಸಿದಾಗ ಅದು ಕದ್ದಿರುವ ಮೊಬೈಲ್ ಎಂಬುದು ಗೊತ್ತಾಗಿದೆ.
ಬಳಿಕ ಸತತ ಒಂದು ತಿಂಗಳ ಕಾಲ ಮೊಬೈಲ್ ಕರೆಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ನಟೋರಿಯಸ್ ಮುಂಬೈ ಗ್ಯಾಂಗ್ : ಮೂವರು ಆರೋಪಿಗಳು ವಿರುದ್ಧ ಮುಂಬೈನಲ್ಲಿ ಹತ್ತಾರು ಪ್ರಕರಣಗಳಿದ್ದು, ಜೈಲಿಗೂ ಹೋಗಿ ಜಾಮೀನು ಪಡೆದು ಬಂದಿದ್ದಾರೆ. ಆರೋಪಿಗಳ ಪೈಕಿ ವನಿತಾ ಗಾಯ್ಕವಾಡ್ ವಿರುದ್ಧವೇ ಮುಂಬೈನಲ್ಲಿ 37 ಪ್ರಕರಣಗಳಿದ್ದು, ಪ್ರಿಯಕರ ಜತೆ ಸೇರಿ ಮನೆ ಕಳವು ಮಾಡುತ್ತಿದ್ದಳು. ಉಳಿದ ಆರೋಪಿಗಳಾದ ಮಹಾದೇವಿ ಹಾಗೂ ಪ್ರಿಯಾಂಕಾ ವಿರುದ್ಧ ತಲಾ 14 ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸಿಕೊಂಡು ಬೇರೆ ಬೇರೆ ಹೆಸರಿನಲ್ಲಿ ಮನೆ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ.
ಬೆಂಗಳೂರಿನಲ್ಲಿ ಫೇಸ್‌ಬುಕ್ ಬಳಕೆ : ವಿಶೇಷವೆಂದರೆ ಬೆಂಗಳೂರಿಗೆ ಬಂದಿದ್ದ ಮೂವರು ಮನೆ ಕಳವು ಮಾಡಲು ಫೇಸ್‌ಬುಕ್ ಅನ್ನು ವೇದಿಕೆಯಾಗಿ ಮಾಡಿಕೊಂಡಿದ್ದು, ಮನೆಕೆಲಸದವರು ಲಭ್ಯವಿದ್ದಾರೆ ಎಂದು ಪೋಸ್ಟ್ ಮಾಡುತ್ತಿದ್ದರು. ಅದನ್ನು ಕಂಡ ಮಾಲೀಕರು ಹೇಳಿದ ಮೊತ್ತಕ್ಕೆ ಕೆಲಸಕ್ಕೆ ಸೇರಿಕೊಂಡು ಕೆಲವೇ ದಿನಗಳಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದರು. ಆರೋಪಿಗಳು ರೈಲಿನಲ್ಲಿ ಬೆಂಗಳೂರಿಗೆ ಬಂದು ಮೆಜೆಸ್ಟಿಕ್‌ನ ಲಾಡ್ಜ್ನಲ್ಲಿ ರೂಮ್ ಪಡೆದು ಮನೆಗಳ್ಳತನಕ್ಕೆ ಸಂಚು ರೂಪಿಸಿದ್ದರು. ಅದರಂತೆ ಅರವಿಂದ ಮನೆಯಲ್ಲಿ ಮಹಾದೇವಿ ಕಳ್ಳತನ ಮಾಡಿಕೊಂಡು ಹೊರಬಂದ ಬಳಿಕ ಮೂವರು ಮುಂಬೈಗೆ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.