ಮುಂಬಯಿ : ಭಾರತೀಯ ರೈಲ್ವೆಯ ಕ್ಯಾಟರಿಂಗ್ ವ್ಯವಸ್ಥೆಯ ಆಧುನೀಕರಣದ ಅಂಗವಾಗಿ ಐಆರ್‌ಸಿಟಿಸಿ (ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್) ಇದೇ ಮೊದಲ ಬಾರಿಗೆ ಮುಂಬಯಿ ಸೆಂಟ್ರಲ್ ರೈಲ್ವೇ ಸ್ಟೇಶನ್‌ನಲ್ಲಿ ಪ್ರಯಾಣಿಕರಿಗಾಗಿ ಆಟೋಮ್ಯಾಟಿಕ್ ಪಿಜಾ ವೆಂಡಿಂಗ್ ಮಶೀನ್ ಸೌಕರ್ಯವನ್ನು ಆರಂಭಿಸಿದೆ. ಈ ಹೊಸ ಸೌಕರ್ಯದಿಂದಾಗಿ ರೈಲು ಪ್ರಯಾಣಿಕರು ತಾವೇ ಖುದ್ದಾಗಿ ಆಟೋಮ್ಯಾಟಿಕ್ ಯಂತ್ರದಿಂದ ತಮಗೆ ಇಷ್ಟವಿರುವ, ಬಾಯಿ ನೀರೂರಿಸುವ ಬಿಸಿ ಬಿಸಿ ಪಿಜಾ ಐಟಮ್‌ಗಳನ್ನು ನ್ಯಾಯೋಚಿತ ದರಗಳಲ್ಲಿ, ಕೆಲವೇ ನಿಮಿಷಗಳಲ್ಲಿ, ಪಡೆಯಬಹುದಾಗಿರುತ್ತದೆ ಎಂದು ಐಆರ್‌ಸಿಟಿಸಿ ಟ್ವೀಟ್ ಮಾಡಿದೆ. ಈ ಬಗ್ಗೆ ಆರ್‌ಸಿಟಿಸಿ ಹಾಕಿರುವ ವಿಡಿಯೋದಲ್ಲಿ ಈ ಸ್ವಯಂ ಚಾಲಿತ ಯಂತ್ರ ರುಚಿರುಚಿಯಾದ ಬಿಸಿ ಬಿಸಿ ಪಿಜಾವನ್ನು ತಯಾರಿಸುವ ವಿಧಾನವನ್ನು ತೋರಿಸಲಾಗಿದೆ. ಸದ್ಯದಲ್ಲೇ ಇದೇ ಬಗೆಯ ಯಂತ್ರದಲ್ಲಿ ರೈಲ್ವೇ ಪ್ರಯಾಣಿಕರು ಫ್ರೆಶ್ ಫ್ರೈಸ್, ಪಾಪ್ ಕಾರ್ನ್, ಐಸಿ ಕ್ರೀಮ್, ಫೂÅಟ್ ಜ್ಯೂಸ್ ಇತ್ಯಾತಿಗಳನ್ನು ಕೂಡ ಪಡೆಯಬಹುದಾಗಿರುತ್ತದೆ. ಪ್ರಕೃತ ಐಆರ್‌ಸಿಟಿಸಿ ಡೊಮಿನೋಸ್ ಪಿಜಾ ವನ್ನು ಎರಡು ತಾಸುಗಳ ಅವಧಿಯಲ್ಲಿ ಪೂರೈಸುವ ವ್ಯವಸ್ಥೆ ಹೊಂದಿದೆ. ಅದನ್ನು ರೈಲು ಪ್ರಯಾಣಿಕರು ಆಸೀನರಾಗಿರುವ ಸೀಟಿಗೇ ತಂದು ಕೊಡಲಾಗುತ್ತಿದೆ.