Advertisement

ಮೂಡುಬಿದಿರೆ: ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಆತ್ಮಹತ್ಯೆ

12:48 AM Apr 18, 2023 | Team Udayavani |

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ, ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ರಾಘು ಕೋಟ್ಯಾನ್‌ ಸಂಪಿಗೆ ಅವರು ಸೋಮವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ತನ್ನ ಮನೆ ಹಿಂಬದಿಯ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವ ಅವರು, ಕೆಲವು ಸಮಯಗಳಿಂದ ಆರ್ಥಿಕ ಸಮಸ್ಯೆಗೊಳಗಾಗಿದ್ದರೆಂದು ತಿಳಿದುಬಂದಿದೆ.

ಸಣ್ಣ ಮಟ್ಟಿನ ಗುತ್ತಿಗೆದಾರರಾಗಿ, ಸಮಾಜಮುಖೀ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next