Advertisement

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

05:11 PM Jul 04, 2024 | Team Udayavani |

ಮುಂಬೈ: ಐಸಿಸಿ ಟಿ20 ವಿಶ್ವಕಪ್ 2024 ಗೆದ್ದ ಭಾರತೀಯ ಪುರುಷರ ಕ್ರಿಕೆಟ್ ತಂಡ ತಾಯ್ನಾಡಿಗೆ ಮರಳಿದೆ. ಗುರುವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರೋಹಿತ್ ಬಳಗ ಬಳಿಕ ಐಟಿಸಿ ಮೌರ್ಯ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದೆ.

Advertisement

ಟೀಂ ಇಂಡಿಯಾ ಆಟಗಾರರು, ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಅವರು ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ನರೇಂದ್ರ ಮೋದಿ ಅವರಿಗೆ ಟೀಂ ಇಂಡಿಯಾ ಜೆರ್ಸಿಯನ್ನು ಕಾಣಿಕೆಯಾಗಿ ನೀಡಲಾಯಿತು.

ಇದಾದ ಬಳಿಕ ಟೀಂ ಇಂಡಿಯಾ ಮುಂಬೈಗೆ ತೆರಳಿದೆ. ಮುಂಬೈನಲ್ಲಿ ಸಂಜೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಲಿದೆ. ಆಟಗಾರರು ಮುಂಬೈಗೆ ಬರುವ ಮೊದಲು ಸಾವಿರಾರು ಮಂದಿ ಅಭಿಮಾನಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಸೇರಿದ್ದು, ನೆಚ್ಚಿನ ಆಟಗಾರರ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

ಈ ವೇಳೆ ಟೀಂ ಇಂಡಿಯಾ ಉಪ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಕ್ಷಮೆ ಕೇಳಿದ್ದಾರೆ. ಕಳೆದ ಐಪಿಎಲ್ ಸಮಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯನಾಗಿದ್ದ ಹಾರ್ದಿಕ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರ ಕಾರಣಕ್ಕೆ ಮುಂಬೈ ಅಭಿಮಾನಿ ಕ್ಷಮೆಯಾಚಿಸಿದ್ದಾರೆ.

ವಿಮಾನ ನಿಲ್ದಾಣ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳಾ ಅಭಿಮಾನಿ, “ಮೊದಲು ನಾನು ಹಾರ್ದಿಕ್ ಪಾಂಡ್ಯಗೆ ಕ್ಷಮಿಸಿ ಎಂದು ಹೇಳಲು ಬಯಸುತ್ತೇನೆ. ನಾನು ಅವರನ್ನು ಈ ಮೊದಲು ಏಕೆ ಟ್ರೋಲ್ ಮಾಡಿದೆ ಎಂದು ನನಗೆ ಗೊತ್ತಾಗುತ್ತಿಲ್ಲ. ನನ್ನನ್ನು ಕ್ಷಮಿಸಿ. ಫೈನಲ್ ನ ಕೊನೆಯ ಓವರ್ ಅದ್ಭುತವಾಗಿತ್ತು, ಅದಕ್ಕೆ ಧನ್ಯವಾದ. ನಾನೇಕೆ ನಿಮ್ಮ ಬಗ್ಗೆ ತಪ್ಪಾಗಿ ಹೇಳಿದ್ದೆ ಎಂದು ಅರ್ಥವಾಗುತ್ತಿಲ್ಲ, ಕ್ಷಮಿಸಿ” ಎಂದಿದ್ದಾರೆ.

Advertisement

ಇದನ್ನೂ ಓದಿ:ಚಪ್ರಿ ಎಂದಿದ್ದ ಜನರೇ ಇದೀಗ ಕೊಂಡಾಡುತ್ತಿದ್ದಾರೆ… : ಹಾರ್ದಿಕ್ ಯಶಸ್ಸಿನ ಕಥೆ

2024ರ ಐಪಿಎಲ್ ಗೆ ಮೊದಲು ಗುಜರಾತ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ವಾಪಾಸಾಗಿದ್ದರು. ಅಚ್ಚರಿಯ ಬೆಳವಣಿಗೆಯಲ್ಲಿ, ರೋಹಿತ್ ಅವರನ್ನು ಕೆಳಗಿಳಿಸಿ ಮುಂಬೈ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ನೀಡಲಾಗಿತ್ತು. ಇದು ಜನರನ್ನು ಕೆರಳಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಜನರು ಟೀಕೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next