Advertisement

ಬುಮ್ರಾ ಬೊಂಬಾಟ್ ಬೌಲಿಂಗ್ ಪರಾಕ್ರಮಕ್ಕೆ ತಲೆಬಾಗಿದ ರಾಯಲ್ಸ್

11:32 PM Oct 06, 2020 | Hari Prasad |

ಅಬುದಾಭಿ: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಪರಾಕ್ರಮಕ್ಕೆ ಬೆದರಿದ ರಾಜಸ್ಥಾನ ರಾಯಲ್ಸ್ ಇಂದಿನ IPL ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 57 ರನ್ ಗಳಿಂದ ಪರಾಜಯಗೊಂಡಿದೆ.

Advertisement

4 ವಿಕೆಟ್ ಕಿತ್ತ ವೇಗಿ ಜಸ್ಪ್ರೀತ್ ಬುಮ್ರಾ ಅವರು ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್ ಮನ್ ಗಳಿಗೆ ದುಸ್ವಪ್ನವಾಗಿ ಕಾಡಿದರು.

ಜಾಸ್ ಬಟ್ಲರ್ (70) ಮತ್ತು ಜೋಫ್ರಾ ಆರ್ಚರ್ (24) ಅವರ ಸ್ಪೋಟಕ ಬ್ಯಾಟಿಂಗ್ ಸಹ ರಾಯಲ್ಸ್ ತಂಡವನ್ನು ಗೆಲುವಿನ ದಡ ಸೇರಿಸಲಿಲ್ಲ.

ಅಂತಿಮವಾಗಿ ರಾಜಸ್ಥಾನ ರಾಯಲ್ಸ್ 18.1 ಓವರ್ ಗಳಲ್ಲಿ 136 ರನ್ ಗಳಿಗೆ ಆಲೌಟಾಗುವ ಮೂಲಕ 57 ರನ್ನುಗಳಿಂದ ಸೋಲೊಪ್ಪಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next