Advertisement

ಮುಂಬೈ ಕೋವಿಡ್ ವೈರಸ್ ನ ಪ್ರಮುಖ ತಾಣ, ನಾಲ್ಕು ಹಾಟ್ ಸ್ಪಾಟ್, 341 ಪ್ರದೇಶ ಬಂದ್

09:18 AM Apr 11, 2020 | Nagendra Trasi |

ಮುಂಬೈ:ವಾಣಿಜ್ಯ ನಗರಿ ಮುಂಬೈ ಇದೀಗ ಮಾರಣಾಂತಿಕ ಕೋವಿಡ್ 19 ವೈರಸ್ ನ ಪ್ರಮುಖ ತಾಣ ಎಂದು ಗುರುತಿಸಲ್ಪಟ್ಟಿದ್ದು, ಶುಕ್ರವಾರ ಸಂಜೆ 4ಗಂಟೆವರೆಗೆ ವೈರಸ್ ಸೋಂಕಿತರ ಸಂಖ್ಯೆ 750ಕ್ಕೆ ಏರಿದ್ದು, 54 ಮಂದಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

Advertisement

ಮುಂಬೈಯಲ್ಲಿ ದಿನಂಪ್ರತಿ ಕೋವಿಡ್ ಪ್ರಕರಣ ಪತ್ತೆಯಾಗುತ್ತಿದ್ದು, ಮುಂಬೈನಲ್ಲಿ ಒಟ್ಟು ನಾಲ್ಕು ಕೋವಿಡ್ ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದ್ದು, 341 ಪ್ರದೇಶಗಳನ್ನು ಸೀಲ್ಡ್ ಮಾಡಲಾಗಿದೆ. ಅತೀ ಹೆಚ್ಚು ಸೋಂಕು ಪೀಡಿತರು ಇರುವ ಪ್ರದೇಶಗಳನ್ನು ಹಾಟ್ ಸ್ಟಾಟ್ ಎಂದು ಗುರುತಿಸಲಾಗಿದೆ.

ಅತೀ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾದ ಪ್ರದೇಶಗಳು ಜಿ ದಕ್ಷಿಣ ವಾರ್ಡ್ (ವರ್ಲಿ ಪ್ರದೇಶ-199 ಪ್ರಕರಣ, ಬೈಕುಲ್ಲಾ ಪೂರ್ವ ವಾರ್ಡ್-ಮಝ್ ಗಾಂವ್ ಪ್ರದೇಶದಲ್ಲಿ 69 ಪ್ರಕರಣ, ಮಲಬಾರ್ ಹಿಲ್ ಡಿ ವಾರ್ಡ್-ಗಿರ್ಗಾಂವ್ ಪ್ರದೇಶ 61 ಪ್ರಕರಣ, ಅಂಧೇರಿ ಪಶ್ಚಿಮ ಪ್ರದೇಶ-51 ಪ್ರಕರಣಗಳು. ಒಟ್ಟು 340 ಪ್ರದೇಶಗಳನ್ನು ಸೀಲ್ ಮಾಡಲಾಗಿದ್ದು, ಎಲ್ಲಾ ಪ್ರದೇಶಗಳಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಪ್ರದೇಶಗಳಲ್ಲಿನ ಜನರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಶುಕ್ರವಾರ ಮುಂಬೈನ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಿಲ್ಲ. ಮುಂಬೈ ಪೊಲೀಸರು ಲಾಕ್ ಡೌನ್ ಅನ್ನು ಕಠಿಣವಾಗಿ ಜಾರಿಗೊಳಿಸಿದ್ದರು. ಲಾಕ್ ಡೌನ್ ನಿಂದ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಹಾಗೂ ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next