ಮುಂಬಯಿ: ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭವು ಜ. 28 ರಂದು ಸಂಜೆ ಸಾಕಿನಾಕಾ ಪೆನಿನ್ಸೂಲಾ ಹೊಟೇಲ್ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಹಳೆವಿದ್ಯಾರ್ಥಿ ಸಂಘ ಮುಂಬಯಿ ಘಟಕದ ಅಧ್ಯಕ್ಷ ಸಿಎ ಸೋಮನಾಥ ಕುಂದರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ| ಕೆ. ಆರ್. ಶಂಕರ್ (ಪತ್ನಿ ರಾಜಲಕ್ಷಿ¾à ಶಂಕರ್, ಮಕ್ಕಳಾದ ಮಾ| ಕಾರ್ತಿಕ್ ಶಂಕರ್ ಹಾಗೂ ಕು| ಪ್ರಿಯಾ ಶಂಕರ್ ಅವರನ್ನೊಳಗೊಂಡು) ಹಾಗೂ ವಿಶ್ರಾಂತ ಪ್ರಾಚಾರ್ಯ ಪ್ರೊ| ಎಸ್. ಗೋವಿಂದ ಭಟ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕಾಲೇಜಿನ ಹಳೆ ವಿದ್ಯಾರ್ಥಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಶಿಮಂತೂರು ಚಂದ್ರಹಾಸ ಶೆಟ್ಟಿ ಮತ್ತು ಚಂದ್ರಕಲಾ ಸಿ ಶೆಟ್ಟಿ ದಂಪತಿ, ಸಿಎ ಅಶ್ವಜಿತ್ ಹೆಜ್ಮಾಡಿ ಮತ್ತು ರವೀಂದ್ರ ಪುತ್ರನ್ ಯುಗಾಂಡ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕುಯನ್ನಿತ್ತು ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ವಿಜಯ ಕಾಲೇಜು ಮುಲ್ಕಿ ಗರ್ವನಿಂಗ್ ಕೌನ್ಸಿಲಿಂಗ್ ಅಧ್ಯಕ್ಷೆ ಶಮಿನಾ ಆಳ್ವ, ಗೌರವ ಅತಿಥಿಗಳಾಗಿ ಕಾಲೇಜಿನ ಹಾಲಿ ಪ್ರಾಂಶುಪಾಲ ಡಾ| ಕೆ. ನಾರಾಯಣ, ಹಳೆ ವಿದ್ಯಾರ್ಥಿ ಸಂಘ ಮುಲ್ಕಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಘಟಕದ ಗೌರವಾಧ್ಯಕ್ಷ ಶಿರ್ವಾ ನಿತ್ಯಾನಂದ ಹೆಗ್ಡೆ, ಉಪಾಧ್ಯಕ್ಷ ಆನಂದ್ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮುಂಬಯಿ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ನ್ಯಾಯವಾದಿ ಶೇಖರ್ ಎಸ್. ಭಂಡಾರಿ, ಸಿಎ ಕಿಶೋರ್ ಕುಮಾರ್, ಭಾಸ್ಕರ್ ಎಂ. ಸಾಲ್ಯಾನ್, ಅಶೋಕ್ ದೇವಾಡಿಗ, ಸಿಎ ಸುಂದರ್ ಎಸ್. ಭಂಡಾರಿ, ಸಲಹಾ ಸಮಿತಿಯ ಸದಸ್ಯರುಗಳಾದ ಐಕಳ ಹರೀಶ್ ಶೆಟ್ಟಿ, ಡಾ| ರತ್ನಾಕರ್ ಶೆಟ್ಟಿ, ಕಿಶೋರ್ ಕುಮಾರ್ ಕುತ್ಯಾರ್, ಮೋಹನ್ ಕೆ. ಶೆಟ್ಟಿ, ರಂಜನ್‌ಕುಮಾರ್ ಶೆಟ್ಟಿ, ನವೀನ್‌ಚಂದ್ರ ಬಂಗೇರ, ಸತೀಶ್ ಶೆಟ್ಟಿ (ಪೆನಿನ್ಸೂಲಾ), ಸಿ. ಆರ್. ಮುಲ್ಕಿ, ಐಕಳ ಗುಣಪಾಲ್ ಶೆಟ್ಟಿ, ರಾಜೇಂದ್ರ ಕೆ. ಶೆಟ್ಟಿ, ನಿತ್ಯಾನಂದ ಪ್ರಭು, ಸಿಎ ಎನ್. ಲೀಲಾಧರ್, ಅರುಣ್‌ಕುಮಾರ್ ಕೋಟ್ಯಾನ್, ಕಾರ್ಯದರ್ಶಿ ವಾಸುದೇವ ಎಂ. ಸಾಲ್ಯಾನ್, ಮೋಹನ್‌ದಾಸ್ ಹೆಜ್ಮಾಡಿ, ಸುನೀಲ್ ಶೆಟ್ಟಿ ಹಾಗೂ ಸಿಎ ದಯಾನಂದ್ ಶೆಟ್ಟಿ, ಡಾ| ಹರೀಶ್ ಕುಮಾರ್, ಕಿಶೋರ್ ರಾವ್, ಸಿಎ ಕಿಶೋರ್ ಸುವರ್ಣ, ಭಾಸ್ಕರ್ ಬಿ. ಶೆಟ್ಟಿ, ವಾಸುದೇವ ಎಂ. ಸಾಲ್ಯಾನ್, ರತ್ನಾಕರ್ ಆರ್. ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್