Advertisement

ಮುಂಬಯಿ : ವಿವಿಧ ಸಂಘಗಳ ಗುರುಪೂರ್ಣಿಮೆ ಆಚರಣೆ 

03:58 PM Jul 11, 2017 | Team Udayavani |

ಹೆಗ್ಗಡೆ ಸೇವಾ ಸಂಘ ಮುಂಬಯಿ 

Advertisement

ಮುಂಬಯಿ: ಹೆಗ್ಗಡೆ ಸಮಾಜ ಬಾಂಧವರ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿರುವ, ಇಂದಿನ ಆಧುನಿಕ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಸಂಸ್ಕಾರ, ಸಂಸ್ಕೃತಿಯ ತಿರುಳನ್ನು ಮರೆಯುವ ಯುವ ಜನಾಂಗಕ್ಕೆ ಭಾರತೀಯ ಪುರಾಣ, ಇತಿಹಾಸ, ಆದರ್ಶಗಳನ್ನು ಕತೆ-ಕೀರ್ತನೆಯ ಮೂಲಕ ತಿಳಿಯಪಡಿಸುವ ನಿಟ್ಟಿನಲ್ಲಿ ಹೆಗ್ಗಡೆ ಸೇವಾ ಸಂಘ ಮುಂಬಯಿ ವತಿಯಿಂದ ಜು. 9 ರಂದು ಅಪರಾಹ್ನ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಗುರುಪೂರ್ಣಿಮೆ ಮಹೋತ್ಸವ ಮತ್ತು ಹರಿಕಥಾಮೃತ ಕಾರ್ಯಕ್ರಮವನ್ನು ಐರೋಲಿಯ ಹೆಗ್ಗಡೆ ಭವನದಲ್ಲಿ ಆಯೋಜಿಸಲಾಗಿತ್ತು.

ಅಪರಾಹ್ನ 3ರಿಂದ ದೇವತಾ ಪ್ರಾರ್ಥನೆ, ಕಲಶ ಪ್ರತಿಷ್ಠೆ, ಅಪರಾಹ್ನ 3.30ರಿಂದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸದಸ್ಯರಿಂದ ಭಜನ ಕಾರ್ಯಕ್ರಮ ನಡೆಯಿತು. ಸಂಜೆ 5ರಿಂದ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಸಂಜೆ 5.30ರಿಂದ ಹಾಲಾಡಿ ರಾಜೀವ ಶೆಟ್ಟಿ ಸರಕಾರಿ ಪಿಯು  ಕಾಲೇಜು ಇದರ ಉಪನ್ಯಾಸಕ ದಾಸಶ್ರೇಷ್ಠ ಗಣಪತಿ ಹೆಗಡೆ ಅವರಿಂದ ಹರಿಕಥಾಮೃತವು ನಡೆಯಿತು.  ಕಾರ್ಯಕ್ರಮದ ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಹೆಗ್ಗಡೆ ಸೇವಾ ಸಂಘ ಮುಂಬಯಿ ಗೌರವಾಧ್ಯಕ್ಷ ಸಂಜೀವ ಪಿ. ಹೆಗ್ಡೆ, ಅಧ್ಯಕ್ಷ ವಿಜಯ ಬಿ. ಹೆಗ್ಡೆ, ಉಪಾಧ್ಯಕ್ಷರಾದ ಬಿ. ಗೋಪಾಲ್‌ ಹೆಗ್ಡೆ, ಜಯರಾಮ ಹೆಗ್ಡೆ, ಕಾರ್ಯದರ್ಶಿ ಶಂಕರ್‌ ಆರ್‌. ಹೆಗ್ಡೆ, ಕೋಶಾಧಿಕಾರಿ ರಮೇಶ್‌ ಎಂ. ಹೆಗ್ಡೆ, ಜತೆ ಕಾರ್ಯದರ್ಶಿ ರವಿ ಎಸ್‌. ಹೆಗ್ಡೆ, ಜತೆ ಕೋಶಾಧಿಕಾರಿ ಚಂದ್ರಶೇಖರ ಬಿ. ಹೆಗ್ಡೆ, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಯುವ ವಿಭಾಗ, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯ ಬಾಂಧವರ ನೇತೃತ್ವದಲ್ಲಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀ ಸದ್ಗುರು ನಿತ್ಯಾನಂದ ಆಶ್ರಮ 
ಮುಂಬಯಿ : ಗೋರೆ ಗಾಂವ್‌ ಪೂರ್ವದ ಸಹಕಾರ್‌ವಾಡಿ ವಿರಾÌನಿ ಇಂಡಸ್ಟ್ರಿಯಲ್‌ ಎಸ್ಟೇಟ್‌ ಹಿಂದುಗಡೆಯಿರುವ ಶ್ರೀ ಸದ್ಗುರು  ನಿತ್ಯಾನಂದ ಆಶ್ರಮದಲ್ಲಿ ಗುರುಪೂರ್ಣಿಮೆಯು ಜು. 8 ಮತ್ತು  ಜು. 9ರಂದು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ  ಅದ್ದೂರಿ ಯಾಗಿ ನಡೆಯಿತು.

Advertisement

ಜು. 8 ರಂದು ರಾತ್ರಿ 9ರಿಂದ   ಏಕಾಹ ಭಜನಾ ಕಾರ್ಯಕ್ರಮವು ಶ್ರೀ ಸದ್ಗುರು ನಿತ್ಯಾನಂದ ಭಜನ ಮಂಡಳಿಯ ಹಾಗೂ ಭಕ್ತರಿಂದ ಜರಗಿತು. ಪೂರ್ವಾಹ್ನ ಬೆಳಗ್ಗೆ 9ರಿಂದ ಗುರುಮೂರ್ತಿ ಅಭಿಷೇಕ, ಏಕಾಹ ಭಜನೆ ಮಂಗಳ್ಳೋತ್ಸವ ನಡೆಯಿತು. ಸುಧಾಕರ ಪೂಜಾರಿ ಅವರು ಮಹಾ ಮಂಗಳಾರತಿಗೈದರು. ವಾಸು ಕೆ. ಪೂಜಾರಿ ಅವರು ಏಕಾಹ ಭಜನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಆಶ್ರಮದ ಗೌರವಾಧ್ಯಕ್ಷ ಮೋಹನ್‌ ಜಿ. ಪೂಜಾರಿ ಅವರು ಪ್ರಾರ್ಥನೆಗೈದರು.

ಆಶ್ರಮದ ಸಭಾಂಗಣದಲ್ಲಿ  ಕಲ್ಯಾಣ್‌ನ ನಾರಾಯಣ ಗುರು ಭಜನ ಮಂಡಳಿಯವರಿಂದ ಭಕ್ತಿರಸಮಂಜರಿ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ  ತೀರ್ಥಹಳ್ಳಿ ರತ್ನಮ್ಮ ದೇವಪ್ಪ ಗೌಡ ಪರಿವಾರದವರಿಂದ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.

ಆಶ್ರಮದ ಗೌರವಾಧ್ಯಕ್ಷ ಮೋಹನ್‌ ಜಿ. ಪೂಜಾರಿ, ಅಧ್ಯಕ್ಷ ರಾಘು  ಆರ್‌. ಮೂಲ್ಯ, ಮುಖ್ಯ ಸಂಚಾಲಕ ಡಾ| ಶೈಲೇಶ್‌ ಜಿ., ಗೌರವ ಕಾರ್ಯದರ್ಶಿ ಸಂತೋಷ್‌ ಸಾಲ್ಯಾನ್‌, ಕೋಶಾಧಿಕಾರಿ ಮುಂಡಪ್ಪ ಮೂಲ್ಯ, ಸತೀಶ್‌ ಪೂಜಾರಿ, ಮಹಿಳಾ ವಿಭಾಗದ ಶಶಿಕಲಾ ಕೋಟ್ಯಾನ್‌, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ತುಳು-ಕನ್ನಡಿಗರ ಸಹಿತ ನೂರಾರು ಭಕ್ತಾದಿಗಳು ಅನ್ನ
ಸಂತರ್ಪಣೆಯಲ್ಲಿ ಭಾಗವಹಿಸಿದ್ದರು. ಸಂಜೆ 6ರಿಂದ
ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕುಲಾಲ ಸಂಘ ಮೀರಾರೋಡ್‌-ವಿರಾರ್‌ 
ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಮೀರಾರೋಡ್‌-ವಿರಾರ್‌ ಸ್ಥಳೀಯ ಸಮಿತಿಯ  ನವೀಕೃತ ಕಚೇರಿಯು ನಲಸೋಪರ ಪಶ್ಚಿಮದ ಲಾಭ ಚಾಳ್‌ನಲ್ಲಿ  ಜು. 9ರಂದು ಗುರುಪೂರ್ಣಿಮೆಯ ಪವಿತ್ರ ದಿನದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟನೆಗೊಂಡಿತು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ವಿವಿಧ ಪೂಜೆಗಳು, ಸ್ಥಳೀಯ ಸಮಿತಿಯ ಸದಸ್ಯ-ಸದಸ್ಯೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ಗುರುಪೂರ್ಣಿಮೆಯ ಅಂಗವಾಗಿ ಕುಮಟ ಕೃಷ್ಣ ಭಟ್‌ ಅವರ ಪೌರೋಹಿತ್ಯದಲ್ಲಿ ಸ್ಥಳೀಯ ಸಮಿತಿಯ ಮಸಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುರೇಖಾ ಬಂಗೇರ ಮತ್ತು ರಾಜು ಬಂಗೇರ ಅವರ ಯಜಮಾನತ್ವದಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು.

ಕುಲಾಲ ಸಂಘ ಮುಂಬಯಿ ಇದರ ಮೀರಾರೋಡ್‌-ವಿರಾರ್‌ ಸ್ಥಳೀಯ ಸಮಿತಿಯ ಪದಾಧಿಕಾರಿಗಳಾದ ಸುಂದರ ಮೂಲ್ಯ, ಮೋಹನ್‌ ಬಂಜನ್‌, ಯೋಗೇಶ್‌ ಬಂಗೇರ, ಕುಲಾಲ ಸಂಘದ ಪದಾಧಿಕಾರಿಗಳಾದ 
ಅಣ್ಣಿ ಮೂಲ್ಯ, ಶಂಕರ ವೈ. ಮೂಲ್ಯ, ಉಮೇಶ್‌ ಕರ್ಕೇರ ಹಾಗೂ ಸ್ಥಳೀಯ ಸಮಿತಿಯ ಸತೀಶ್‌ ಬಂಗೇರ, ಚಂದ್ರಶೇಖರ್‌ ಕುಲಾಲ್‌, ವಾಮನ್‌ ಮೂಲ್ಯ, ಆಶಾ, ಯಶೋಧರ ಬಂಗೇರ, ಕಶಿಕ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು. ಸಮಾಜ ಬಾಂಧವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವಿಕ್ರೋಲಿ ಬಂಟ್ಸ್‌
ಮುಂಬಯಿ: ವಿಕ್ರೋಲಿ ಬಂಟ್ಸ್‌ ವತಿಯಿಂದ ಗುರುಪೂರ್ಣಿಮೆ ಆಚರಣೆಯು ಜು. 9ರಂದು ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಕ್ರೋಲಿ ಪೂರ್ವದ ವಿಕ್ರೋಲಿ ಕನ್ನಡ ಸಂಘ ಸಂಚಾಲಕತ್ವದ ವೀಕೇಸ್‌ ಇಂಗ್ಲೀಷ್‌ ಹೈಸ್ಕೂಲ್‌ ಸಭಾಗೃಹದಲ್ಲಿ ಜರಗಿತು.

ಧಾರ್ಮಿಕ ಕಾರ್ಯಕ್ರಮವಾಗಿ ಸ್ವಾಮಿ ನಿತ್ಯಾನಂದ ಗುರುಗಳ ಭಾವಚಿತ್ರವನ್ನು  ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಫೋರ್ಟ್‌ ಅಯ್ಯಪ್ಪ ಸೇವಾ ಸಮಿತಿಯ ಸದಸ್ಯರಿಂದ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚಂದ್ರಶೇಖರ್‌ ಗುರುಸ್ವಾಮಿ, ಸುಕೇಶ್‌ ಶೆಟ್ಟಿ ಎಕ್ಕಾರು, ಭಾಸ್ಕರ ಪೂಜಾರಿ, ಮಾಧವ ಮೊಗವೀರ, ಪ್ರಕಾಶ್‌ ಕಾಂಚನ್‌ ಅವರು ಭಜನ ಕಾರ್ಯಕ್ರಮ ನಡೆಸಿಕೊಟ್ಟರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಕಿಶೋರ್‌ ಕರ್ಕೇರ, ತಬಲಾದಲ್ಲಿ  ಸುಭಾಶ್‌ ಮೆಂಡನ್‌ ಅವರು ಸಹಕರಿಸಿದರು.

ವಿಕ್ರೋಲಿ ಬಂಟ್ಸ್‌ನ ಅಧ್ಯಕ್ಷ ಗಣೇಶ್‌ ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಪೇಜಾವರ ಉದಯ ಎಲ್‌. ಶೆಟ್ಟಿ, ಗೌರವ ಕೋಶಾಧಿಕಾರಿ ಯುಗಾನಂದ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್‌ ವಿ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ನವೀನ್‌ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಮ್ಯಾ ಯು. ಶೆಟ್ಟಿ, ಗೌರವ ಕಾರ್ಯದರ್ಶಿ ಭಾರತಿ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯೆಯರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರಗಿದವು.

ಮುಕೇಶ್‌ ಶೆಟ್ಟಿ, ಉದ್ಯಮಿ ರವೀಂದ್ರ ಶೆಟ್ಟಿ, ಬಾಬು ರಾಮಣ್ಣ ಶೆಟ್ಟಿ, ಅಮಿತ್‌ ಶೆಟ್ಟಿ, ಪ್ರವೀಣ್‌ ಕೆ. ಶೆಟ್ಟಿ, ಅಮೃತಾ ಶೆಟ್ಟಿ, ಪ್ರಿಯಾ ಅಮಿತ್‌ ಶೆಟ್ಟಿ, ಭಾರತಿ ದಯಾನಂದ ಶೆಟ್ಟಿ, ಕುಶಲಾ ಶೆಟ್ಟಿ, ಗೀತಾ ಸತೀಶ್‌ ಶೆಟ್ಟಿ,  ನ್ಯಾಯವಾದಿ ಸುರೇನ್‌ ಶೆಟ್ಟಿ ಮತ್ತು ಶಕುಂತಳಾ ಶೆಟ್ಟಿ, ಚಂದ್ರಹಾಸ ಶೆಟ್ಟಿ, ನೀತಾ ಶೆಟ್ಟಿ, ಗೀತಾ ಕೆ. ಶೆಟ್ಟಿ. ರೇವತಿ ಶೆಟ್ಟಿ, ಪ್ರಮೀಳಾ ಶೆಟ್ಟಿ, ಕರಿಯಣ್ಣ ಶೆಟ್ಟಿ, ಡಿ. ಗಣೇಶ್‌ ಶೆಟ್ಟಿ, ಹರೀಶ್‌ ಕೋಟ್ಯಾನ್‌, ಕರಿಯಣ್ಣ ಕೋಟ್ಯಾನ್‌, ಸುರೇಶ್‌ ಬಂಗೇರ, ಸತೀಶ್‌ ಐಲ್‌ ಮೊದಲಾದವರು ಉಪಸ್ಥಿತರಿದ್ದರು. ವಿಕ್ರೋಲಿಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯ ಬಾಂಧವರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರಗಿತು. ವಿಕ್ರೋಲಿ ಬಂಟ್ಸ್‌ನ ಯುವ ವಿಭಾಗದ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next