Advertisement

ಕಿಡ್ನ್ಯಾಪ್‌ ಕೇಸ್‌ಗೆ “ಡಿಜಿಟಲ್‌’ಸುಖಾಂತ್ಯ! 9 ವರ್ಷದ ನಂತರ ಕುಟುಂಬ ಸೇರಿದ ಯುವತಿ

07:22 PM Aug 07, 2022 | Team Udayavani |

ಮುಂಬೈ: ಚಿಕ್ಕವಳಿದ್ದಾಗ ಅಪಹರಿಸಲ್ಪಟ್ಟಿದ್ದ ಯುವತಿ ಡಿಜಿಟಲ್‌ ಜಾಹೀರಾತೊಂದರ ಸಹಾಯದಿಂದ 9 ವರ್ಷಗಳ ನಂತರ ಪುನಃ ತನ್ನ ಕುಟುಂಬ ಸೇರಿದ್ದಾಳೆ!

Advertisement

2013ರಲ್ಲಿ ಏಳು ವರ್ಷದವಳಿದ್ದಾಗ ಪೂಜಾ ಮುಂಬೈನ ಅಂಧೇರಿಯಿಂದ ನಾಪತ್ತೆಯಾಗಿದ್ದಳು.

ಆಕೆಯನ್ನು ಅದೇ ಸ್ಥಳದ ಹೆನ್ರಿ ಡಿ’ ಸೋಜಾ ಎಂಬಾತ ಅಪಹರಿಸಿದ್ದ. ಮಕ್ಕಳಿಲ್ಲದ ಡಿಸೋಜಾ ದಂಪತಿ ಪೂಜಾಳನ್ನೇ ಮಗಳಾಗಿ ಸಾಕುತ್ತಿದ್ದರು. ಆರಂಭದಲ್ಲಿ ಮನೆಗೆ ಹೊಂದಿಕೊಳ್ಳದ್ದರಿಂದ ಆಕೆಯನ್ನು ಕರ್ನಾಟಕದ ಹಾಸ್ಟೆಲೊಂದಕ್ಕೆ ಸೇರಿಸಲಾಗಿತ್ತು. ಆನಂತರ, ಆ ದಂಪತಿಗೆ ಮಗುವಾಗಿದ್ದು ಆಗ ಪೂಜಾಳನ್ನು ಪುನಃ ಮನೆಗೆ ಕರೆಯಿಸಿಕೊಂಡಿದ್ದರು.

ತೀರಾ ಇತ್ತೀಚೆಗೆ, ಡಿಸೋಜಾ ಕುಡಿನ ನಶೆಯಲ್ಲಿ ಪೂಜಾಳಿಗೆ ಆಕೆ ತನ್ನ ಮಗಳಲ್ಲ ಎಂದಿದ್ದ. ಆಗ, ಪೂಜಾ, ತನ್ನ ಸ್ನೇಹಿತೊಬ್ಬರಿಂದ ಅಂತರ್ಜಾಲದಲ್ಲಿ ಪೂಜಾ ಮಿಸ್ಸಿಂಗ್‌ ಎಂದು ಸರ್ಚ್‌ ಕೊಟ್ಟು ಹುಡುಕಾಡಿದಾಗ, 2013ರಲ್ಲಿ ಪೂಜಾಳನ್ನು ಹುಡುಕಿಕೊಡುವಂತೆ ಆಕೆಯ ಕುಟುಂಬದವರು ನೀಡಿದ್ದ ಜಾಹೀರಾತೊಂದರ ಡಿಜಿಟಲ್‌ ಪ್ರತಿ ಸಿಕ್ಕಿತು. ಅದರಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿ ಈಗ ಪೂಜಾ ತನ್ನ ಮನೆ ಸೇರಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next