Advertisement
ರೈಲ್ವೇ ಮಂಡಳಿ ದೇಶದ ವಿವಿಧ ಭಾಗಗಳಲ್ಲಿ ಆರಂಭಿಸಲುದ್ದೇಶಿಸಿರುವ 200 ವಿಶೇಷ ರೈಲುಗಳಲ್ಲಿ ಮಂಗಳೂರು-ಮುಂಬಯಿ ಮಾರ್ಗವನ್ನು ಸೇರಿಸಿ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಈ ವಿಚಾರವಾಗಿ ಸೆಂಟ್ರಲ್ ರೈಲ್ವೇ ವಲಯ ಕೂಡ ರೈಲ್ವೇ ಮಂಡಳಿಗೆ ಪ್ರಸ್ತಾವನೆ ಕಳುಹಿಸಿದೆ.
Related Articles
Advertisement
ವಿಶೇಷ ರೈಲು ಸಂಚಾರಕ್ಕೆ ಅವಕಾಶಪ್ರಸ್ತುತ ಮಂಗಳೂರು ಸೆಂಟ್ರಲ್‌ನಿಂದ ಚೆನ್ನೈ ಎಕ್ಸ್ ಪ್ರಸ್ ಮಾತ್ರ ಸಂಚರಿಸುತ್ತಿದೆ. ಬೆಂಗಳೂರು ವಿಶೇಷ ರೈಲನ್ನು ಪ್ರಯಾಣಿಕರ ಕೊರತೆ ನೆಪವೊಡ್ಡಿ ಸ್ಥಗಿತಗೊಳಿಸಲಾಗಿದೆ. ಕೊರೊನಾ ಪೂರ್ವದಲ್ಲಿ ಮಂಗಳೂರು ಜಂಕ್ಷನ್‌ನಿಂದ ಸಂಚರಿಸುತ್ತಿದ್ದ ಮಂಗಳೂರು ಜಂಕ್ಷನ್-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲನ್ನು ರೈಲು ಸಂಚಾರ ಸಾಮಾನ್ಯಸ್ಥಿತಿಗೆ ಬರುವವರೆಗೆ ವಿಶೇಷ ರೈಲು ಆಗಿ ಓಡಿಸಬಹುದಾಗಿದೆ ಎಂಬ ಬೇಡಿಕೆಯನ್ನು ಕರಾವಳಿ ಕರ್ನಾಟಕದ ರೈಲ್ವೇ ಬಳಕೆದಾರರು ಮಂಡಿಸಿದ್ದಾರೆ. ಕೊಂಕಣ ಮಾರ್ಗದ ವ್ಯಾಪ್ತಿಯನ್ನು ಹೊಂದಿರುವ ಕೇಂದ್ರ ರೈಲ್ವೇ ಕೂಡ ಹಬ್ಬಗಳ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಮುಂಬಯಿಗೆ ಕೋವಿಡ್-19 ವಿಶೇಷ ರೈಲು ಸಂಚಾರದ ಪ್ರಸ್ತಾವನೆಯನ್ನು ರೈಲ್ವೇ ಮಂಡಳಿಯ ಮುಂದಿರಿಸಿದೆ. ಇದನ್ನೂ ಓದಿ:ಪ್ರಯಾಣಿಕರ ಸೆಳೆಯಲು ನಮ್ಮ ಮೆಟ್ರೋ ಪ್ಲಾನ್ : ಪೇಟಿಎಂ, ಗೂಗಲ್‌ಪೇ ನಲ್ಲೇ ರಿಚಾರ್ಜ್ ವಿಶೇಷ ರೈಲಿನ ಆವಶ್ಯಕತೆ
ಕೊರೊನಾ ಕಾರಣದಿಂದಾಗಿ ಉದ್ಯೋಗ, ವಾಣಿಜ್ಯ ಚಟುವಟಿಕೆಗಳನ್ನು ತೊರೆದು ಊರಿಗೆ ಬಂದಿದ್ದವರು ಮರಳಿ ಮುಂಬಯಿಯತ್ತ ತೆರಳಲು ಆರಂಭಿಸಿದ್ದಾರೆ. ಅದುದರಿಂದ ವಿಶೇಷ ರೈಲು ಸಂಚಾರ ಅತೀ ಅವಶ್ಯವಾಗಿದೆ. ಮಂಗಳೂರಿನಿಂದಲೂ ವಿಶೇಷ ರೈಲುಗಳ ಸಂಚಾರ ಅಗತ್ಯವಿದೆ. ರೈಲ್ವೇ ಮಂಡಳಿ ಆರಂಭಿಸಲುದ್ದೇಶಿಸಿರುವ 200 ರೈಲುಗಳಲ್ಲಿ ಮಂಗಳೂರು-ಮುಂಬಯಿ ಸೇರಿದಂತೆ ಮಂಗಳೂರು ಭಾಗಕ್ಕೂ ಕೆಲವು ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರೈಲ್ವೇ ಸಚಿವರನ್ನು ಕೋರಲಾಗುವುದು.
– ನಳಿನ್ ಕುಮಾರ್ ಕಟೀಲು, ಸಂಸದರು, ದ.ಕ.