Advertisement

ಐಪಿಎಲ್‌: ಯೋಜನೆಯಂತೆ ಗೆದ್ದ ಮುಂಬೈ ಇಂಡಿಯನ್ಸ್‌

12:09 AM Oct 06, 2021 | Team Udayavani |

ಶಾರ್ಜಾ: ಪ್ಲೇ ಆಫ್ ಪ್ರವೇಶದ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವ ಪಡೆದ ರಾಜಸ್ಥಾನ್‌ ರಾಯಲ್ಸ್‌ ಎದುರಿನ ಮಂಗಳವಾರದ ಐಪಿಎಲ್‌ ಮುಖಮುಖಿಯಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಯೋಜನಾಬದ್ಧ ಆಟವಾಡಿ 8 ವಿಕೆಟ್‌ ಜಯ ಸಾಧಿಸಿದೆ. ಗೆಲುವಿನ ಜತೆಗೆ ರನ್‌ರೇಟ್‌ ಕೂಡ ಏರಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದ ಮುಂಬೈಗೆ ಈ ಗೆಲುವು ಟರ್ನಿಂಗ್‌ ಪಾಯಿಂಟ್‌ ಆಗುವ ಸಾಧ್ಯತೆಯೊಂದು ಗೋಚರಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ 9 ವಿಕೆಟಿಗೆ ಕೇವಲ 90 ರನ್‌ ಗಳಿಸಿದರೆ, ಮುಂಬೈ 8.2 ಓವರ್‌ಗಳಲ್ಲಿ 2 ವಿಕೆಟಿಗೆ 94 ರನ್‌ ಬಾರಿಸಿ ತನ್ನ 6ನೇ ಗೆಲುವು ದಾಖಲಿಸಿತು. ಚೇಸಿಂಗ್‌ ವೇಳೆ ಇಶಾನ್‌ ಕಿಶನ್‌(ಅಜೇಯ 50) ಅರ್ಧಶತಕ ಸಿಡಿಸಿ ಮಿಂಚಿದರು.

ಎವಿನ್‌ ಲೆವಿಸ್‌ ಮತ್ತು ಯಶಸ್ವಿ ಜೈಸ್ವಾಲ್‌ ಅಬ್ಬರಿಸುವ ಸೂಚನೆ ನೀಡಿ ದರೂ ಈ ಜೋಡಿ ಬೇರ್ಪಟ್ಟ ಬಳಿಕ ರಾಜಸ್ಥಾನ್‌ ತೀವ್ರ ಸಂಕಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಎರಡಂಕೆಯ ಮೊತ್ತ ಕೂಡ ಗಳಿಸ ಲಾಗಲಿಲ್ಲ. ಜೇಮ್ಸ್‌ ನೀಶಮ್‌, ಕೋಲ್ಟರ್‌ ನೈಲ್‌, ಬುಮ್ರಾ ಅತ್ಯಂತ ಘಾತಕವಾಗಿ ಪರಿಣಮಿಸಿದರು.

ಲೆವಿಸ್‌ ಬಿರುಸಿನ ಗತಿಯಲ್ಲಿ 24 ರನ್‌ ಮಾಡಿದರು (19 ಎಸೆತ, 3 ಬೌಂಡರಿ, 1 ಸಿಕ್ಸರ್‌). ಜೈಸ್ವಾಲ್‌ 3 ಬೌಂಡರಿಗಳ ನೆರವಿನಿಂದಲೇ 12 ರನ್‌ ಸಿಡಿಸಿದರು. ಆದರೆ ಇಬ್ಬರೂ ಬ್ಯಾಟಿಂಗ್‌ ವಿಸ್ತರಿಸಲು ವಿಫ‌ಲರಾದರು. ನಾಯಕ ಸಂಜು ಸ್ಯಾಮ್ಸನ್‌, ಕಳೆದ ಪಂದ್ಯದ ಹೀರೋ ಶಿವಂ ದುಬೆ, ಗ್ಲೆನ್‌ ಫಿಲಿಪ್ಸ್‌ ಒಟ್ಟು ಸೇರಿ ಗಳಿಸಿದ್ದು ಬರೀ 10 ರನ್‌. ಒಂದಕ್ಕೆ 41 ರನ್‌ ಮಾಡಿ ಸುಸ್ಥಿತಿಯಲ್ಲಿದ್ದ ರಾಜಸ್ಥಾನ್‌ 50ಕ್ಕೆ ತಲಪುವಷ್ಟರಲ್ಲಿ 5 ವಿಕೆಟ್‌ ಉದುರಿಸಿಕೊಂಡಿತು. ಆಗಲೇ ಅರ್ಧ ಇನ್ನಿಂಗ್ಸ್‌ ಮುಗಿದಿತ್ತು. 6ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ರಾಜಸ್ಥಾನ್‌ ಇನ್ನೊಂದು ಬೌಂಡರಿ ಹೊಡೆತಕ್ಕಾಗಿ 19ನೇ ಓವರ್‌ ತನಕ ಕಾಯಬೇಕಾಯಿತು!

ಬಿಗ್‌ ಹಿಟ್ಟರ್‌ಗಳಾದ ಡೇವಿಡ್‌ ಮಿಲ್ಲರ್‌-ರಾಹುಲ್‌ ತೇವಟಿಯಾ ಕೂಡ ಪರದಾಡಿದರು. ಚೆನ್ನೈ ವಿರುದ್ಧ ಅಬ್ಬರದ ಆಟವಾಡಿ ಗೆದ್ದ ತಂಡ ಇದೇನಾ ಎಂಬ ಅನುಮಾನ ಹುಟ್ಟಿದ್ದು ಸುಳ್ಳಲ್ಲ.

Advertisement

ಇದನ್ನೂ ಓದಿ:ಕಲ್ಲಿದ್ದಲು ಕೊರತೆ: ಸಂಕಷ್ಟದಲ್ಲಿ ಇಂಧನ ಕ್ಷೇತ್ರ

ಸ್ಕೋರ್‌ ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌
ಎವಿನ್‌ ಲೆವಿಸ್‌ ಎಲ್‌ಬಿಡಬ್ಲ್ಯು ಬಿ ಬುಮ್ರಾ 24
ಯಶಸ್ವಿ ಜೈಸ್ವಾಲ್‌ ಸಿ ಕಿಶನ್‌ ಬಿ ಕೋಲ್ಟರ್‌ ನೈಲ್‌ 12
ಸಂಜು ಸ್ಯಾಮ್ಸನ್‌ ಸಿ ಜಯಂತ್‌ ಬಿ ನೀಶಮ್‌ 3
ಶಿವಂ ದುಬೆ ಬಿ ನೀಶಮ್‌ 3
ಗ್ಲೆನ್‌ ಫಿಲಿಪ್ಸ್‌ ಬಿ ಕೋಲ್ಟರ್‌ ನೈಲ್‌4
ಮಿಲ್ಲರ್‌ ಎಲ್‌ಬಿಡಬ್ಲ್ಯು ಬಿ ಕೋಲ್ಟರ್‌ ನೈಲ್‌15
ತೇವಟಿಯಾ ಸಿ ಕಿಶನ್‌ ಬಿ ನೀಶಮ್‌ 12
ಶ್ರೇಯಸ್‌ ಗೋಪಾಲ್‌ ಸಿ ಕಿಶನ್‌ ಬಿ ಬುಮ್ರಾ 0
ಚೇತನ್‌ ಸಕಾರಿಯ ಬಿ ಕೋಲ್ಟರ್‌ ನೈಲ್‌6
ಕುಲದೀಪ್‌ ಯಾದವ್‌ ಔಟಾಗದೆ 0
ಮುಸ್ತಫಿಜರ್‌ ರೆಹಮಾನ್‌ ಔಟಾಗದೆ 8
ಇತರ 3
ಒಟ್ಟು (9 ವಿಕೆಟಿಗೆ) 90
ವಿಕೆಟ್‌ ಪತನ:1-27, 2-41,-3-41, 4-48, 5-50, 6-71, 7-74, 8-76, 9-82.
ಬೌಲಿಂಗ್‌; ಟ್ರೆಂಟ್‌ ಬೌಲ್ಟ್ 4-0-24-0
ಜಯಂತ್‌ ಯಾದವ್‌ 2-0-17-0
ಜಸ್‌ಪ್ರೀತ್‌ ಬುಮ್ರಾ 4-0-14-2
ನಥನ್‌ ಕೋಲ್ಟರ್‌ ನೈಲ್‌ 4-0-14-4
ಜೇಮ್ಸ್‌ ನೀಶಮ್‌ 4-0-12-3
ಕೈರನ್‌ ಪೊಲಾರ್ಡ್‌ 2-0-9-0

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಜೈಸ್ವಾಲ್‌ ಬಿ ಸಕಾರಿಯ 22
ಇಶಾನ್‌ ಕಿಶನ್‌ ಔಟಾಗದೆ 50
ಸೂರ್ಯಕುಮಾರ್‌ ಸಿ ಲೊನ್ರೋರ್‌ ಬಿ ಮುಸ್ತಫಿಜರ್‌ 13
ಹಾರ್ದಿಕ್‌ ಪಾಂಡ್ಯ ಔಟಾಗದೆ 5
ಇತರ 4
ಒಟ್ಟು (8.2 ಓವರ್‌ಗಳಲ್ಲಿ 2 ವಿಕೆಟಿಗೆ) 94
ವಿಕೆಟ್‌ ಪತನ:1-23, 2-56.
ಬೌಲಿಂಗ್‌;
ಮುಸ್ತಫಿಜರ್‌ ರೆಹಮಾನ್‌ 2.2-0-32-1
ಚೇತನ್‌ ಸಕಾರಿಯ 3-1-36-1
ಶ್ರೇಯಸ್‌ ಗೋಪಾಲ್‌ 1-0-9-0
ಕುಲದೀಪ್‌ ಯಾದವ್‌ 2-0-16-0

Advertisement

Udayavani is now on Telegram. Click here to join our channel and stay updated with the latest news.

Next