Advertisement
ಜೂ. 30 ರಂದು ಸಂಜೆ ಮಾಟುಂಗಾ ಪೂರ್ವದ ಭಾವು ದಾಜಿ ರಸ್ತೆಯ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಕಿರುಸಭಾಗೃಹದಲ್ಲಿ ಕನ್ನಡ ಲೇಖಕಿ ಯರ ಬಳಗ “ಸೃಜನಾ ಮುಂಬಯಿ’ ಆಯೋಜಿಸಿದ್ದ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕೃತಿಕಾರರನ್ನು ಅಭಿನಂದಿಸಿದರು.
Related Articles
Advertisement
ಮೈಸೂರು ಅಸೋ. ಮುಂಬಯಿ ಸಹಯೋಗ ಹಾಗೂ ಸೃಜನಾ ಸಂಸ್ಥೆಯ ಆಶ್ರಯದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದ ವೇದಿಕೆಯಲ್ಲಿ ಸೃಜನಾ ರೂವಾರಿ ಡಾ| ಸುನೀತಾ ಎಂ. ಶೆಟ್ಟಿ, ಹೇಮಾ ಸದಾನಂದ್ ಅಮೀನ್ ಉಪಸ್ಥಿತರಿದ್ದು ಅತಿಥಿಗಳಿಗೆ ಕೃತಿ ಗಳನ್ನಿತ್ತು ಗೌರವಿಸಿದರು.
ಡಾ| ದಾûಾಯಿಣಿ ಯಡಹಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ವಾಣಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯ ಕ್ರಮ ನಿರೂಪಿಸಿದರು. ಶಾರದಾ ಅಂಬೆಸಂಗೆ ಪ್ರಾರ್ಥನೆ ಗೈದರು. ಬಳಗದ ಸದಸ್ಯೆಯರು ಉಪಸ್ಥಿತರಿದ್ದರು.
ಡಾ| ಸುನೀತಾ ಶೆಟ್ಟಿ ಅವರು ತುಂಬಾ ಸಂಶೋಧನೆ ಮಾಡಿ ಲೇಖನಗಳನ್ನು ಬರೆಯುತ್ತಾರೆ. ಅವರ ಲೇಖನಗಳು ವೈಚಾರಿಕ ನೆಲೆಯಿಂದ ಕೂಡಿರುತ್ತವೆ. ವಿಷಯಗಳ ಆಯ್ಕೆ ಮತ್ತು ವಿವರಿಸುವ ಪದ್ಧತಿ ಗಮನಿಸಿದಾಗ ಅವರ ಆಳವಾದ ಅಧ್ಯಯನ ಕಂಡು ಬರುತ್ತದೆ. ಸಮಾರಾಧನೆ ಇದೊಂದು ಹೊಸ ರೀತಿಯ ಗ್ರಂಥವಾಗಿದೆ.-ಡಾ| ವಿಶ್ವನಾಥ್ ಕಾರ್ನಾಡ್, ಹಿರಿಯ ಸಾಹಿತಿ ಕ್ರಿಯಾಶೀಲತೆಗೆ ಇನ್ನೊಂದು ಹೆಸರು ಮುಂಬಯಿ ಲೇಖಕಿ ಡಾ| ಸುನೀತಾ ಶೆಟ್ಟಿ. ಕನ್ನಡ ಜಾನಪದ ನಮ್ಮ ಆಸ್ತಿ. ಆದರಿಂದ ಹಾಡುಗಳೂ ಕೂಡ ಬಂದು ನಮ್ಮ ಲೌಕಿಕ ಪರಂಪರೆಗೆ ಸೇರಿದವು. ಅವುಗಳನ್ನು ಸಂಗ್ರಹಿಸಿಕೊಟ್ಟವರು ದಾûಾಯಣಿ ಯಡವಳ್ಳಿ ಅವರು. ಮೌಖೀಕ ಪರಂಪರೆಯ ಕಥೆಗಳು ಶಿಷ್ಟ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ. ವರ್ತುಲ ಕಥಾ ಸಂಕಲನದಲ್ಲಿ ಹೆಣ್ಣು, ಗಂಡುಗಳ ವರ್ತುಲ ಬಂಧನ ಇರುವುದನ್ನು ಕಾಣಬಹುದು. ನಮ್ಮ ಕನ್ನಡ ಸಂಸ್ಕೃತಿಯ ಅನಾವರಣ ಈ ಕಥೆಗಳಲ್ಲಿ ಪ್ರಕಟವಾಗಿದೆ. ದಾûಾಯಣಿ ಯಡಹಳ್ಳಿ ಅವರ ಜಾನಪದ ಅವ್ವಂದಿರ ಹಾಡುಗಳನ್ನು ಸುಶ್ರಾವ್ಯವಾಗಿ ಕೃತಿಯಲ್ಲಿ ಮೂಡಿಸಿದ್ದಾರೆ.
-ಡಾ| ಕೆ. ರಘುನಾಥ್, ಹಿರಿಯ ಸಾಹಿತಿ, ವಿಮರ್ಶಕ ಚಿತ್ರ-ವರದಿ: ರೋನ್ಸ್ ಬಂಟ್ವಾಳ್