Advertisement

City Lockdown; ಮುಲ್ತಾನ್‌ ದಾಖಲೆಯ ಮಾಲಿನ್ಯ: ನಗರ ಲಾಕ್‌ಡೌನ್‌!

02:04 AM Nov 10, 2024 | Team Udayavani |

ಹೊಸದಿಲ್ಲಿ: ನೆರೆಯ ಪಾಕಿಸ್ಥಾನದಲ್ಲಿ ವಾಯಮಾಲಿನ್ಯ ಗರಿಷ್ಠಮಟ್ಟಕ್ಕೆ ತಲುಪಿದ್ದು, ಹೊಗೆಯ ಕಾರಣಕ್ಕೆ ಹಲವು ನಗರಗಳನ್ನು ಒತ್ತಾಯಪೂರ್ವಕವಾಗಿ ಲಾಕ್‌ಡೌನ್‌ ಮಾಡಲಾಗುತ್ತಿದೆ. ನಮ್ಮ ದಿಲ್ಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಸರಾಸರಿ 358 ಇದ್ದರೆ ಪಾಕಿಸ್ಥಾನದ ಮುಲ್ತಾನ್‌ನಲ್ಲಿ ಇದು 2153ರಷ್ಟಿದೆ. ಹಾಗಾಗಿ, ಮುಲ್ತಾನ್‌ ಸೇರಿ ಹಲವು ನಗರಗಳನ್ನು ಲಾಕ್‌ಡೌನ್‌ ಮಾಡಲಾಗುತ್ತಿದೆ.

Advertisement

ಮಾರುಕಟ್ಟೆಗಳನ್ನು ರಾತ್ರಿ 8ರ ವರೆಗೆ ಮಾತ್ರವೇ ತೆರೆದಿರಲು ಅವಕಾಶ ನೀಡಲಾಗಿದೆ. ಮಾಲಿನ್ಯಕ್ಕೆ ಕಾರಣವಾಗುವ ವಾಹನ ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಪಿಎಂ 2.5 ಸಾಂದ್ರತೆಯು ಪ್ರತೀ ಘನ ಮೀಟರ್‌ಗೆ 947 ಮೈಕ್ರೋಗ್ರಾಂಗಳಿಗೆ ತಲುಪಿದೆ, ಇದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಮಟ್ಟಕ್ಕಿಂತ 190 ಪಟ್ಟು ಹೆಚ್ಚು.

Advertisement

Udayavani is now on Telegram. Click here to join our channel and stay updated with the latest news.

Next