ಮುಂಬಯಿ : ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಮುಂಬೈ ಇಂಡಿಯನ್ಸ್ ಗೆ ಭಾನುವಾರ ಮಹತ್ವದ ದಿನವಾಗಿದ್ದು, ಮುಂಬೈ ಫ್ರಾಂಚೈಸಿಯು ಶಿಕ್ಷಣ ಮತ್ತು ಎಲ್ಲರಿಗೂ ಕ್ರೀಡೆ (ESA) ದಿನದ ಗೌರವಾರ್ಥವಾಗಿ ತಮ್ಮ ಮಹಿಳಾ ತಂಡದ ವಿಶೇಷ ಜೆರ್ಸಿಗಳನ್ನು ಧರಿಸಿ ಆಡುತ್ತಿದೆ.
ಕೇವಲ ಜೆರ್ಸಿಗಳ ಬದಲಾವಣೆ ಮಾತ್ರವಲ್ಲದೆ ESA ಉಪಕ್ರಮದ ಭಾಗವಾಗಿ 36 ಎನ್‌ಜಿಒಗಳಿಂದ ಹುಡುಗಿಯರನ್ನು ಮತ್ತು ಸ್ಟ್ಯಾಂಡ್‌ಗಳಿಂದ ತಂಡಗಳನ್ನು ಹುರಿದುಂಬಿಸುವ 200 ವಿಶೇಷ ಮಕ್ಕಳನ್ನು ಪ್ರೇರೇಪಿಸುವ ಮತ್ತು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. 19,000 ಕ್ಕೂ ಹೆಚ್ಚು ಯುವತಿಯರು ಆಟಗಾರರಿಗೆ ಬೆಂಬಲವಾಗಿ ತಮ್ಮ ಧ್ವನಿಯನ್ನು ಪ್ರೇಕ್ಷಕರ ಗ್ಯಾಲರಿಯಿಂದ ಮೊಳಗಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಆಟಗಾರರು ಸಹ ಕೆಕೆಆರ್ ವಿರುದ್ಧದ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿ ಹಾಜರಿದ್ದರು.
ಮುಂಬೈ ಇಂಡಿಯನ್ಸ್ ತಮ್ಮ ಅಭಿಮಾನಿಗಳಿಗೆ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಆರಂಭಿಕ ಆಟಗಾರ ಇಶಾನ್ ಕಿಶನ್ ಪಂದ್ಯಕ್ಕಾಗಿ ಹೊಸ ಜೆರ್ಸಿಯನ್ನು ಅನ್ಬಾಕ್ಸಿಂಗ್ ಮಾಡುವುದನ್ನು ಕಾಣಬಹುದಾಗಿದೆ.
ನೀತಾ ಎಂ. ಅಂಬಾನಿ ಸ್ವತಃ ಈವೆಂಟ್‌ನ ಮಹತ್ವದ ಬಗ್ಗೆ ವಿವರಿಸಿ “ಈ ವಿಶೇಷ ಪಂದ್ಯವು ಕ್ರೀಡೆಯಲ್ಲಿ ಮಹಿಳೆಯರ ಸಂಭ್ರಮಾಚರಣೆಯಾಗಿದೆ. ಈ ವರ್ಷ ಮೊದಲ ಮಹಿಳಾ ಪ್ರೀಮಿಯರ್ ಲೀಗ್‌ನೊಂದಿಗೆ ಭಾರತದ ಮಹಿಳಾ ಕ್ರಿಕೆಟಿಗರಿಗೆ ಒಂದು ಹೆಗ್ಗುರುತಾಗಿದೆ. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಕ್ರೀಡೆಯ ಹಕ್ಕನ್ನು ಎತ್ತಿ ತೋರಿಸಲು, ನಾವು ಈ ವರ್ಷದ ESA ಕಾರ್ಯಕ್ರಮವನ್ನು ಹೆಣ್ಣು ಮಗುವಿಗೆ ಅರ್ಪಿಸುತ್ತಿದ್ದೇವೆ! ಈ ಭಾನುವಾರ ಐಪಿಎಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಲೈವ್ ಆಗಿ ಆನಂದಿಸಲು ವಿವಿಧ ಎನ್‌ಜಿಒಗಳಿಂದ 19,000 ಹುಡುಗಿಯರನ್ನು ಕರೆತಂದಿರುವುದಕ್ಕೆ ರಿಲಯನ್ಸ್ ಫೌಂಡೇಶನ್ ಹೆಮ್ಮೆಪಡುತ್ತದೆ.” ಎಂದು ಹೇಳಿದ್ದಾರೆ.