Advertisement

ಸಮಾಜ – ಬ್ಯಾಂಕನ್ನು ಬಲಿಷ್ಠಗೊಳಿಸುವ ಶಕ್ತಿ ದೇವರು ಕರುಣಿಸಲಿ: ನಿತ್ಯಾನಂದ ಕೋಟ್ಯಾನ್‌

06:04 PM May 08, 2024 | Team Udayavani |

ಮುಂಬಯಿ: ನಗರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್‌ ಕೋ – ಆಪರೇಟಿವ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ, ಬಿಲ್ಲವ ಸಮಾಜದ
ಧೀಮಂತ ನಾಯಕ ದಿ| ಜಯ ಸಿ. ಸುವರ್ಣರ ಪುತ್ರ ಸೂರ್ಯಕಾಂತ್‌ ಸುವರ್ಣ ಅವರನ್ನು ಗೋರೆಗಾಂವ್‌ನ ಜಯ ಲೀಲಾ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಮತ್ತು ಭಾರತ್‌ ಬ್ಯಾಂಕ್‌ನ ನಿರ್ದೇಶಕರು ಮತ್ತು ಅಭಿಮಾನಿಗಳು ವಿಶೇಷವಾಗಿ ಅಭಿನಂದಿಸಿ ಶುಭ ಹಾರೈಸಿದರು.

Advertisement

ಸೂರ್ಯಕಾಂತ್‌ ಜಯ ಸುವರ್ಣ ಅವರು ತಮ್ಮ ಹುಟ್ಟುಹಬ್ಬದ ಸಲುವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನಿತ್ಯಾನಂದ ಡಿ. ಕೋಟ್ಯಾನ್‌ ಮಾತನಾಡಿ, ಜಯ ಸುವರ್ಣರ ಜೀವನ ಶೈಲಿ, ಮಾನವೀಯತೆಯನ್ನು ಮೈಗೂಡಿಸಿಕೊಂಡಿರುವ ಸೂರ್ಯಕಾಂತ್‌ ಅವರು ಮಿತಭಾಷಿಯಾಗಿದ್ದು, ಶಾಂತ ಸ್ವಭಾವದವರು. ಜಯ ಸುವರ್ಣರ ಸಾಮಾಜಿಕ ಕಾರ್ಯಗಳನ್ನು ಬಹಳ ಹತ್ತಿರದಿಂದ
ಕಂಡವರು. ಸಮಾಜ ಸೇವೆ ಮಾಡುವುದೆಂದರೆ ಅದೊಂದು ತಪಸ್ಸು. ಸಾಮಾಜಿಕ ವಿಷಯದಲ್ಲಿ ಬಹಳಷ್ಟು ಅನುಭವ ಅಳವಡಿಸಿಕೊಂಡಿದ್ದಾರೆ.

ಅವರಿಗೆ ಭಾರತ್‌ ಬ್ಯಾಂಕ್‌ ಅನ್ನು ಮತ್ತು ಬಿಲ್ಲವ ಸಮಾಜವನ್ನು ಸಮರ್ಥ ರೀತಿಯಲ್ಲಿ ಮುನ್ನಡೆ ಸುವ ಶಕ್ತಿಯನ್ನು ಬ್ರಹ್ಮಶ್ರೀ ನಾರಾಯಣಗುರು ಗಳು, ಕೋಟಿ-ಚೆನ್ನಯರು ಅನುಗ್ರಹಿಸಲಿ ಎಂದು ಹಾರೈಸಿದರು.

ಸಾಯಿಕೇರ್‌ ಲಾಜೆಸ್ಟಿಕ್‌ ಆಡಳಿತ ನಿರ್ದೇಶಕ ಸುರೇಂದ್ರ ಕೆ. ಪೂಜಾರಿ ಮಾತನಾಡಿ, ಸಮಾಜವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಿ ಎಲ್ಲರನ್ನೂ ಗೌರವದಿಂದ ಕಂಡ ಜಯ ಸಿ. ಸುವರ್ಣ ಆದರ್ಶದಲ್ಲಿ ಮುನ್ನಡೆಯುತ್ತಿರುವ ಸೂರ್ಯಕಾಂತ್‌ ಸುವರ್ಣ ಅವರ ಸಾಮಾಜಿಕ ಕಾರ್ಯಗಳಿಗೆ ನಾವೆಲ್ಲರೂ ಇನ್ನಷ್ಟು ಬೆಂಬಲಿಸೋಣ. ಅವರಿಗೆ ದೇವರು ಸಮಾಜವನ್ನು ಬಲಿಷ್ಠಗೊಳಿಸುವ ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸಿದರು.

ಅಭಿನಂದನೆ ಸ್ವೀಕರಿಸಿದ ಭಾರತ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ್‌ ಜಯ ಸುವರ್ಣ ಕೃತಜ್ಞತೆ ಸಲ್ಲಿಸಿ, ಸಮಾಜದ ಜತೆಗೆ ಒಡನಾಟ ದಲ್ಲಿದ್ದುಕೊಂಡು ಜನಸೇವೆ ಮಾಡುತ್ತೇನೆ. ತಂದೆ ಮಾಡಿದ ಸಮಾಜ ಸೇವೆಯ ಒಂದಿಷ್ಟಾದರೂ ಮಾಡಲು ಸಾಧ್ಯವಾದರೆ ನನ್ನ ಜೀವನ ಸಾರ್ಥಕ. ವ್ಯಕ್ತಿ ಹಣದಲ್ಲಿ ಶ್ರೀಮಂತನಾಗುವುದಕ್ಕಿಂತ ಗುಣ ದಲ್ಲಿ ಶ್ರೇಷ್ಠನಾಗಿರಬೇಕು ಎನ್ನುವ ಸಿದ್ಧಾಂತದಲ್ಲಿ ಬೆಳೆದ ನಾನು ಸಮಾಜ ಬಾಂಧವರ ಪ್ರೀತಿ – ಗೌರವವನ್ನು ಸದಾ ಉಳಿಸುತ್ತೇನೆ. ಬ್ಯಾಂಕ್‌ನ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಸಮಯ ನೀಡುತ್ತಿದ್ದೇನೆ ಎಂದರು.

Advertisement

ಈ ಸಂದರ್ಭ ಸುಭಾಶ್‌ ಜಯ ಸುವರ್ಣ, ದಿನೇಶ ಜಯ ಸುವರ್ಣ, ಯೋಗೀಶ್‌ ಜಯ ಸುವರ್ಣ, ಭಾರತ ಬ್ಯಾಂಕ್‌ನ ನಿರ್ದೇಶಕರಾದ ಗಂಗಾಧರ ಜೆ. ಪೂಜಾರಿ, ಭಾಸ್ಕರ ಎಂ. ಸಾಲ್ಯಾನ್‌, ಗಂಗಾಧರ ಎನ್‌. ಅಮೀನ್‌ ಕರ್ನಿರೆ, ಮೋಹನ್‌ ಕೋಟ್ಯಾನ್‌, ಸದಾಶಿವ ಕರ್ಕೇರ, ರವಿ ಎಂ. ಸಾಲ್ಯಾನ್‌, ಬಿಲ್ಲವ ಸೇವಾದಳದ ಗಣೇಶ್‌ ಪೂಜಾರಿ, ಬಬಿತಾ ಕೋಟ್ಯಾನ್‌, ಕೇಶವ ಪೂಜಾರಿ, ರವಿಂದ್ರ ಕೋಟ್ಯಾನ್‌, ಶಶಿಧರ ಬಂಗೇರ, ಕಮಲೇಶ್‌ ಕರ್ಕೇರ, ಸಚಿನ್‌ ಆರ್‌. ಪೂಜಾರಿ, ಚಿಂತನ್‌ ಎಸ್‌. ಶೆಟ್ಟಿ, ಅಕ್ಷಯ ಪೂಜಾರಿ, ದಿನೇಶ್‌ ಸಾಲ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next