Advertisement

ಬಿಜೆಪಿಯಿಂದ ಉಚಿತ ಮಾಸ್ಕ್ ವಿತರಣೆ

12:29 PM Jun 27, 2020 | Naveen |

ಮೂಡಿಗೆರೆ: ನಗರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಶುಕ್ರವಾರ ಸಾರ್ವನಿಕರಿಗೆ ಉಚಿತವಾಗಿ ಮಾಸ್ಕ್ ನೀಡಿ ಜನಜಾಗೃತಿ ಮೂಡಿಸಲಾಯಿತು. ಇದರ ಜೊತೆಗೆ ಕೇಂದ್ರ ಸರ್ಕಾರದ 2.0 ವರ್ಷದ ಸಾಧನೆ ಬಗ್ಗೆ ಕರಪತ್ರ ಹಂಚಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಯಶಸ್ವಿ ಆಡಳಿತದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

Advertisement

ಮಾಸ್ಕ್ ವಿತರಣೆ ಕಾರ್ಯಮಕ್ಕೆ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್‌.ರಘು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಮನೋಜ್‌, ಗುರುದತ್‌, ಪ್ರಧಾನ ಕಾರ್ಯದರ್ಶಿ ಬಾಲು, ನಗರ ಅಧ್ಯಕ್ಷ ಸುನೀಲ್‌, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಜಯ್‌ ಗೌಡ ಸೇರಿದಂತೆ ಯುವ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next