ಮುಂಬಯಿ : ಸಾಗರೋತ್ತರ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕತೆ ತೋರಿ ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 162 ಅಂಕಗಳ ಉತ್ತಮ ಏರಿಕೆಯನ್ನು ದಾಖಲಿಸಿತು.
ಆದರೆ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ ತನ್ನ ಆರಂಭಿಕ ಗಳಿಕೆಯ ಬಹುಪಾಲನ್ನು ಬಿಟ್ಟುಕೊಟ್ಟು 47.98 ಅಂಕಗಳಿಗೆ ಇಳಿದು 29,470.37 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತ ವಾಗಿತ್ತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 15.80 ಅಂಕಗಳ ಮಟ್ಟಕ್ಕೆ ಇಳಿದು 9,152.20 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್, ಸನ್ ಫಾರ್ಮಾ, ಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಹೆಚ್ಚು ಕ್ರಿಯಾಶೀಲವಾಗಿದ್ದವು.
ಅಂತೆಯೇ ರಿಲಯನ್ಸ್, ಭಾರ್ತಿ ಏರ್‌ಟೆಲ್, ಒಎನ್‌ಜಿಸಿ, ಟೆಕ್ ಮಹೀಂದ್ರ ಮತ್ತು ಎನ್‌ಟಿಪಿಸಿ ಟಾಪ್ ಗೇನರ್ ಎನಿಸಕೊಂಡವು.
ಸನ್ ಫಾರ್ಮಾ, ಸಿಪ್ಲಾ, ಗ್ರಾಸಿಂ, ಎಸಿಸಿ ಮತ್ತು ಎಚ್‌ಡಿಎಫ್ಸಿ ಟಾಪ್ ಲೂಸರ್ ಎನಿಸಿಕೊಂಡವು.