Advertisement

ದತ್ತಪೀಠದಲ್ಲಿ ಮೊದಲ ಬಾರಿಗೆ ಮುಡಿ ಕಾರ್ಯಕ್ರಮ: ಹರಕೆ ಪೂರೈಸಿದ ಗಂಗಾಧರ್ ಕುಲಕರ್ಣಿ

02:51 PM Dec 28, 2022 | Team Udayavani |

ಚಿಕ್ಕಮಗಳೂರು: ಇತಿಹಾಸದಲ್ಲಿ ಮೊದಲ ಬಾರಿಗೆ ದತ್ತಪೀಠದಲ್ಲಿ ಮುಡಿ ಕಾರ್ಯಕ್ರಮ ನಡೆದಿದೆ. ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ದತ್ತಪೀಠದಲ್ಲಿ ಮುಡಿ ಕೊಟ್ಟಿದ್ದಾರೆ.

Advertisement

ಗಂಗಾಧರ್ ಕುಲಕರ್ಣಿ ಅವರು ಅರ್ಚಕರ ನೇಮಕ, ಮೂರ್ತಿ ಮೆರವಣಿಗೆಗೆ ಹರಕೆ ಹೊತ್ತಿದ್ದರು. ಹೀಗಾಗಿ ಕಳೆದ ನಾಲ್ಕು ವರ್ಷದಿಂದ ಅವರು ಕ್ಷೌರ ಮಾಡಿಸಿರಲಿಲ್ಲ. ಸದ್ಯ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾದ ಹಿನ್ನೆಲೆಯಲ್ಲಿ ದತ್ತಪೀಠದಲ್ಲೇ ಕೇಶಮುಂಡನ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ದೇಶದಲ್ಲೇ ರಾಜ್ಯದ ಪೊಲೀಸರು ಉತ್ತಮ ಎನಿಸಿದ್ದಾರೆ:  ಸಿಎಂ ಬೊಮ್ಮಾಯಿ

ದತ್ತಪೀಠ ಆವರಣದ ಹೋಮ ಮಂಟಪದ ಪಕ್ಕ ಕೇಶಮುಂಡನ ಮಾಡಿಸಿದ್ದು, ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next