Advertisement

ಗೋಡೆ ಕುಸಿತ ಪ್ರಕರಣ: 24ಕ್ಕೇರಿದ ಸಾವಿನ ಸಂಖ್ಯೆ,ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ

12:45 PM Jul 18, 2021 | Team Udayavani |

ಮುಂಬೈ: ಮಹಾಮಳೆಯ ಕಾರಣದಿಂದ ಮುಂಬೈನ ಚೆಂಬೂರ್ ಮತ್ತು ವಿಖ್ರೋಲಿಯಲ್ಲಿ ಗೋಡೆ ಕುಸಿದ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಹಲವರನ್ನು ಇದುವರೆಗೆ ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

Advertisement

ನಗರದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜನರು ಮುಕ್ತವಾಗಿ ಹೊರಗೆ ಹೋಗದಂತೆ ಸೂಚಿಸಲಾಗಿದೆ.

ಮಹಾನಗರ ಪಾಲಿಕೆ ಬಿಎಂಸಿ ಪ್ರಕಾರ ಭಾನುವಾರ ಬೆಳಿಗ್ಗೆ ವಿಖ್ರೋಲಿ ಪ್ರದೇಶದಲ್ಲಿ ಗ್ರೌಂಡ್-ಪ್ಲಸ್ ಒನ್ ವಸತಿ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಮುಂಬೈನಲ್ಲಿ ಮಳೆ ತಂದ ಸಂಕಷ್ಟ: ಗೋಡೆ ಕುಸಿದು ಹತ್ತು ಮಂದಿ ಸಾವು

ಚೆಂಬೂರಿನ ಭಾರತ್ ನಗರ ಪ್ರದೇಶದಿಂದ ಹದಿನೈದು ಜನರನ್ನು ಮತ್ತು ವಿಕ್ರೊಲಿಯ ಸೂರ್ಯನಗರದ ಒಂಬತ್ತು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಗಾಯಗೊಂಡವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಎರಡೂ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

Advertisement

ಪಿಎಂ-ಸಿಎಂ ಪರಿಹಾರ: ಘಟನೆಯ ಪ್ರಾಣಹಾನಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತಪಟ್ಟವರ ಕುಟುಂಬಗಳಿಗೆ ತಲಾ  2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಾಯಗೊಂಡವರಿಗೆ 50,000 ರೂ. ನೀಡಲಾಗುವುದು ಎಂದು ಅವರ ಪಿಎಂಒ ಟ್ವಿಟರ್‌ನಲ್ಲಿ ತಿಳಿಸಿದೆ.

ಈ ಮಧ್ಯೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಚೇರಿ ಸಂತ್ರಸ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಘೋಷಿಸಿದೆ. ಸಿಎಂ ಪುತ್ರ. ಮಹಾರಾಷ್ಟ್ರ ಪರಿಸರ ಸಚಿವ ಆದಿತ್ಯ ಠಾಕ್ರೆ ಅವರು ಚೆಂಬೂರಿನಲ್ಲಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮುಂಬೈನಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ 176.96 ಮಿ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next