Advertisement

ಮುಂಬೈ ಇಂಡಿಯನ್ಸ್‌: ದಶಮಾನ‌ ಸಂಭ್ರಮ

03:18 PM Apr 12, 2017 | |

ಮುಂಬಯಿ: ಐಪಿಎಲ್‌ ಎಂದೇ ವಿಶ್ವ ಖ್ಯಾತಿ ಗಳಿಸಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 10ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಜತೆಗೆ ವಿಶ್ವದ ಈ ಶ್ರೀಮಂತ ಕ್ರಿಕೆಟ್‌ ಲೀಗ್‌ನಲ್ಲಿ ಸತತವಾಗಿ ಪಾಲ್ಗೊಳ್ಳುತ್ತಲೇ ಬಂದ ಕೆಲವು ತಂಡಗಳಿಗೂ ಹತ್ತರ ದಶಮಾನದ ಸಂಭ್ರಮ. 

Advertisement

2008ರ ಆರಂಭಿಕ ಋತುವಿನಿಂದಲೇ ಇಲ್ಲಿ ಆಡುತ್ತ ಬಂದಿರುವ ತಂಡಗಳೆಂದರೆ ಮುಂಬೈ ಇಂಡಿಯನ್ಸ್‌, ಕೋಲ್ಕತಾ ನೈಟ್‌ರೈಡರ್, ರಾಯಲ್‌ ಚಾಲೆಂಜರ್ ಬೆಂಗಳೂರು, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌. ಈ 5 ತಂಡಗಳ ಪೈಕಿ ಮುಂಬೈ ಇಂಡಿಯನ್ಸ್‌ ತನ್ನ 10ನೇ ವರ್ಷದ ಐಪಿಎಲ್‌ ಸಂಭ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸಿತು.  ಸೋಮವಾರ ರಾತ್ರಿ ಫ್ರಾಂಚೈಸಿಯ ಮಾಲಕರಾದ ನೀತಾ ಅಂಬಾನಿ, ಮುಕೇಶ್‌ ಅಂಬಾನಿ ನಿವಾಸದಲ್ಲಿ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು. 

ಈ ಸಂದರ್ಭದಲ್ಲಿ ತಂಡಕ್ಕೆ ಅಮೋಘ ಸೇವೆ ಸಲ್ಲಿಸಿದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌, ಹರ್ಭಜನ್‌ ಸಿಂಗ್‌ ಮತ್ತು ಲಸಿತ ಮಾಲಿಂಗ ಅವರನ್ನು ಸಮ್ಮಾನಿಸಲಾಯಿತು. 
 
“ಕ್ರಿಕೆಟ್‌ ಮೇರಿ ಜಾನ್‌’ ಎಂಬ ವಿಶೇಷ ವೀಡಿಯೋ ಆಲ್ಬಂ ಜತೆಗೆ “10 ವರ್ಣರಂಜಿತ ವರ್ಷ’ಗಳಿಗೆ ಸಂಬಂಧಿಸಿದ ಪುಸ್ತಕವೊಂದನ್ನು ಈ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ತಂಡದ ಸಾಧನೆ, ಯಶಸ್ಸಿನ ಪಯಣ, ಕುತೂಹಲಕರ ಘಟನೆಗಳು, ಸಂದರ್ಶನಗಳು, ಮುಂಬೈ ಪರ ಈವರೆಗೆ ಆಡಿದ ಎಲ್ಲ ಆಟಗಾರರ ಪ್ರತಿಕ್ರಿಯೆಗಳನ್ನು ಇದು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next