Advertisement

2 ವರ್ಷಗಳ ಗರಿಷ್ಠ ಮಟ್ಟಕ್ಕೇರಿದ ಮುಂಬಯಿ ಶೇರು, 496 ಅಂಕ ಏರಿಕೆ

04:12 PM Mar 14, 2017 | udayavani editorial |

ಮುಂಬಯಿ : ಭಾರತೀಯ ಜನತಾ ಪಕ್ಷ ಈಚಿನ ಪಂಚ ರಾಜ್ಯ ಚುನಾವಣೆಗಳಲ್ಲಿ ಸಾಧಿಸಿದ ಪ್ರಚಂಡ ಜಯದ ಬಲದಲ್ಲಿ ಇಂದು ಮಂಗಳವಾರದ ವಹಿವಾಟನ್ನು 496 ಅಂಕಗಳ ಭರ್ಜರಿ ಏರಿಕೆಯೊಂದಿಗೆ ಮುಗಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ, ಆ ಮೂಲಕ ಎರಡು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಇದೇ ರಾಷ್ಟ್ರೀಯ ಶೇರು ಮಾರುಕಟ್ಟೆಯ  ನಿಫ್ಟಿ ಸೂಚ್ಯಂಕ 9,000 ಅಂಕಗಳ ಗಡಿಯನ್ನು ದಾಟಿ ವಿಜೃಂಭಿಸಿದೆ.

Advertisement

ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,684 ಶೇರುಗಳು ಮುನ್ನಡೆ ಸಾಧಿಸಿದರೆ 1,167 ಶೇರುಗಳು ಹಿನ್ನಡೆಗೆ ಗುರಿಯಾದವು; 198 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.

ಸೆನ್ಸೆಕ್ಸ್‌ 496.40 ಅಂಕಗಳ ಏರಿಕೆಯೊಂದಿಗೆ 29,442.63 ಅಂಕಗಳ ಮಟ್ಟದಲ್ಲಿ ಹಾಗೂ ನಿಫ್ಟಿ 140.25 ಅಂಕಗಳ ಏರಿಕೆಯೊಂದಿಗೆ 9,074.80 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿದವು.

ಇಂಟೆರಿಮ್‌ ಡಿವಿಡೆಂಡ್‌ ಘೋಷಣೆಯನ್ನು ಅನುಸರಿಸಿ ಶೇ.7ರಷ್ಟು ಕುಸಿದ ಕೋಲ್‌ ಇಂಡಿಯಾ ಶೇರು ಆ ಮೂಲಕ ತನ್ನ ಧಾರಣೆಯನ್ನು ಸರಿದೂಗಿಸಿಕೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next