Advertisement

ಮುಂಬಯಿ:ಡಿಸೆಂಬರ್‌ನಲ್ಲಿ 50 ವರ್ಷದಲ್ಲಿಯೇ ಅಧಿಕ ಮಳೆ

01:13 PM Dec 07, 2017 | |

ಮುಂಬಯಿ: ಒಖಿ ಚಂಡಮಾರುತದ ಪರಿಣಾಮ ನಗರದಲ್ಲಿ  ಮಂಗಳವಾರ ಭಾರೀ ಮಳೆ ಸುರಿದಿದ್ದು  ಕಳೆದ  50 ವರ್ಷಗಳ ಅವಧಿಯಲ್ಲಿ  ನಗರದಲ್ಲಿ ದಾಖಲೆ ಪ್ರಮಾಣದಲ್ಲಿ  ಮಳೆಯಾಗಿವೆ. ಮಂಗಳವಾರದಂದು  ಕೇವಲ 12 ತಾಸುಗಳ  ಅವಧಿ ಯಲ್ಲಿ  ಭಾರತೀಯ ಹವಾಮಾನ ಇಲಾಖೆಯ  ಸಂತಾಕ್ರೂಜ್‌ ಸರ್ವೇಕ್ಷಣಾಲಯದಲ್ಲಿ  36 ಮಿ.ಮೀ. ಮಳೆ  ದಾಖಲಾಗಿದೆ. ಈ ಹಿಂದೆ ಅಂದರೆ 1967ರ ಡಿ. 12ರಂದು  31.4 ಮಿ.ಮೀ. ಮಳೆ  ಸುರಿದಿದ್ದುದು  ಈವರೆಗಿನ ದಾಖಲೆಯಾಗಿತ್ತು. 

Advertisement

ಒಖೀ ಚಂಡಮಾರುತ ಮಂಗಳವಾರದಂದು ನಗರವನ್ನು ಸಮೀಪ ಹಾದುಹೋದ  ಹಿನ್ನೆಲೆಯಲ್ಲಿ  ನಗರದಾದ್ಯಂತ  ಭಾರೀ ಗಾಳಿಮಳೆಯಾಗಿತ್ತು. ಇದರ  ಪರಿಣಾಮ ನಗರದಲ್ಲಿ  ತಾಪಮಾನದಲ್ಲಿ  ಭಾರೀ ಇಳಿಕೆ ಕಂಡುಬಂತು. 

ಸಂತಾಕ್ರೂಜ್‌ ಮತ್ತು ಕೊಲಾಬಾದಲ್ಲಿನ  ಹವಾಮಾನ ಇಲಾಖೆಯ ಸರ್ವೇಕ್ಷಣಾಲಯದಲ್ಲಿ  ಮಂಗಳ ವಾರದಂದು  ಸೋಮವಾರ  ದಾಖಲಾದ  ಗರಿಷ್ಠ ತಾಪಮಾನಕ್ಕಿಂತ  ಸುಮಾರು 10 ಡಿ.ಸೆ.ಗಳಷ್ಟು  ಕಡಿಮೆ  ತಾಪಮಾನ ದಾಖಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next