Advertisement

ಅಮೆರಿಕದ ಓರ್ಲಾಂಡೋನಲ್ಲಿ ಶೂಟಿಂಗ್‌; ಹಲವರ ಸಾವು ?

07:26 PM Jun 05, 2017 | Team Udayavani |

ಮಯಾಮಿ : ಓರ್ಲಾಂಡೋದ ಫ್ಲೋರಿಡಾನಗರದ ಇಂಡಸ್ಟ್ರಿಯಲ್‌ ಪಾರ್ಕ್‌ ನಲ್ಲಿ ಇಂದು ನಡೆದ ಶೂಟಿಂಗ್‌ನಲ್ಲಿ ಹಲವಾರು ಮಂದಿ ಹತರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಘಟನೆಯ ವಿವರಗಳನ್ನು ಹಾಗೂ ಅಲ್ಲಿನ ಪರಿಸ್ಥಿತಿ ಕುರಿತಾದ ಮಾಹಿತಿಗಳನ್ನುಅವರ ನೀಡಿಲ್ಲ.

Advertisement

“ಇಂಡಸ್ಟ್ರಿಯಲ್‌ ಪಾರ್ಕ್‌ನಲ್ಲಿ  ಇಂದು ಶೂಟಿಂಗ್‌ ನಡೆದಿದೆ; ಹಲವು ಜೀವಗಳು ಬಲಿಯಾಗಿವೆ; ಆದರೆ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ’ ಎಂದು ಆರೆಂಜ್‌ ಕೌಂಟಿ ಷರೀಫ್ ಅವರ ಕಾರ್ಯಾಲಯ ತಿಳಿಸಿದೆ. 

ಸರಿಯಾದ ಮಾಹಿತಿಗಳು ಸಿಕ್ಕಿದ ಬಳಿಕವೇ ಘಟನೆಯ ವಿವರಗಳನ್ನು ಪೂರ್ತಿಯಾಗಿ ತಿಳಿಸಲಾಗುವುದು ಎಂದು ಷರೀಫ್ ಕಾರ್ಯಾಲಯ ಹೇಳಿದೆ. 

ವರ್ಷದ ಹಿಂದೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವೆಂದೇ ಪ್ರಸಿದ್ಧವಾಗಿರುವ ಫ್ಲೋರಿಡಾ ನಗರದಲ್ಲಿನ ಸಲಿಂಗಿಗಳ ನೈಟ್‌ ಕ್ಲಬ್‌ನಲ್ಲಿ ನಡೆದಿದ್ದ ಶೂಟಿಂಗ್‌ಗೆ 49 ಜನರು ಬಲಿಯಾಗಿದ್ದರು; ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next