Advertisement
ಮಣ್ಣಿನಡಿ ಸಿಲುಕಿರುವ ಇತರರಿಗಾಗಿ ಕಾರ್ಯಾಚರಣೆ ತೀವ್ರಗೊಳಿಸಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್ ) ಸಿಬ್ಬಂದಿ, ಕಮಾಂಡೋ, ತಮಿಳುನಾಡಿನ ಅಗ್ನಿ ಶಾಮಕ ದಳ ಸೇರಿದಂತೆ ಸುಮಾರು 170 ಮಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೃಹತ್ ಗಾತ್ರದ ಕಲ್ಲುಗಳು ಇರುವುದರಿಂದ ಸಂತ್ರಸ್ತರ ಪತ್ತೆ ಹಚ್ಚಲು ಸ್ಕ್ಯಾನಿಂಗ್ ಯಂತ್ರಕ್ಕೆ ಕಷ್ಟವಾಗುತ್ತಿದೆ ಎಂದು ರಕ್ಷಣಾಧಿಕಾರಿ ಸುವಿಕ್ಕೈನ್ ರಾಜ್ ತಿಳಿಸಿದ್ದಾರೆ.
Related Articles
Advertisement
ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ:ಭಾರೀ ಮಳೆಗೆ ತಿರುವಣ್ಣಾಮಲೈಯಲ್ಲಿ ಭೂ ಕುಸಿತವಾಗಿ ಬಹು ಪ್ರಮಾಣದ ಕೆನ್ನೀರು ಹರಿದು ಬರುತ್ತಿರುವ ದೃಶ್ಯವು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯವು 7 ಮಂದಿ ಮೃತಪಟ್ಟ ಪ್ರದೇಶಕ್ಕಿಂತ ಸುಮಾರು ದೂರದಲ್ಲಿರುವ ಮನೆಯದ್ದಾಗಿದೆ. ಈ ವಿಡಿಯೋದಲ್ಲಿ ಕನ್ನೇರಿನ ಜೊತೆ ಹಲವು ವಸ್ತುಗಳು ಹರಿದು ಬರುತ್ತಿರುವ ದೃಶ್ಯವು ಕಾಣಬಹುದಾಗಿದೆ. ಪರಿಹಾರ ಘೋಷಣೆ:
ಭೂ ಕುಸಿತದ ಪರಿಣಾಮ 7 ಮಂದಿ ಮೃತಪಟ್ಟ ಕುಟುಂಬಕ್ಕೆ ತಮಿಳುನಾಡು ರಾಜ್ಯ ಸರಕಾರವು 5 ಲಕ್ಷ ರೂ.ಪರಿಹಾರ ಘೋಷಿಸಿದೆ. ಹಾಗೇಯೇ ಭಾರೀ ಮಳೆಯಿಂದ ತೊಂದರೆಗೊಳಗಾದ ವಿಲ್ಲುಪುರಂ, ಕ್ಯೂಡಾಲೊರ್ ಮತ್ತು ಕಲ್ಲಕುರ್ಚಿ ಜಿಲ್ಲೆಯ ಪ್ರತಿ ಕುಟುಂಬದ ಸದಸ್ಯರಿಗೆ 2 ಸಾವಿರ ರೂ.ಪರಿಹಾರ ಘೋಷಿಸಿದೆ.