Advertisement

ವೈರಲ್ ಆಗ್ತಿದೆ ಮುಂಬೈ ಪೊಲೀಸರ ಟ್ವೀಟ್

09:38 AM Jan 14, 2019 | Team Udayavani |

ಮುಂಬೈ: ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ಸದ್ಯ ತಂಡದಿಂದ ತಾತ್ಕಾಲಿಕ ಅಮಾನತು ಆಗಿರುವ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್.ರಾಹುಲ್ ಗೆ ಮತ್ತೊಂದು ಸಂಕಷ್ಟ ಎರಗಿದೆ. ಮುಂಬೈ ಪೊಲೀಸರು ಈ ಕ್ರಿಕೆಟಿಗರ ವಿರುದ್ಧ ಮಾಡಿರುವ ಟ್ವೀಟ್ ಈಗ ಭಾರಿ ವೈರಲ್ ಆಗುತ್ತಿದೆ. 

Advertisement

ಮುಂಬೈ ಪೊಲೀಸ್ ಅಧಿಕೃತ ಟ್ವಿಟ್ಟರ್ ನಲ್ಲಿ, ಮೈದಾನದಲ್ಲಿ ಹೆಚ್ಚು ರನ್ ಗಳಿಸಬೇಕು, ಮೈದಾನದ ಹೊರಗಡೆ ಮಹಿಳೆಯರನ್ನು ಹೆಚ್ಚು ಗೌರವ ಕೊಡಬೇಕು ಹಾಗಾದಲ್ಲಿ ಮಾತ್ರ ಉತ್ತಮ ಆಟಗಾರನಾಗಲು ಸಾಧ್ಯ ಎಂದು ಪೋಸ್ಟ್ ಮಾಡಿದೆ.  ಜಂಟಲ್ ಮ್ಯಾನ್  ಯಾವಾಗಲೂ ಜಂಟಲ್ ಮ್ಯಾನ್, ಯಾವಾಗಲೂ ಮತ್ತು ಎಲ್ಲೆಡೆಯೂ ಎಂದು ಕ್ಯಾಪ್ಶನ್ ನೀಡಿದೆ. 


ಇತ್ತೀಚೆಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಮಾತನಾಡುವ ಉತ್ಸಾಹದಲ್ಲಿ ಮಹಿಳೆಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next