Advertisement

ಗೆದ್ದು ಹೊರಬಿದ್ದ ಮುಂಬೈ ಇಂಡಿಯನ್ಸ್‌

11:50 PM Oct 08, 2021 | Team Udayavani |

ಅಬುಧಾಬಿ: ಸನ್‌ರೈಸರ್ ಹೈದರಾಬಾದ್‌ ವಿರುದ್ಧದ ನಾನಾ ಲೆಕ್ಕಾಚಾರದ ಅಂತಿಮ ಲೀಗ್‌ ಪಂದ್ಯದಲ್ಲಿ 42 ರನ್ನುಗಳ ಜಯ ಸಾಧಿಸಿದರೂ ಹಾಲಿ ಚಾಂಪಿಯನ್‌ ಮುಂಬೈ ತಂಡದ 4ನೇ ಸ್ಥಾನದ ಕನಸು ಭಗ್ನಗೊಂಡಿದೆ. ಅಂಕ ಸಮನಾದರೂ ರನ್‌ರೇಟ್‌ ಲೆಕ್ಕಾಚಾರದಲ್ಲಿ ಅದು ಕೆಕೆಆರ್‌ಗಿಂತ ಹಿಂದುಳಿದ ಕಾರಣ ಪ್ಲೇ ಆಫ್‌ ರೇಸ್‌ನಿಂದ ಹೊರಬಿತ್ತು. ರವಿವಾರದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಡೆಲ್ಲಿ-ಚೆನ್ನೈ ಮುಖಾಮುಖಿ ಆಗಲಿವೆ.

Advertisement

ಪ್ರಚಂಡ ಆಟವಾಡಿದ ಮುಂಬೈ 9 ವಿಕೆಟಿಗೆ 235 ರನ್‌ ರಾಶಿ ಹಾಕಿದರೆ, ಹೈದರಾಬಾದ್‌ 8 ವಿಕೆಟಿಗೆ 193ರ ತನಕ ಬಂದು ಶರಣಾಯಿತು. ಉಸ್ತುವಾರಿ ನಾಯಕ ಮನೀಷ್‌ ಪಾಂಡೆ ಅಜೇಯ 69, ಆರಂಭಿಕ ರಾದ ಜಾಸನ್‌ ರಾಯ್‌ 34, ಅಭಿಷೇಕ್‌ ಶರ್ಮ 33, ಪ್ರಿಯಂ ಗರ್ಗ್‌ 29 ರನ್‌ ಬಾರಿಸಿದರು.

ಇಶಾನ್‌, ಸೂರ್ಯ ಬ್ಯಾಟಿಂಗ್‌ ಅಬ್ಬರಎಡಗೈ ಆರಂಭಕಾರ ಇಶಾನ್‌ ಕಿಶನ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಮುಂಬೈ ಸರದಿಯ ಹೈಲೈಟ್‌ ಆಗಿತ್ತು. ಕೊನೆಯಲ್ಲಿ ಸೂರ್ಯಕುಮಾರ್‌ ಯಾದವ್‌ ಮುನ್ನುಗ್ಗಿ ಬೀಸಿದರು.

ಮುಂಬೈ ಬ್ಯಾಟಿಂಗ್‌ ಆರ್ಭಟಕ್ಕೆ ಕಿಚ್ಚು ಹೊತ್ತಿಸಿದ್ದೇ ಇಶಾನ್‌ ಕಿಶನ್‌. ಎದುರಿಸಿದ ಮೊದಲ ಎಸೆತವನ್ನೇ ಅವರು ಸಿಕ್ಸರ್‌ಗೆ ಎತ್ತಿದರು. ಅವರು ಬಡಿದಟ್ಟಿದ್ದೆಲ್ಲ ಬೌಂಡರಿ ಗೆರೆ ದಾಟತೊಡಗಿತು. 4ನೇ ಓವರ್‌ನಲ್ಲೇ ತಂಡದ ಮೊತ್ತ 50ರ ಗಡಿ ದಾಟಿತು. ಕೇವಲ 16 ಎಸೆತಗಳಲ್ಲಿ ಇಶಾನ್‌ ಕಿಶನ್‌ ಅರ್ಧ ಶತಕ ಪೂರೈಸಿದರು. ಆಗ ರೋಹಿತ್‌ 12ರಲ್ಲಿದ್ದರು.

6ನೇ ಓವರ್‌ ಎಸೆಯಲು ಬಂದ ರಶೀದ್‌ ಖಾನ್‌ ಮುಂಬೈ ಕಪ್ತಾನನ ವಿಕೆಟ್‌ ಕಿತ್ತು ಮೊದಲ ಯಶಸ್ಸು ಕೊಡಿಸಿದರು. ರೋಹಿತ್‌ ಗಳಿಕೆ 18 ರನ್‌ (13 ಎಸೆತ, 3 ಬೌಂಡರಿ). ಪವರ್‌ ಪ್ಲೇಯಲ್ಲಿ ಮುಂಬೈ 83 ರನ್‌ ರಾಶಿ ಹಾಕಿತು. ಅರ್ಧ ಹಾದಿ ಕ್ರಮಿಸುವಾಗ ಮೊತ್ತ 131ಕ್ಕೆ ಏರಿತ್ತು. ಆಗಷ್ಟೇ ಇಶಾನ್‌ ಕಿಶನ್‌ ವಿಕೆಟನ್ನು ಉಮ್ರಾನ್‌ ಮಲಿಕ್‌ ಉರುಳಿಸಿದ್ದರು. ಇಶಾನ್‌ ಕೇವಲ 32 ಎಸೆತಗಳಿಂದ 84 ರನ್‌ ಬಾರಿಸಿದ್ದರು. ಇದು 11 ಬೌಂಡರಿ, 4 ಸಿಕ್ಸರ್‌ಗಳ ಸಿಡಿತಕ್ಕೆ ಸಾಕ್ಷಿಯಾಯಿತು.

Advertisement

ಇದನ್ನೂ ಓದಿ:ಆರ್‌ಸಿಬಿ-ಕೆಕೆಆರ್‌ ಎಲಿಮಿನೇಟರ್‌ ಪಂದ್ಯ

ಯಾದವ್‌ ಕೊಡುಗೆ 40 ಎಸೆತಗಳಿಂದ 82 ರನ್‌. ಕೊನೆಯ ಓವರ್‌ನಲ್ಲಿ ಹೋಲ್ಡರ್‌ ಈ ವಿಕೆಟ್‌ ಹಾರಿಸಿದರು. ಹಾರ್ದಿಕ್‌ ಪಾಂಡ್ಯ ಭಡ್ತಿ ಪಡೆದು ವನ್‌ಡೌನ್‌ನಲ್ಲಿ ಬಂದರೂ ಪ್ರಯೋಜನವಾಗಲಿಲ್ಲ. ಕೇವಲ 10 ರನ್‌ ಮಾಡಿ ವಾಪಸಾದರು. ಪೊಲಾರ್ಡ್‌ 13ಕ್ಕೆ ಆಟ ಮುಗಿಸಿದರು. ನೀಶಮ್‌ ಮೊದಲ ಎಸೆತಕ್ಕೇ ವಿಕೆಟ್‌ ಒಪ್ಪಿಸಿದರು. ಅಭಿಷೇಕ್‌ ಶರ್ಮ ಸತತ ಎಸೆತಗಳಲ್ಲಿ ಇವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ನಬಿ ಬಿ ರಶೀದ್‌ 18
ಇಶಾನ್‌ ಕಿಶನ್‌ ಸಿ ಸಾಹಾ ಬಿ ಮಲಿಕ್‌ 84
ಹಾರ್ದಿಕ್‌ ಸಿ ರಾಯ್‌ ಬಿ ಹೋಲ್ಡರ್‌ 10
ಪೊಲಾರ್ಡ್‌ ಸಿ ರಾಯ್‌ ಬಿ ಅಭಿಷೇಕ್‌ 13
ಸೂರ್ಯಕುಮಾರ್‌ ಸಿ ನಬಿ ಬಿ ಹೋಲ್ಡರ್‌ 82
ಜೇಮ್ಸ್‌ ನೀಶಮ್‌ ಸಿ ನಬಿ ಬಿ ಅಭಿಷೇಕ್‌ 0
ಕೃಣಾಲ್‌ ಸಿ ನಬಿ ಬಿ ರಶೀದ್‌ 9
ಕೋಲ್ಟರ್‌ನೆçಲ್‌ ಸಿ ನಬಿ ಬಿ ಹೋಲ್ಡರ್‌ 3
ಪೀಯೂಷ್‌ ಚಾವ್ಲಾ ಸಿ ಸಮದ್‌ ಬಿ ಹೋಲ್ಡರ್‌ 0
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 5
ಟ್ರೆಂಟ್‌ ಬೌಲ್ಟ್ ಔಟಾಗದೆ 0
ಇತರ 11
ಒಟ್ಟು (9 ವಿಕೆಟಿಗೆ) 235
ವಿಕೆಟ್‌ ಪತನ:1-80, 2-113, 3-124, 4-151, 5-151, 6-184, 7-206, 8-230, 9-230.
ಬೌಲಿಂಗ್‌; ಮೊಹಮ್ಮದ್‌ ನಬಿ 3-0-33-0
ಸಿದ್ಧಾರ್ಥ್ ಕೌಲ್‌ 4-0-56-0
ಜಾಸನ್‌ ಹೋಲ್ಡರ್‌ 4-0-52-4
ಉಮ್ರಾನ್‌ ಮಲಿಕ್‌ 4-0-48-1
ರಶೀದ್‌ ಖಾನ್‌ 4-0-40-2
ಅಭಿಷೇಕ್‌ ಶರ್ಮ 1-0-4-2

Advertisement

Udayavani is now on Telegram. Click here to join our channel and stay updated with the latest news.

Next