Advertisement
ಎÇÉೆಲ್ಲಿಂದಲೋ ಅಪರೂಪದ ಹಲಸಿನ ತಳಿಗಳನ್ನು ತಂದು ತಮ್ಮ ಜಮೀನಿನಲ್ಲಿ ಬೆಳೆಸುತ್ತಿ¨ªಾರೆ ವೆಂಕಟಕೃಷ್ಣ ಶರ್ಮ. ಅವರು ಈ ಕೆಲಸ ಕೈಗೆತ್ತಿಕೊಳ್ಳಲು ಏನು ಕಾರಣ ಎಂದೊಬ್ಬರು ಕೇಳಿದಾಗ ಶರ್ಮರ ಸರಳ ಉತ್ತರ, ಎಲ್ಲ ಜಾತಿಯ ಹಲಸಿನ ಮರಗಳು ನನ್ನ ಜಮೀನಿನಲ್ಲಿ ಇರಬೇಕು ಎಂಬ ಆಶೆ. ಬಹು ಉಪಯೋಗಿ ಆಗಿದ್ದರೂ ಅಲಕ್ಷಿತವಾಗಿರುವ ಹಲಸನ್ನು ದಕ್ಷಿಣ ಕನ್ನಡ ಜಿÇÉೆಯಲ್ಲಿ ಮುಂಚೂಣಿಗೆ ತರಲಿಕ್ಕಾಗಿ ಹಲಸು ಸ್ನೇಹಿ ಕೂಟ ಸ್ಥಾಪಿಸಿದವರು ವೆಂಕಟಕೃಷ್ಣ ಶರ್ಮರು. ಹಲಸನ್ನು ಜನಪ್ರಿಯಗೊಳಿಸಲಿಕ್ಕಾಗಿ ಈ ಕೂಟದ ವತಿಯಿಂದ ಹಲವು ಹಲಸು ಮೇಳ ಸಂಘಟಿಸಿದವರು. ರುಚಿ ನೋಡಿ ತಳಿ ಆಯ್ಕೆ ಕಾರ್ಯಕ್ರಮದ ಮೂಲಕ 15 ಉತ್ತಮ ಸ್ಥಳೀಯ ಹಲಸು ತಳಿಗಳನ್ನು ಆಯ್ಕೆ ಮಾಡಲು ಕಾರಣಕರ್ತರು. ಇವುಗಳ ಕಸಿಕಟ್ಟಿ ಆಸಕ್ತರಿಗೆಲ್ಲ ಹಂಚಿದ ಹಲಸು ಸ್ನೇಹಿ ಶರ್ಮರು.
Related Articles
Advertisement
ಮನೆ ಎದುರಿನ ಅಂಗಳದಲ್ಲಿ ವಿವಿಧ ತರಕಾರಿ ಗಿಡಗಳ ಸಾಲುಸಾಲು. ಬದನೆ, ಬೀನ್ಸ್, ಹರಿವೆ, ಮರಬೆಂಡೆ, ತೊಂಡೆ, ಬಹುವಾರ್ಷಿಕ ಬೆಂಡೆ, ಟೊಮೆಟೊ ಇತ್ಯಾದಿ. ನಡುನಡುವೆ ಗುಲಾಬಿ, ಬುಗುಡು, ದಾಸವಾಳ ಇತ್ಯಾದಿ ಹೂಗಿಡಗಳು. ನೀವು ಬೆಳೆಸಿರುವ ಗಿಡಗಳು ನನಗೂ ಬೇಕಾಗಿತ್ತು. ಸಸಿಗಳು ಎಲ್ಲಿ ಸಿಗುತ್ತವೆ? ಎಂದು ನಮ್ಮಲ್ಲಿ ಹಲವರು ಕೇಳಿದಾಗ, ಅವರಿಗೆಲ್ಲ ಒಂದು ಅಚ್ಚರಿ ಕಾದಿತ್ತು. ವೆಂಕಟಕೃಷ್ಣ ಶರ್ಮರು ನಮ್ಮನ್ನು ಅವರ ನರ್ಸರಿಗೆ ಕರೆದೊಯ್ದು, ನೋಡಿ, ಇಲ್ಲುಂಟು ಸಸಿಗಳು. ನಿಮಗೆ ಬೇಕಾದ್ದನ್ನು ತಗೊಳ್ಳಿ. ಚೆನ್ನಾಗಿ ನೀರು ಹಾಕಿ ಬೆಳೆಸಿ. ಅನಂತರ ನೀವೂ ಬೇರೆಯವರಿಗೆ ಹೀಗೆ ಸಸಿ ಕೊಡಿ ಎಂದು ಬಿಟ್ಟರು. ಅದು ಶರ್ಮರ ಅಪ್ಪಟ ಸಸ್ಯಪ್ರೀತಿ. ನೀರುಗುಜ್ಜೆ ಮತ್ತು ಸೀಬೆ ಸಸಿಗಳನ್ನು ನಮ್ಮಲ್ಲಿ ಹಲವರು ಅಲ್ಲಿಂದ ಎತ್ತಿಕೊಂಡರು. ಇನ್ನು ಕೆಲವರು ಹರಿವೆ ಬೀಜ ತಗೊಂಡರು. ಮತ್ತೆ ಕೆಲವರಿಗೆ ಹಿಪ್ಪಲಿ ಮತ್ತು ತೊಂಡೆಬಳ್ಳಿಯ ತುಂಡುಗಳನ್ನು ಕತ್ತರಿಸಿ ಕೊಟ್ಟರು ಶರ್ಮರು. ಅವರು ಜೋಪಾನದಿಂದ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಬೆಳೆಸಿದ್ದ ಸಸಿಗಳನ್ನು ಕೆಲವರು ಆಸೆಯಿಂದ ಎತ್ತಿಕೊಂಡರಾದರೂ, ಕೊನೆಗೆ ಅವನ್ನು ಅÇÉೇ ಬಿಟ್ಟು ಬಂದರು ಆ ಸಸಿಗಳನ್ನು ಉಳಿಸಿಕೊಳ್ಳಲು ತಮ್ಮಿಂದಾಗದು ಎಂಬ ಕಾರಣಕ್ಕಾಗಿ. ಹಾಗೇನಾದರೂ ಆದರೆ, ಶರ್ಮರ ವಿಶ್ವಾಸಕ್ಕೆ ಧಕ್ಕೆಯಾದೀತೆಂಬ ಆತಂಕ ಅವರಿಗೆ. ಹಣ್ಣುಗಳ ತೋಟ ಹಲವರು ಮಾಡಿರಬಹುದು. ಆದರೆ, ಹಲಸಿನಂತಹ ನಿರ್ಲಕ್ಷಿತ ಹಣ್ಣಿನ ತಳಿಗಳ ಸಂರಕ್ಷಣೆಗಾಗಿ ಶರ್ಮರಂತೆ ಪಣ ತೊಟ್ಟವರು ವಿರಳ. ಹಾಗೆಯೇ, ಅಡಿಕೆ ತೋಟ ಮಾಡಿದವರು ಹಲವರಿ¨ªಾರೆ. ಆದರೆ, ತಮ್ಮ ತೋಟ ನೋಡಲು ಬಂದವರಿಗೆಲ್ಲ ನೀವೂ ನೆಟ್ಟು ಬೆಳೆಸಿ ಎಂದು ಸಸಿ ಕೊಡುವ ದೊಡ್ಡ ಮನಸ್ಸಿನವರು ಅಪರೂಪ.
ವೆಂಕಟಕೃಷ್ಣ ಶರ್ಮರ ಕೊಡುವ ಗುಣ ತಿಳಿದವರಿಗೆ ಇದೆಲ್ಲ ಹೊಸತಲ್ಲ. ವೇತನವನ್ನೇ ಪಡೆಯದೆ ಅವರು ಮುಳಿಯ ಶಾಲೆಯಲ್ಲಿ ಪಾಠ ಮಾಡಿದ್ದನ್ನು ಸಮೃದ್ಧಿಯ ಗಿಡಗೆಳೆತನ ಸಂಘದ ಅಧ್ಯಕ್ಷ$ ಕಮ್ಮಾಜೆ ಶಂಕರನಾರಾಯಣ ಭಟ್ ನೆನಪು ಮಾಡಿಕೊಂಡರು. ಆ ಶಾಲೆ ಉಳಿಸಿಕೊಳ್ಳಬೇಕೆಂದು, ಅಲ್ಲಿ ಪಾಠ ಮಾಡಿದ್ದು ಮಾತ್ರವಲ್ಲ, ಶಾಲಾ ಮಕ್ಕಳಿಗೆ ಅಡುಗೆ ಮಾಡಿ ಬಡಿಸಿದ್ದರು ಮತ್ತು ಶಾಲೆಯಲ್ಲಿ ತೋಟವನ್ನೂ ಬೆಳೆಸಿದ್ದರು ಶರ್ಮರು. ಅವರ ಎಲ್ಲ ಕೆಲಸಗಳಿಗೆ ಪತ್ನಿ ವಾಣಿಯವರ ಬೆಂಬಲ. ಇಂಜಿನಿಯರ್ ಮಗ ರಾಧಾಕೃಷ್ಣ ಜೊತೆಗಿರುವುದು ಶರ್ಮರಿಗೆ ಕೈಬಲ. ತನ್ನೂರಿನಲ್ಲಿ ನೆಲೆ ಕಂಡುಕೊಳ್ಳುವ ಕೃಷಿಕನೊಬ್ಬ ಹೇಗೆ ಅಲ್ಲಿನ ಸಮುದಾಯಕ್ಕೆ ಸೇವೆ ಸಲ್ಲಿಸಬಲ್ಲ ಎಂದು ತಿಳಿಯಬೇಕಾದರೆ ಶರ್ಮರೊಂದಿಗೆ ಓಡಾಡಬೇಕು. ಅವರ ಅಪ್ಪಟ ಸಸ್ಯಪ್ರೀತಿ ನಮ್ಮಲ್ಲೂ ಚಿಗುರಬೇಕಾದರೆ. ಅವರಿಂದ ಪಡೆದ ಸಸಿಗಳನ್ನು ಪ್ರೀತಿಯಿಂದ ಬೆಳೆಸಬೇಕು. ಆದರೆ, ಅವರ ದೊಡ್ಡ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನಮ್ಮೆಲ್ಲ ಸಣ್ಣತನಗಳನ್ನು ಮೀರಿ ಬದುಕಬೇಕು. (ಸಂಪರ್ಕ 9480200832 ರಾತ್ರಿ 7-8 ಗಂಟೆ) – ಅಡೂxರು ಕೃಷ್ಣ ರಾವ…