Advertisement

ವಾಮಂಜೂರು ಹದಿನಾರು ಸಮಸ್ತರ ಸಭಾ ಮುಂಬಯಿ: ಧಾರ್ಮಿಕ ಕಾರ್ಯಕ್ರಮ

04:28 PM Jul 15, 2017 | |

ಮುಂಬಯಿ: ವಾಮಂಜೂರು ಹದಿನಾರು ಸಮಸ್ತರ ಸಭಾ ಮುಂಬಯಿ ಇದರ ಮಾಹಿಮ್‌-ತೈಕಾಲ್‌ವಾಡಿ ಆರ್‌. ಕೆ. ಬಿಲ್ಡಿಂಗ್‌ನಲ್ಲಿರುವ ನವೀಕೃತ ಕಚೇರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜು. 9ರಂದು ಜರಗಿತು.

Advertisement

ವಾಮಂಜೂರು ಹದಿನಾರು ಸಮಸ್ತರ ಸಭಾ ಮುಂಬಯಿ ಇದರ ಅಧ್ಯಕ್ಷ ಈಶ್ವರ್‌ ಕೆ. ಐಲ್‌ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳು ನೆರವೇರಿದವು. ಆನಂತರ ಈಶ್ವರ್‌ ಐಲ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಹಿಳಾ ಸದಸ್ಯೆಯರ ಬೇಡಿಕೆಯ ಮೇರೆಗೆ ಅವರು ಸಮಾಜಮುಖೀ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ಧೇಶದಿಂದ ಮಹಿಳಾ ವಿಭಾಗವನ್ನು ಸ್ಥಾಪಿಸಲು ನಿರ್ಣಯಿಸಲಾಯಿತು.

ಸಭೆಯಲ್ಲಿ ಮಹಿಳಾ ವಿಭಾಗದ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ನೂತನ ಕಾರ್ಯಾಧ್ಯಕ್ಷೆಯಾಗಿ ರೇವತಿ ಐ. ಐಲ್‌, ಉಪ ಕಾರ್ಯಾಧ್ಯಕ್ಷೆಯಾಗಿ ಸುನಂದಾ ಎನ್‌. ಐಲ್‌, ಗೌರವ ಕಾರ್ಯದರ್ಶಿಯಾಗಿ ಜಯಂತಿ ಎಸ್‌. ಐಲ್‌, ಜತೆ ಕಾರ್ಯದರ್ಶಿಯಾಗಿ ಚಂಚಲಾ ಎಸ್‌. ಉದ್ಯಾವರ, ಕೋಶಾಧಿಕಾರಿಯಾಗಿ ಧನ್ಯಶ್ರೀ ಡಿ. ಐಲ್‌, ಜತೆ ಕೋಶಾಧಿಕಾರಿಯಾಗಿ ಸುಜಾತಾ ಆರ್‌. ಐಲ್‌ ಅವರನ್ನು ನೇಮಿಸಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯೆಯರನ್ನಾಗಿ ಯಶೋದಾ ಆರ್‌. ಬಟ್ಟಪಾಡಿ, ಲಕ್ಷ್ಮೀ ವೈ. ಕೆ., ಶೋಭಾ ಎನ್‌. ಬತ್ತೇರಿ, ಸುನಂದಾ ಟಿ. ಐಲ್‌, ಮೀನಾಕ್ಷೀ ಎ. ಐಲ್‌, ದಯಾವತಿ ಎಸ್‌. ವಾಮಂಜೂರು, ಯಶೋದಾ ಡಿ. ಕುಂಬ್ಳೆ, ಶಾಲಿನಿ ಯು. ಐಲ್‌, ಸಂಧ್ಯಾ ಎ. ಸಾಗರ್‌ ಅವರನ್ನು ಆಯ್ಕೆಮಾಡಲಾಯಿತು.

ನವೀಕೃತ ಕಚೇರಿಯ ಉಸ್ತುವಾರಿ ವಹಿಸಿದ್ದ ದಾನಿ ಶ್ರೀಕಾಂತ್‌ ಕೆ. ಉಚ್ಚಿಲ್‌ ಅವರನ್ನು ಪುಷ್ಪಗುತ್ಛ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಈಶ್ವರ ಐಲ್‌ ಅವರು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಸಂಸ್ಥೆಯ ಸಮಾಜಪರ ಕಾರ್ಯಗಳಲ್ಲಿ ಭಾಗವಹಿಸಬೇಕು. ಊರಿನ ದೈವಸ್ಥಾನದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಅಲ್ಲದೆ ಸಂಸ್ಥೆಯ ವಾರ್ಷಿಕ ಮಹಾಸಭೆಯನ್ನು ಆ.13ರಂದು ನಡೆಸಲಾಗುವುದು ಎಂದರು.

Advertisement

ಕಾರ್ಯಕ್ರಮದಲ್ಲಿ ಯಶಸ್ಸಿಗೆ ಸಹಕರಿಸಿದ ಪುರುಷೋತ್ತಮ ಕೆ. ಐಲ್‌, ಕೃಷ್ಣ ಕುಮಾರ್‌ ಆರ್‌. ಐಲ್‌ ಅವರನ್ನು ಗೌರವಿಸಲಾಯಿತು. ವಿಶೇಷ ಅತಿಥಿಗಳಾಗಿ ಪಾಲ್ಗೊಂಡ ಕಮಲಾಕ್ಷ ಸಿ. ಕೋಟೆಕಾರ್‌, ಕಿಶೋರ್‌ ಎಸ್‌. ಉದ್ಯಾವರ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಯಶ್ವಂತ್‌ ಎ. ಕೆ. ವಂದಿಸಿದರು. ಉಪಾಧ್ಯಕ್ಷರಾದ ಪುರುಷೋತ್ತಮ ಕೆ. ಐಲ್‌, ಹಿರಿಯ ಸದಸ್ಯರಾದ ಭಾಸ್ಕರ್‌ ಆರ್‌. ಐಲ್‌ ಹಾಗೂ ಸಂಸ್ಥೆಯ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮವಾಗಿ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆಯು ಡೊಂಬಿವಲಿಯ ಗಣೇಶ್‌ ಮಯ್ಯ ಅವರು ನೆರವೇರಿಸಿದರು. ಪೂಜಾ ಕಾರ್ಯದ ಯಜಮಾನತ್ವವನ್ನು ರಾಮಪ್ಪ ಎಸ್‌. ಐಲ್‌ ಹಾಗೂ ರೂಪಾ ಆರ್‌. ಐಲ್‌ ದಂಪತಿ ವಹಿಸಿದ್ದರು.  ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. 

  ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next