Advertisement
ಉದ್ಯೋಗ ನೀಡುವ ಆಮೀಷದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಕಾಂಬೋಡಿಯಾಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಚೆಂಬೂರ್ ನ ಪ್ರಿಯಾಂಕಾ ಶಿವಕುಮಾರ್ ಸಿದ್ಧು (30ವರ್ಷ) ಎಂಬಾಕೆಯನ್ನು ಬಂಧಿಸಲಾಗಿದೆ.
Related Articles
Advertisement
ವರದಿಯ ಪ್ರಕಾರ, ಪ್ರಿಯಾಂಕಾ ವಂಚನೆ ಜಾಲದಲ್ಲಿ ಜಿತೇಂದ್ರ ಶಾ, ನಾರಾಯಣ ಹಾಗೂ ಕಾಂಬೋಡಿಯಾದಲ್ಲಿನ ಚೀನಾ ಮೂಲದ ಕಂಪನಿಯ ನಿರ್ದೇಶಕ ಶಾ ಪ್ರಮುಖ ರೂವಾರಿಯಾಗಿದ್ದಾರೆ ಎಂದು ತಿಳಿಸಿದೆ.
ಉದ್ಯೋಗಾವಕಾಶದ ವಿವರಕ್ಕಾಗಿ ಪ್ರಿಯಾಂಕಾ ಕಾಂಬೋಡಿಯಾಕ್ಕೆ ತೆರಳುತ್ತಿದ್ದು, ಪ್ರತಿ ಒಂದು ಉದ್ಯೋಗದ ಆಫರ್ ಗಾಗಿ ಆಕೆಗೆ 42,000 ರೂಪಾಯಿ ಕಮಿಷನ್ ನೀಡಲಾಗುತ್ತಿತ್ತು. ಹೀಗೆ ವಂಚನೆಗೈದಿರುವ ಈಕೆ ವಿರುದ್ಧ ತೆಲಂಗಾಣ ಸೈಬರ್ ಕ್ರೈಂ ಪೊಲೀಸರು, ಮಾನವ ಕಳ್ಳಸಾಗಣೆ ಮತ್ತು ಸೈಬರ್ ಕ್ರೈಂ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿರುವುದಾಗಿ ವರದಿ ವಿವರಿಸಿದೆ.