Advertisement

ಮೂಡಿಗೆರೆ: ಮಹಿಳೆ ಸಾವಿನ ಸ್ಥಳದಲ್ಲಿ ಮತ್ತೆ ಘೀಳಿಡುತ್ತಿರುವ ಆನೆಗಳು

03:38 PM Nov 23, 2022 | Team Udayavani |

ಮೂಡಿಗೆರೆ: ಅನೆಯಿಂದ ಹತ್ಯೆ ನಡೆದ ಸ್ಥಳದಲ್ಲೆ ನಿನ್ನೆ ರಾತ್ರಿಯಿಂದ ಬುಧವಾರ ಬೆಳಗ್ಗೆ ಎಂಟು ಗಂಟೆವರೆಗೆ ಉನ್ಮಾದದಿಂದ ಮೂರು ಅನೆಗಳು ಬೀಡುಬಿಟ್ಟು ಘೀಳಿಟ್ಟು ಬೆಳೆ ನಾಶ ಮಾಡುತ್ತಿದ್ದರೂ ಓಡಿಸುವ ಬದಲು ಅರಣ್ಯ ಮತ್ತು ಪೊಲೀಸ್ ಇಲಾಖೆ ಮಹಿಳೆಯರು, ಪುರುಷರು ಎನ್ನದೆ ಎಲ್ಲರನ್ನು ಬಂಧಿಸುವತ್ತ, ಭಯ ಸೃಷ್ಟಿಸುವತ್ತ ಗಮನ ಹರಿಸಿರುವುದು ವ್ಯವಸ್ಥೆ ವಿರುದ್ದ ಅಕ್ರೋಶಕ್ಕೆ ಕಾರಣವಾಗಿದೆ.

Advertisement

ಭಾನುವಾರ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಶೋಭಾ ಎಂಬ ರೈತ ಮಹಿಳೆಯನ್ನು ಆಕಳುಗಳಿಗೆ ಮೇವು ಕೊಯ್ಯುವ ಸಂದರ್ಭದಲ್ಲಿ ನರಹಂತಕ ಆನೆ ಹತ್ಯೆ ಮಾಡಿತ್ತು. ಅಲ್ಲೆ ಎರೆಡು ಕಿಮಿ ಅಂತರದ ಹಾರ್ಗೋಡಿನಲ್ಲಿ ಅನಂದ್ ದೇವಾಡಿಗ ಎಂಬುವವರನ್ನು ಹಿಂದೆ ಹತ್ಯೆ ಮಾಡಿತ್ತು. ಅಂದು ಅರಣ್ಯ ಇಲಾಖೆ ನೀಡಿದ ಅಶ್ವಾಸನೆ ಒಂದೂ ನೆರವೇರದ ಕಾರಣ ಮೋನ್ನೆ ಶೋಭಾರವರ ಸಾವಿನ ವೇಳೆ ಜನರ ಅಕ್ರೋಶ ಕಟ್ಟೆ ಒಡೆಯಲು ಕಾರಣವಾಗಿತ್ತು.

ನಂತರ ನಡೆದ ಪ್ರತಿಭಟನೆಗಳಲ್ಲಿ ಕೆಲವರು ಅತಿರೇಕದ ವರ್ತನೆ ತೋರಿದ್ದರು. ಈ ವೇಳೆ ಶಾಸಕರ ಮೇಲೆ ಹಲ್ಲೆ  ಘಟನೆ ನಡೆದಿದ್ದು, ಇದನ್ನು ಗ್ರಾಮಸ್ಥರು ಒಕ್ಕೊರಲಿನಿಂದ ಖಂಡಿಸಿದ್ದು.ಕೆಲವರು ಕ್ಷಮೆ ಕೂಡ ಕೇಳಿದ್ದರು. ಅರಣ್ಯ ಇಲಾಖೆ ಹಾಗೂ ಪೊಲೀಸರ ಮೇಲೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.

ಸಂಜೆ ನಂತರ ಮೂಡಿಗೆರೆ, ಪೊಲೀಸರು ಮತ್ತು ಅರಣ್ಯ ಇಲಾಖೆ ಶವವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಿದ ನಂತರ ಸ್ಥಳೀಯರನ್ನು ಬಂಧಿಸುವ ಕೆಲಸಕ್ಕೆ ಇಳಿದಿದ್ದರು. ಅದರಂತೆ ಅಂದೆ ರಾತ್ರಿ ಸುಮಾರು ಎಂಟು ಜನರನ್ನು ಬಂಧಿಸಲಾಗಿತ್ತು. ಬಂಧನ ಸುದ್ದಿ ತಿಳಿದ ಸುತ್ತಮುತ್ತಲ ಗ್ರಾಮದ ಬಹುತೇಕ ಪುರುಷರು ಹಾಗೂ ಮಹಿಳೆಯರು ಗ್ರಾಮ ತೊರೆದಿದ್ದರು.

ಯಾರನ್ನೂ ಬಂಧಿಸುವುದಿಲ್ಲ ಎಂಬ ಜನಪ್ರತಿನಿಧಿಗಳ ಆಶ್ವಾಸನೆಯ ಮೇರೆಗೆ ಕೆಲವರು ಗ್ರಾಮದಲ್ಲೇ ಉಳಿದಿದ್ದರು. ಆದರೆ ಮಂಗಳವಾರ ರಾತ್ರಿ ಸುಮಾರು 3 ಪೋಲಿಸ್ ರಿಸರ್ವ್ ವ್ಯಾನ್ ಗಳೊಂದಿಗೆ ಗ್ ಇಲ್ಲಿನ ಹುಲ್ಲೆಮನೆ, ಬೈರಿಗದ್ದೆ. ತಳವಾರ. ಕುಂಡ್ರ, ಕಣಗದ್ದೆ ಸೇರಿದಂತೆ ನಾಲ್ಕಾರು ಗ್ರಾಮಗಳಲ್ಲಿ ಅನೇಕರನ್ನು ಬಂಧಿಸಿದ್ದಾರೆ.ಇಡೀ ಗ್ರಾಮವೇ ದಿಗ್ಬ್ರಾಂತವಾಗಿದ್ದು ಬಹುತೇಕರು ಉರನ್ನು ತೊರೆಯುತ್ತಿದ್ದಾರೆ.

Advertisement

ಗ್ರಾಮದಲ್ಲಿ ಸ್ಮಶಾನ ಮೌನ ಅವರಿಸಿದೆ. ಅನೆಗಳು ನಗರದಲ್ಲಿಯು ಸಾವು ಉಂಟು ಮಾಡುವ ದಿನ ದೂರವಿಲ್ಲ ಎಂದು ರಾಜಕಾರಣಿಗಳಿಗೆ, ಅಧಿಕಾರಗಳಿಗೆ ಹಾಗು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇಂದು ಬುಧವಾರ ಬೆಳಗ್ಗೆ ಎಂಟು ಗಂಟೆವರೆಗೆ ಆನೆಗಳು ಸ್ಥಳದಲ್ಲೇ ಗಿಳಿಟ್ಟು ಜನರನ್ನು ಭಯಭೀತಿ ಗೊಳಿಸುತ್ತಿದ್ದರು. ಅವುಗಳನ್ನು ಸ್ಥಳದಿಂದ ಓಡಿಸುವ ಬದಲು ಅರಣ್ಯ ಮತ್ತು ಪೊಲೀಸ್ ಇಲಾಖೆ ತನ್ನ ಸಂಪೂರ್ಣ ಬಲ ಬೆಳೆಸಿ ಬಂಧನದಲ್ಲಿ ತೊಡಗಿದ್ದು. ಗ್ರಾಮಸ್ಥರನ್ನು ಭಯಭೀತಿ ಉಂಟುಮಾಡಿದ್ದು ವ್ಯವಸ್ಥೆ ವಿರುದ್ದ ಇಡೀ ಸುತ್ತಮುತ್ತಲಿನ ಗ್ರಾಮಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next