ಕೊಲೊಂಬೋ: ಶ್ರೀಲಂಕಾದ ರಾಜಧಾನಿ ಕೊಲೊಂಬೋದ ಸುತ್ತಮುತ್ತ ವಿವಿಧೆಡೆ ಬಾಂಬ್ ಸ್ಪೋಟ ಸಂಭವಿಸಿರುವುದಾಗಿ ಇಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಈ ಬಾಂಬ್ ಸ್ಪೋಟಗಳಲ್ಲಿ ಕನಿಷ್ಟ 129 ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಮೂರು ಚರ್ಚ್‌ಗಳಲ್ಲಿ ಹಾಗೂ ಮೂರು ಫೈವ್ ಸ್ಟಾರ್ ಹೊಟೇಲುಗಳಲ್ಲಿ ಬಾಂಬ್ ಸ್ಪೋಟ ಸಂಭವಿಸಿದೆ.
Advertisement
ಕೊಚ್‌ಚಿಕಾಡೆಯಲ್ಲಿರುವ ಸೈಂಟ್ ಆಂಟೋನಿ ಚರ್ಚ್, ಕಟುವಾಪಿಟಿಯಾದಲ್ಲಿರುವ ಸೈಂಟ್ ಸೆಬಾಸ್ಟಿಯನ್ ಚರ್ಚ್ ಮತ್ತು ಬಟ್ಟಿಕಲೋವಾ ಎಂಬಲ್ಲಿರುವ ಚರ್ಚ್‌ಗಳಲ್ಲಿ ಬಾಂಬ್ ಸ್ಪೋಟ ನಡೆದಿರುವುದಾಗಿ ಶ್ರೀಲಂಕಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ನಗರದಲ್ಲಿರುವ ಎರಡು ಫೈವ್ ಸ್ಟಾರ್ ಹೊಟೇಲುಗಳಲ್ಲೂ ಬಾಂಬ್ ಸ್ಪೋಟ ಸಂಭವಿಸಿರುವ ಕುರಿತಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಲ್ಲಿನ ಶಾಂಗ್ರಿ ಲಾ, ಸಿನಾಮೊನ್ ಗ್ರ್ಯಾಂಡ್ ಹಾಗೂ ಕಿಂಗ್ಸ್ ಬರಿ ಹೊಟೇಲುಗಳಲ್ಲಿ ಸ್ಪೋಟ ನಡೆದಿದೆ.