Advertisement

ಮುಲುಂಡ್‌ ವಿಪಿಎಂ ಶಿಕ್ಷಣ ಸಂಸ್ಥೆಯ ಶಿಕ್ಷಕರ  ಅಭಿನಂದನ ಸಮಾರಂಭ

05:04 PM Jul 20, 2018 | Team Udayavani |

ಮುಂಬಯಿ: ಮುಲುಂಡ್‌ ವಿದ್ಯಾ ಪ್ರಸಾರಕ ಮಂಡಳದ ವಜ್ರಮಹೋತ್ಸವ ಸಮಾರಂಭದ ಭಾಗವಾಗಿ ವಿಪಿಎಂ ಮಂಡಳದ ಮುಲುಂಡ್‌ ಮತ್ತು ಐರೋಲಿಯ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕೇತರ ಸಿಬಂದಿಗೆ ಹಾಗೂ ಪ್ರಸ್ತುತ ಸೇವಾ ನಿರತರಾಗಿರುವ ಉದ್ಯೋಗಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಇತ್ತೀಚೆಗೆ ಮುಲುಂಡ್‌ ವಿಪಿಎಂ ಶಿಕ್ಷಣ ಸಂಕುಲದ ಸಭಾಗೃಹದಲ್ಲಿ ನಡೆಯಿತು.

Advertisement

ಎಂದು   ಮ್ಯಾರಥಾನ್‌ ರಿಯಾಲ್ಟಿ ಕಾರ್ಯಾಧ್ಯಕ್ಷ  ಚೇತನ್‌. ಆರ್‌. ಶಾØ  ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಶಿಕ್ಷಕರು ರಾಷ್ಟ್ರದ ಸಂಪತ್ತು, ವಿದ್ಯಾರ್ಥಿಗಳನ್ನು ಪ್ರೇರೆಪಿಸುವ ಸಾಮರ್ಥ್ಯ ಮತ್ತು ಉತ್ಸಾಹವನ್ನು ಉಂಟು ಮಾಡುವ, ಸಂಪತ್‌ ಭರಿತವಾದ ನವ ಪೀಳಿಗೆಯನ್ನು ಸೃಷ್ಟಿಸುವ ಶಕ್ತಿ ಅವರಿಗಿದೆ. ವಿಜ್ಞಾನ ಮಾಹಿತಿಯ ವಿಶ್ವ ಗ್ರಂಥಾಲಯದ ನಿಯಂತ್ರಣವು ಸಾಂಪ್ರದಾಯಿಕ ಪಾತ್ರದಿಂದ ಬಹುದೂರ ಹೋಗುತ್ತಿದ್ದರೂ ಸಹ ಅದರ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ. ಜಾಗೃತ ಯುವ ಪೀಳಿಗೆಯನ್ನು ತಯಾರಿಸುವ ಮತ್ತು ಮೌಲ್ಯಯುತ  ವ್ಯವಸ್ಥೆಯಿಂದ ಸವಾಲುಗಳನ್ನು ಎದುರಿಸುವ ಗುಣ ಕೇವಲ ಗುರುವಿನ ಸ್ಥಾನದಿಂದ ಮಾತ್ರ ಧಾರೆಯೆರೆದು ದಯಪಾಲಿಸಲಾಗುತ್ತದೆ ಎಂದು ನುಡಿದರು.

ಮತ್ತೋರ್ವ ಗೌರವ ಅತಿಥಿ, ಪ್ರಾಧ್ಯಾಪಕಿ, ಶೈಲಜಾ ಶಾØ ಅವರು ಮಾತನಾಡಿ, ವಿದ್ಯಾ ಪ್ರಸಾರಕ ಮಂಡಳವು ತಮ್ಮ ಪ್ರತಿಷ್ಠಿತ ಸೇವೆಯನ್ನು ಗುರುತಿಸಿ, ಗೌರವ ಮೆರವಣಿಗೆಯನ್ನು ವಾದ್ಯ ವೃಂದದ ಮೂಲಕ ಮಾನವೀಯತೆಯನ್ನು ಪ್ರದರ್ಶಿಸಿದೆ ಎಂದು ನುಡಿದರು.

ಸಮಾರಂಭದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೌರವ ಗೌರವ ಪ್ರಧಾನ ಕಾರ್ಯದರ್ಶಿ ಡಾ|  ಪಿ. ಎಮ್‌. ಕಾಮತ್‌ ಅವರು ಅತಿಥಿಗಳನ್ನು ಸ್ವಾಗತಿಸಿ, ಸದಸ್ಯರ ಸಾಧನೆಯ ಆದರ್ಶದ ಸ್ಮರಣೆಯ  ಪ್ರಾಮಾಣಿಕತೆ, ಪಾರದರ್ಶಕತೆಯ ಕುರಿತು  ವಿವರಿಸಿದರು.  ಶಾಲೆ ಬೆಳೆದು ಬಂದ ಬಗೆಯನ್ನು ತಿಳಿಸಿದ ಅವರು, ನೀರಿಕ್ಷೆಗೂ ಮೀರಿದ ಆಧುನಿಕ ಸೌಕರ್ಯಗಳನ್ನು ಹೊಂದಿರುವ ಶಾಲಾ ಕಟ್ಟಡದ ಮರು ಅಭಿವೃದ್ಧಿ ಬಗ್ಗೆ ಪ್ರೇಕ್ಷಕರ ಗಮನಕ್ಕೆ ತಂದು ಎಲ್ಲರಿಗೂ ಶುಭಹಾರೈಸಿದರು.

ವೇದಿಕೆಯಲ್ಲಿ ಮಂಡಳದ ಗೌರವ ಕಾರ್ಯದರ್ಶಿ  ಬಿ. ಎಚ್‌. ಕಟ್ಟಿ, ಕೋಶಾಧಿಕಾರಿ ಪ್ರೊ|  ಸಿ. ಜೆ. ಪೈ, ಜತೆ ಕೋಶಾಧಿಕಾರಿ ಎನ್‌. ಎಮ್‌. ಗುಡಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮಂಡಳದ ಪದಾಧಿಕಾರಿಗಳು, ಎಲ್ಲಾ ವಿಭಾಗದ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಪರಿವೀಕ್ಷಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 

Advertisement

ನಿವೃತ್ತ ಶಿಕ್ಷಕರ ಯಾದಿಯನ್ನು ಆಯಾ ವಿಭಾಗದ ಮುಖ್ಯ ಶಿಕ್ಷಕಿಯರುಗಳಾದ  ಸುವನಾ ಶೆಟ್ಟಿ, ಡಾ| ಸಾಯಿನಾಥ್‌ ಶೆಣೈ, ಮಹಾ ವಿದ್ಯಾಲಯದ ಪ್ರಾಚಿ ರಾವ್‌  ರಾಣಿ ಮತ್ತು ಸಂಧ್ಯಾ ಸೊಂಡೂರ ಅವರು ಓದಿದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಅಶ್ವಿ‌ನಿ ಬಂಗೇರ ಸ್ವಾಗತಿಸಿದರು. ಪ್ರಮೀಳಾ ಪೆರೇರಾ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next