ಮುಂಬಯಿ: ಮಂತ್ರಾಲಯ ಸೇರಿದಂತೆ ಪ್ರಮುಖ ವ್ಯಾಪಾರ ಕೇಂದ್ರಗಳನ್ನು ಹೊಂದಿರುವ ನಾರಿಮನ್ ಪಾಯಿಂಟ್ ಅನ್ನು ಒಳಗೊಂಡ ದಕ್ಷಿಣ ಮುಂಬಯಿಯ ಪ್ರಮುಖ ಭಾಗಗಳು ಸಮುದ್ರ ಮಟ್ಟ ಏರಿಕೆಯಿಂದಾಗಿ 2050ರ ವೇಳೆಗೆ ಮುಳುಗಲಿದೆ ಎಂದು ಮುಂಬಯಿ ನಗರಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರ ಉಪಸ್ಥಿತಿಯಲ್ಲಿ ಮುಂಬಯಿ ಹವಾಮಾನ ಕ್ರಿಯಾ ಯೋಜನೆ ಮತ್ತು ಅದರ ವೆಬ್‌ಸೈಟ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಹವಾಮಾನ ಬದಲಾವಣೆಯಿಂದಾಗಿ ದಕ್ಷಿಣ ಮುಂಬಯಿಯ ಶೇ. 70ರಷ್ಟು ಪ್ರದೇಶಗಳು ನೀರಿನಲ್ಲಿ ಮುಳುಗಲಿದೆ. ಪ್ರಕೃತಿ ಎಚ್ಚರಿಸುತ್ತಿದೆ, ಜನರು ಎಚ್ಚೆತ್ತುಗೊಳ್ಳದಿದ್ದರೆ ಪರಿಸ್ಥಿತಿ ಅಪಾಯಕಾರಿಯಾಗಿ ಬದಲಾಗುತ್ತದೆ. ಕಫ್‌ಪರೇಡ್, ನಾರಿಮನ್ ಪಾಯಿಂಟ್ ಮತ್ತು ಮಂತ್ರಾಲಯದಂತಹ ಶೇ. 80ರಷ್ಟು ಪ್ರದೇಶಗಳು ಕಣ್ಮರೆಯಾಗಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ರಾಷ್ಟ್ರೀಯ ಆಸ್ತಿಮಾರಾಟಕ್ಕಿಟ್ಟಿದ್ದೇ ಮೋದಿ ಸಾಧನೆ : ಎಚ್.ಕೆ.ಪಾಟೀಲ
ಮೊದಲು ನಾವು ಹಿಮ ಕರಗುವ ಹವಾಮಾನ ಬದಲಾ ವಣೆಯ ಘಟನೆಗಳ ಬಗ್ಗೆ ಕೇಳುತ್ತಿದ್ದೆವು, ಆದರೆ ಅದು ನೇರ ವಾಗಿ ನಮ್ಮ ಮೇಲೆ ಪರಿಣಾಮ ಬೀರಲಿಲ್ಲ.
ಆದರೆ ಈಗ ಅದು ನಮ್ಮ ಮನೆ ಬಾಗಿಲಿಗೆ ಬಂದಿದೆ ಎಂದು ಅವರು ಹೇಳಿದರು. ಕಳೆದ ವರ್ಷ 129 ವರ್ಷಗಳಲ್ಲಿ ಮೊದಲ ಬಾರಿಗೆ ಚಂಡಮಾರುತ (ನಿಸರ್ಗ) ಮುಂಬಯಿಗೆ ಅಪ್ಪಳಿಸಿತು. ಅನಂತರ ಕಳೆದ 15 ತಿಂಗಳಲ್ಲಿ ಮೂರು ಚಂಡಮಾರುತಗಳು ಸಂಭವಿಸಿವೆ ಎಂದು ಚಾಹಲ್ ನೆನಪಿಸಿದರು. 2020ರ ಆಗಸ್ಟ್ 5ರಂದು ನಾರಿಮನ್ ಪಾಯಿಂಟ್ ಪ್ರದೇಶದಲ್ಲಿ ಸುಮಾರು 5 ರಿಂದ 5.5 ಅಡಿಗಳಷ್ಟು ನೀರು ಸಂಗ್ರಹವಾಯಿತು. ಆ ದಿನ ಯಾವುದೇ ಚಂಡಮಾರುತದ ಎಚ್ಚರಿಕೆ ಇರಲಿಲ್ಲ, ಆದರೆ ನಿಯತಾಂಕಗಳನ್ನು ಪರಿಗಣಿಸಿ ಇದು ಚಂಡಮಾರುತ ವಾಗಿದೆ ಎಂದು ಚಾಹಲ್ ಹೇಳಿದರು.