Advertisement

ದ್ರೋಹ ಬಗೆದ ಮುಲಾಯಂ, ಎಸ್‌ಪಿಗೆ ಪಾಠ ಕಲಿಸಿ: ಶಾಹಿ ಇಮಾಮ್‌ ಬುಖಾರಿ

11:37 AM Jan 02, 2017 | Team Udayavani |

ರಾಮಪುರ : ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಅವರು ಉತ್ತರ ಪ್ರದೇಶದ ಮುಸ್ಲಿಮರಿಗೆ ದ್ರೋಹ ಬಗೆದಿದ್ದಾರೆ; ಹಾಗಾಗಿ ಅವರಿಗೆ ಹಾಗೂ ಅವರ ಪಕ್ಷಕ್ಕೆ ಸರಿಯಾದ ಪಾಠವನ್ನು ಕಲಿಸುವ ಸಮಯ ಈಗ ವಿಧಾನಸಭೆ ಚುನಾವಣೆಯ ರೂಪದಲ್ಲಿ ಜನರಿಗೆ ಒದಗಿ ಬಂದಿದೆ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್‌, ಸೈಯದ್‌ ಅಹ್ಮದ್‌ ಬುಖಾರಿ ಕಟುವಾಗಿ ಹೇಳಿದ್ದಾರೆ.

Advertisement

ಉತ್ತರ ಪ್ರದೇಶದ ಮೊದಲ ಕುಟುಂಬವಾಗಿರುವ ಮುಲಾಯಂ ಸಿಂಗ್‌ ಯಾದವ್‌ ಅವರಿಗೆ ತಮ್ಮ  ಪುತ್ರನಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರೊಂದಿಗೆ ತೀವ್ರವಾದ ಭಿನ್ನಮತವಿದ್ದು ಅದೀಗ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ಪರಾಕಾಷ್ಠೆಯನ್ನು ತಲುಪುತ್ತಿದೆ. 

ಅಖೀಲೇಶ್‌ ಅವರು ತಮ್ಮ ತಂದೆ ಮುಲಾಯಂ ಅವರನ್ನು ಪಕ್ಷಾಧ್ಯಕ್ಷ ಹುದ್ದೆಯಿಂದ ಕಿತ್ತು ಹಾಕಿ ತಾವೇ ಪಕ್ಷಾಧ್ಯಕ್ಷನೆಂದು ಘೋಷಿಸಿಕೊಂಡು ತಂದೆ ಮುಲಾಯಂ ಅವರನ್ನು ಪಕ್ಷದ ಸಂಸ್ಥಾಪಕನ ಹುದ್ದೆಗೆ ಸೀಮಿತಗೊಳಿಸಿ ಅವರ ಪದಚ್ಯುತಿಗೆ ಮುನ್ನಡಿ ಬರೆದಿದ್ದಾರೆ.

ಬುಖಾರಿ ಅವರು ತಮ್ಮ ಹೇಳಿಕೆಯಲ್ಲಿ ಹೀಗೆ ಸ್ಪಷ್ಟಪಡಿಸಿದ್ದಾರೆ : ಉತ್ತರ ಪ್ರದೇಶದ ಮುಸ್ಲಿಂ ಮತದಾರರು ಇನ್ನು ಸಮಾಜವಾದಿ ಪಕ್ಷದ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಬೇಕು; ಹಾಗೆಯೇ ಅದರ ನಾಯಕರನ್ನು ಕೂಡ; ಸಮಾಜವಾದಿ ಪಕ್ಷಕ್ಕೆ ಬದಲಾದ ಆಯ್ಕೆಯನ್ನು ಪರಿಗಣಿಸುವುದಕ್ಕೆ ಈಗ ರಾಜ್ಯದ ಮುಸ್ಲಿಂ ಜನರಿಗೆ ಕಾಲ ಕೂಡಿ ಬಂದಿದೆ.

“ಕೇಂದ್ರದಲ್ಲಿ ಸರಕಾರ ರಚಿಸುವುದಕ್ಕೆ ಬಿಜೆಪಿಗೆ ಅಂದು ಸಮಾಜವಾದಿ ಪಕ್ಷ ಬೆಂಬಲ ನೀಡಿತ್ತು. ಆಗ ಮುಲಾಯಂ ಸಿಂಗ್‌ ಯಾದವ್‌ ಅವರ ಕುಟುಂಬದ ಕೇವಲ ಐದು ಸಂಸದರು ಮಾತ್ರವೇ ಲೋಕಸಭೆಗೆ ಮರಳಿದ್ದರು ಎಂದು ಶಾಹಿ ಇಮಾಮ್‌ ಹೇಳಿದ್ದಾರೆ. 

Advertisement

2012ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬುಖಾರಿ ಅವರು ಸಮಾಜವಾದಿ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲವನ್ನು ಘೋಷಿಸಿದ್ದರಲ್ಲದೆ ಮುಲಾಯಂ ಜತೆಗೆ ವೇದಿಕೆಯನ್ನೂ ಹಂಚಿಕೊಂಡಿದ್ದರು. ಈಗ ಅದೇ ಬುಖಾರಿ, “ಮುಲಾಯಂ ಮುಸ್ಲಿಮರಿಗೆ ದ್ರೋಹ ಬಗೆದಿದ್ದಾರೆ; ವಂಚಿಸಿದ್ದಾರೆ’ ಎಂದು ಗುಡುಗಿದ್ದಾರೆ.

2012ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಮಾಜವಾದಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ  ರಾಜ್ಯದ ಮುಸ್ಲಿಮರಿಗೆ ನೀಡಿದ್ದ  ಭರವಸೆಗಳನ್ನು ಈಡೇರಿಸಿಲ್ಲ; ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದು ಬುಖಾರಿ, ಮುಲಾಯಂ ವಿರುದ್ಧ ಕಿಡಿ ಕಾರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next