Advertisement

ಜಿಯೋ ಫೈಬರ್‌ ಬ್ರಾಡ್‌ಬಾಂಡ್‌ ಆರಂಭ: ಮುಕೇಶ್‌ ಅಂಬಾನಿ ಘೋಷಣೆ

11:41 AM Jul 05, 2018 | Team Udayavani |

ಮುಂಬಯಿ : ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮುಕೇಶ್‌ ಅಂಬಾನಿ ಅವರು ಗೃಹ ಮತ್ತು ಉದ್ಯಮ ಸಂಸ್ಥೆಗಳಿಗಾಗಿ ಜಿಯೋ ಫೈಬರ್‌ ಬ್ರಾಡ್‌ ಬ್ಯಾಂಡ್‌ ಸೇವೆಯನ್ನು ಆರಂಭಿಸಿದ್ದಾರೆ. 

Advertisement

ಈ ಮೂಲಕ ಆರ್‌ಐಎಲ್‌ ಫೈಬರ್‌-ಟು ದ -ಹೋಮ್‌ ಸೇವಾ ಕ್ಷೇತ್ರಕ್ಕೆ ಕಾಲಿಟ್ಟಂತಾಗಿದೆ. ಕಳೆದ ವರ್ಷದಿಂದ ಈಚೆಗೆ ರಿಲಯನ್ಸ್‌ ಜಿಯೋ ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿದ್ದು ಅದೀಗ 21.5 ಕೋಟಿ ಆಗಿದೆ ಎಂದು ಮುಕೇಶ್‌ ಅಂಬಾನಿ ಇದೇ ವೇಳೆ ಪ್ರಕಟಿಸಿದರು. 

ಮುಂಬಯಿಯಲ್ಲಿ ನಡೆದ ಆರ್‌ಐಎಲ್‌ನ 41ನೇ ಎಜಿಎಂನಲ್ಲಿ ಭಾಷಣ ಮಾಡುತ್ತಾ ಮುಕೇಶ್‌ ಅಂಬಾನಿ ಈ ವಿಷಯವನ್ನು ಪ್ರಕಟಿಸಿದರು. ರಿಲಯನ್ಸ್‌ ಈಗ ತನ್ನ ಸುವರ್ಣ ದಶಕದಲ್ಲಿದೆ ಎಂದವರು ಹೇಳಿದರು. ರಿಲಯನ್ಸ್‌ ಜಿಯೋ ಡೇಟಾ ಬಳಕೆ 240 ಕೋಟಿ ಜಿಬಿ ಆಗಿರುವುದನ್ನು ಕಂಡಿದೆ ಎಂದವರು ಹೇಳಿದರು. 

“ದೇಶದ 1,100 ನಗರಗಳಲ್ಲಿ ಹರಡಿಕೊಂಡಿರುವ ಮನೆಗಳಿಗೆ ಮತ್ತು ಉದ್ಯಮ ಸಂಸ್ಥೆಗಳಿಗೆ ಇದೀಗ ನಾವು ಫೈಬರ್‌ ಕನೆಕ್ಟಿವಿಟಿ ಯನ್ನು ಕಲ್ಪಿಸುತ್ತಿದ್ದೇವೆ’ ಎಂದು ಮುಕೇಶ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next