Advertisement

ಫೆಬ್ರವರಿಯಿಂದ ಅಗ್ನಿ ಸುರಕ್ಷಾ ತಪಾಸಣೆ ಇಲ್ಲ: ಅಧಿಕಾರಿಗಳ ಬೆದರಿಕೆ

03:43 PM Jan 25, 2018 | udayavani editorial |

ಮುಂಬಯಿ : ವಿವಿಧ ಬೇಡಿಕೆಗಳನ್ನು ಆಗ್ರಹಿಸಿರುವ ಮುಂಬಯಿ ಅಗ್ನಿ ಶಾಮಕ ಅಧಿಕಾರಿಗಳ ಸಂಘ ಮುಂದಿನ ತಿಂಗಳಿಂದ ತಾವು ವಾಣಿಜ್ಯ ಸಂಸ್ಥೆಗಳಲ್ಲಿನ ಅಗ್ನಿ ಸುರಕ್ಷಾ ಸೌಕರ್ಯಗಳ ತಪಾಸಣೆಯನ್ನು ಕೈಗೊಳ್ಳುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. 

Advertisement

ಕಮಲಾ ಮಿಲ್ಸ್‌ ಅಗ್ನಿ ದುರಂತ ಪ್ರಕರಣದಲ್ಲಿ ಓರ್ವ ಅಗ್ನಿ ಶಾಮಕ ಅಧಿಕಾರಿಯನ್ನು ಬಂಧಿಸಲಾಗಿರುವುದಕ್ಕೆ ತೀವ್ರ ಕಳವಳ, ಆಕ್ಷೇಪ, ಖಂಡನೆ ವ್ಯಕ್ತಪಡಿಸಿರುವ 140 ಸದಸ್ಯರ ಅಗ್ನಿ ಶಾಮಕ ಅಧಿಕಾರಿಗಳ ಸಂಘ, ತಮ್ಮ ವಿವಿಧ ಬೇಡಿಕೆಗಳನ್ನು ಒಳಗೊಂಡ ಪತ್ರವನ್ನು ಬಿಎಂಸಿ ಕಮಿಷನರ್‌ ಅಜಯ್‌ ಮೆಹ್ತಾ ಅವರಿಗೆ ಬರೆದು ಅವುಗಳ ಈಡೇರಿಕೆಯನ್ನು ಆಗ್ರಹಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next