ಮುಂಬಯಿ : ನಿರಂತರ ಎರಡನೇ ದಿನವೂ ನಷ್ಟದ ಹಾದಿಯಲ್ಲಿ ಪಯಣಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 97.62 ಅಂಕಗಳ ನಷ್ಟದೊಂದಿಗೆ 28,901.94 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಪಂಚ ರಾಜ್ಯ ಚುನಾವಣಾ ಫಲಿತಾಂಶ ಕುರಿತಾದ ಜನಾಭಿಪ್ರಾಯ ಪ್ರಕಟನೆಗೆ ಮುನ್ನವೇ ಎಚ್ಚರಿಕೆ ನಡೆ ತೋರಿದ ಮುಂಬಯಿ ಶೇರು, ಉತ್ತರ ಪ್ರದೇಶದಲ್ಲಿ ಅತಂತ್ರ ವಿಧಾನ ಸಭೆ ಏರ್ಪಡುವ ಸಂಭವನೀಯತೆಯನ್ನು ಕಂಡುಕೊಂಡಿರುವುದಾಗಿ ತಿಳಿಯಲಾಗಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22.60 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 8,924.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಬಾಶ್, ಎಸ್ ಬ್ಯಾಂಕ್, ಝೀ ಎಂಟರ್‌ಟೇನ್‌ಮೆಂಟ್, ಈಶರ್ ಮೋಟರ್, ಕೋಟಕ್ ಮಹೀಂದ್ರ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು.
ಇದೇ ವೇಳೆ ರಿಲಯನ್ಸ್, ಇನ್‌ಪೋಸಿಸ್, ಐಡಿಯಾ ಸೆಲ್ಯುಲರ್, ಟಾಟಾ ಸ್ಟೀಲ್, ಒಎನ್‌ಜಿಸಿ, ಟೆಕ್ ಮಹೀಂದ್ರ, ಮಹೀಂದ್ರ ಆ್ಯಂಡ್ ಮಹೀಂದ್ರ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಇಂದಿನ ವಹಿವಾಟಿನಲ್ಲಿ 1,758 ಶೇರುಗಳು ಹಿನ್ನಡೆಗೆ ಗುರಿಯಾದವು; 1,069 ಶೇರುಗಳು ಮುನ್ನಡೆ ಕಂಡವು.