ಮುಧೋಳ: ಜಗತ್ತಿನಲ್ಲಿ ಸೈನಿಕ ಹುದ್ದೆಗಿಂತ ಬೇರೆ ಯಾವ ಹುದ್ದೆಯೂ ಶ್ರೇಷ್ಠವಲ್ಲ. ತ್ಯಾಗ, ಬಲಿದಾನ, ದೇಶಕ್ಕಾಗಿ ಸಮರ್ಪಣಾ
ಮನೋಭಾವ ಬೆಳೆಯುವುದು ಸೈನ್ಯದಲ್ಲಿ ಮಾತ್ರ ಎಂದು ಭಾರತೀಯ ಸೇನೆಯ ಮಾಜಿ ಉಪ ಮುಖ್ಯಸ್ಥ ರಮೇಶ ಹಲಗಲಿ ಹೇಳಿದರು.
Advertisement
ನಗರದಲ್ಲಿ ಸಪ್ತಸ್ವರ ಸಂಗೀತ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ನೆಪ ಹೇಳುವುದನ್ನು ಬಿಟ್ಟು ನಿರಂತರ ಪ್ರಯತ್ನಶೀಲರಾದಾಗ ಮಾತ್ರ ಅಂದುಕೊಂಡಿರುವ ಗುರಿ ಸಾಧನೆ ಸಾಧ್ಯ ಎಂದರು.
Related Articles
Advertisement
ಸಪ್ತಸ್ವರ ಸಂಸ್ಥೆ ಮುಖ್ಯಸ್ಥೆ ಜ್ಯೋತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಾ ಲಿಂಗದ ಅಧ್ಯಕ್ಷತೆ ವಹಿಸಿದ್ದರು. ಮಾಲಾ ಪಾಟೀಲ, ನಿರ್ಮಲಾ ಮಲಘಾಣ, ವಿಜಯಾ ಹಂಗರಗಿ, ಸ್ಯಾಮಯೆಲ್ ಸಂಸ್ಥಾಪಕ ಅಧ್ಯಕ್ಷೆ ಮಾರ್ಗರೇಟ್ ಗೌಡರ, ಸುನಿತಾ ಮಲಘಾಣ, ಶಬಾನಾ ಜಮಾದಾರ, ಭಾರತಿ ಕತ್ತಿ, ಡಾ| ಪಾರ್ವತಿ ನಾಯ್ಕ, ಡಾ| ವೀಣಾ ಕಕರಡ್ಡಿ, ಸುಜಾತಾ ವಸ್ತ್ರದ, ಶಬಾನಾ ಜಮಾದಾರ, ಸುವರ್ಣಾ ಅವಟಿ, ವಿಭಾ ಕೋಲಾರ, ರನ್ ಟಿವಿ ಮುಖ್ಯಸ್ಥ ಚಂದ್ರಶೇಖರ ಪಮ್ಮಾರ ಸೇರಿದಂತೆ ಇತರರು ಇದ್ದರು. ಶೃತಿ ನಿಗಡೆ, ಮಹಾಂತೇಶ ಹಿರೇಮಠ ನಿರೂಪಿಸಿ, ವಂದಿಸಿದರು