ಮುಂಬಯಿ: 12ನೇ ಮಹಡಿಯಿಂದ ಮಹಿಳೆಯೊಬ್ಬಳು ತನ್ನ ಮಗನೊಂದಿಗೆ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬಯಿಯಲ್ಲಿ ಸೋಮವಾರ(ಜೂನ್ 21) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:MAHE:ಪ್ರಸಕ್ತ ಶೈಕ್ಷಣಿಕ ವರ್ಷದಿಂದ ‘ಬಿಎ ಇನ್ ಎಸ್ಥೆಟಿಕ್ಸ್ ಆಂಡ್ ಪೀಸ್ ಸ್ಟಡೀಸ್’ ಪ್ರಾರಂಭ
ತನ್ನ ಮಗ ಅತೀ ಗಲಾಟೆ ಮಾಡುತ್ತಿರುವುದಾಗಿ ನೆರೆಹೊರೆಯವರು ಕಿರುಕುಳ ನೀಡಿದ್ದರಿಂದ ಮನನೊಂದು ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆರೋಪಿಸಿ 44 ವರ್ಷದ ರೇಷ್ಮಾ ಟ್ರೆಂಚಿಲ್ ಡೆತ್ ನೋಟ್ ಬರೆದಿಟ್ಟಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಫ್ಲ್ಯಾಟ್ ನ ಕೆಳಅಂತಸ್ತಿನಲ್ಲಿ ವಾಸ್ತವ್ಯ ಹೂಡಿದ್ದ 33ವರ್ಷದ ವ್ಯಕ್ತಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಟ್ರೆಂಚಿಲ್ ಇತ್ತೀಚೆಗೆ ಕೋವಿಡ್ ನಿಂದ ತನ್ನ ಪತಿಯನ್ನು ಕಳೆದುಕೊಂಡಿದ್ದ. ಬಳಿಕ ಚಾಂಡಿವಾಲಿ ಫ್ಲ್ಯಾಟ್ ನಲ್ಲಿ ತನ್ನ ಏಳು ವರ್ಷದ ಮಗನ ಜತೆ ವಾಸವಾಗಿದ್ದರು. ಆದರೆ ಮಗ ಅತೀಯಾದ ಗಲಾಟೆ ಮಾಡುತ್ತಿದ್ದ ಬಗ್ಗೆ ನೆರೆಹೊರೆಯವರು ಕಿರುಕುಳ ನೀಡುತ್ತಿದ್ದರು ಎಂದು ವರದಿ ವಿವರಿಸಿದೆ.
ಟ್ರೆಂಚಿಲ್ ವಾಸಿಸುತ್ತಿದ್ದ ಫ್ಲ್ಯಾಟ್ ನಲ್ಲಿದ್ದ ಅಯೂಬ್ ಖಾನ್ (67), ಪತ್ನಿ ಹಾಗೂ ಮಗ ಶಾದಾಬ್ ವಾಸವಾಗಿದ್ದರು. ಪತಿಯನ್ನು ಕಳೆದುಕೊಂಡ ನಂತರ ಆಕೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾಳೆ ಎಂದು ವರದಿ ತಿಳಿಸಿದೆ.