Advertisement

ಕಾಪು ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಮುದ್ದು ಮೂಡುಬೆಳ್ಳೆ

02:20 AM Dec 11, 2018 | Team Udayavani |

ಶಿರ್ವ: ನೂತನ ತಾಲೂಕು ಆಗಿ ರಚನೆಗೊಂಡ ಕಾಪು ತಾಲೂಕಿನ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಹಿತಿ ಮುದ್ದು ಮೂಡುಬೆಳ್ಳೆ ಆಯ್ಕೆಯಾಗಿದ್ದಾರೆ. ಶಿರ್ವ ಸಮೀಪದ ಕುತ್ಯಾರು ಶ್ರೀ ಪರಶುರಾಮೇಶ್ವರ ಕ್ಷೇತ್ರದ ಸೂರ್ಯ ಚೈತನ್ಯ ಗ್ಲೋಬಲ್‌ ಅಕಾಡೆಮಿ ಸ್ಕೂಲ್‌ ಸಭಾಂಗಣದಲ್ಲಿ ಡಿ.20ರಂದು ಸಮ್ಮೇಳನ ನಡೆಯಲಿದೆ.

Advertisement

ಮೂಲತಃ ಕಾಪು ತಾಲೂಕಿನ ಮೂಡುಬೆಳ್ಳೆ ಸಮೀಪದ ಕಟ್ಟಿಂಗೇರಿ ಗ್ರಾಮದವರಾಗಿದ್ದು,ಮೂಡುಬೆಳ್ಳೆ ಮತ್ತು ಉಡುಪಿಯಲ್ಲಿ ಪದವಿ, ಬಳಿಕ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಕನ್ನಡ, ಎಂ.ಎ. ಸಮಾಜಶಾಸ್ತ್ರ, ಸ್ನಾತಕೋತ್ತರ ಡಿಪ್ಲೊಮಾ (ಕೊಂಕಣಿ) ಪತ್ರಿಕೋದ್ಯಮ ಡಿಪ್ಲೊಮಾ ಪದವಿ ಗಳಿಸಿದ್ದಾರೆ. ನ್ಯಾಯಾಂಗ ಇಲಾಖೆಯಲ್ಲಿ 9 ವರ್ಷ ಸೇವೆಯ ಬಳಿಕ 1985ರಿಂದ ಮಂಗಳೂರು ಆಕಾಶವಾಣಿಯಲ್ಲಿ ಹಿರಿಯ ಕಾರ್ಯಕ್ರಮ ನಿರೂಪಕರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಮಂಗಳೂರು ವಿ.ವಿ. ಯಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತನ್ನ 13ರ ಹರೆಯದಲ್ಲಿ (1968) ಪ್ರಥಮ ಕಥೆ-ಕವನ ಪ್ರಕಟಿಸಿದ್ದ ಇವರು, 50 ವರ್ಷಗಳಿಂದ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಕನ್ನಡ, ತುಳು ಭಾಷೆಗಳಲ್ಲಿ 30 ಕೃತಿಗಳನ್ನು ಬರೆದಿದ್ದಾರೆ. 50ಕ್ಕೂ ಮಿಕ್ಕ ಕೃತಿಗಳ ಸಂಪಾದಕ ಸಮಿತಿಯಲ್ಲಿ ದುಡಿದಿದ್ದಾರೆ. ಗೊರೂರುಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ, ಮಾಸ್ತಿ ಪುರಸ್ಕಾರ ಸೇರಿದಂತೆ ವಿವಿಧ ಪ್ರಶಸ್ತಿಗಳು ಇವರಿಗೆ ಸಂದಿವೆ. ಅವರ 3 ಕೃತಿಗಳು ಮಂಗಳೂರು ಹಾಗೂ ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಗೆ ಪಠ್ಯವಾಗಿವೆ. ಮುಂಬಯಿ ತುಳು ರಂಗಭೂಮಿ ಕುರಿತು ಅಧ್ಯಯನ ಮಾಡಿದ ಮೊದಲಿಗರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next