Advertisement

ಬಹುಭಾಷಾ ಸಾಹಿತಿ ಅಬ್ದುಲ್‌ ಮಜೀದ್‌ ಇನ್ನಿಲ್ಲ

10:52 PM Nov 23, 2019 | Team Udayavani |

ಬೆಂಗಳೂರು: ಬಹುಭಾಷಾ ಸಾಹಿತಿ ಅಬ್ದುಲ್‌ ಮಜೀದ್‌ ಖಾನ್‌ (83) ನಿಧನರಾಗಿದ್ದಾರೆ. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಶುಕ್ರವಾರ ಇಹಲೋಕ ತ್ಯಜಿಸಿದರು. ಶಿವಮೊಗ್ಗ ಜಿಲ್ಲೆ ಸಾಗರದ ಮೂಲದವರಾಗಿದ್ದ ಅಬ್ದುಲ್‌ ಮಜೀದ್‌ ಖಾನ್‌ ಕನ್ನಡ, ಉರ್ದು ಮತ್ತು ಆಂಗ್ಲ ಭಾಷೆಗಳಲ್ಲಿ ಕವಿತೆ, ಕತೆ ಮತ್ತು ಕಾದಂಬರಿಗಳನ್ನು ರಚಿಸಿದ್ದಾರೆ. ಅಲ್ಲದೆ ಅನುವಾದಕರಾಗಿಯೂ ಕೆಲಸ ಮಾಡಿದ್ದಾರೆ. ಸಾಹಿತ್ಯ ಸೇವೆಗಾಗಿ ಅಬ್ದುಲ್‌ ಮಜೀದ್‌ ಖಾನ್‌ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಉರ್ದು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next