Advertisement

ಮುಕ್ಕ: ವೇಲ್‌ ಶಾರ್ಕ್‌ ಸಾವು

09:48 AM Jun 30, 2019 | Vishnu Das |

ಸುರತ್ಕಲ್‌: ಮುಕ್ಕ ಪರಿಸರದ ಸಮುದ್ರ ತೀರದಲ್ಲಿ ಶನಿವಾರ ಮತ್ತೂಂದು ವೇಲ್‌ ಶಾರ್ಕ್‌ (ಮಾಸ್ಕ್) ಪತ್ತೆಯಾಗಿದೆ. ಜೀವನ್ಮರಣದ ಸ್ಥಿತಿಯಲ್ಲಿದ್ದ ವೇಲ್‌ ಶಾರ್ಕ್‌ ಬಳಿಕ ಸಾವನ್ನಪ್ಪಿದೆ.

Advertisement

ಇತ್ತೀಚಿನ ದಿನಗಳಲ್ಲಿ ಮುಕ್ಕ ಪರಿಸರದಲ್ಲಿ ವಿವಿಧ ಜಾತಿಯ ಬೃಹತ್‌ ಮೀನುಗಳು ಮೃತ ಸ್ಥಿತಿಯಲ್ಲಿ ಕಂಡುಬಂದಿವೆ. ಮೂರು ಬಾರಿ ಡಾಲ್ಫಿನ್‌ ಮೀನುಗಳು ಮೃತಪಟ್ಟು ದಡಕ್ಕೆ ಬಂದಿದ್ದವು. ಶನಿವಾರ ಸಿಕ್ಕಿದ ಮೀನು ಸುಮಾರು 4 ಮೀಟರ್‌ ಉದ್ದವಿದ್ದು, ಜೀವನ್ಮರಣ ಸ್ಥಿತಿಯಲ್ಲಿತ್ತು. ಸ್ಥಳೀಯ ಕಾವಲು ಸಿಬಂದಿ ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಅರಣ್ಯಾ ಧಿಕಾರಿಗಳು ಆಗಮಿಸಿ ಮಹಜರು ನಡೆಸಿದರು. ಸಜೀವ ಮಾಸ್ಕ್ನ ಬೆಲೆ ಸುಮಾರು 4 ಲಕ್ಷ ರೂ. ಇದೆ ಎನ್ನಲಾಗಿದೆ. ಇದು ತಿನ್ನಲು ಯೋಗ್ಯವಲ್ಲದ ಕಾರಣ ಮೀನುಗಾರರೂ ಹಾಗೆಯೇ ಬಿಟ್ಟಿದ್ದರು. ಇದು ಅಪರೂಪದ, ಅಳಿವಿನಂಚಿನಲ್ಲಿರುವ ಮೀನು.

ಮೃತ ಮೀನನ್ನು ಬಳಿಕ ಕ್ರೇನ್‌ ಮೂಲಕ ಸಾಗಿಸಿ ಸನಿಹದಲ್ಲಿ ದಫ‌ನ ಮಾಡಲಾಯಿತು.ಎರಡು ತಿಂಗಳಿನಿಂದ ಸತತ ಮೀನುಗಳು ಸಾವನ್ನಪ್ಪುತ್ತಿದ್ದರೂ ಇದುವರೆಗೂ ಕಾರಣ ಕಂಡು ಹಿಡಿಯಲಾಗಿಲ್ಲ. ಎರಡು ಬಾರಿ ಅಧಿ ಕಾರಿಗಳು ಮಹಜರು ನಡೆಸಿ ದಾಖಲೆ ಸಂಗ್ರಹಿಸಿದ್ದಾರೆ. ಬೃಹತ್‌ ಮೀನುಗಳ ಸಾವಿಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next