Advertisement

ಮಾತೃ ವಾತ್ಸಲ್ಯ ಅಮೃತಕ್ಕೆ ಸಮ

03:34 PM May 11, 2020 | Naveen |

ಮುದ್ದೇಬಿಹಾಳ: ಪ್ರತಿಯೊಬ್ಬ ತಾಯಿ ಮಕ್ಕಳನ್ನು ಕಾಳಜಿಯಿಂದ, ಜವಾಬ್ದಾರಿಯುತವಾಗಿ ಬೆಳೆಸಿರುತ್ತಾಳೆ. ಮಕ್ಕಳು ತಾಯಂದಿರನ್ನು ಗೌರವಿಸಿದಾಗ ಸಮಾಜದಲ್ಲಿ ಮಕ್ಕಳ ಗೌರವ ಹೆಚ್ಚುತ್ತದೆ ಎಂದು ಶಾಸಕ ಎ.ಎಸ್‌ .ಪಾಟೀಲ ನಡಹಳ್ಳಿ ಅವರ ಪತ್ನಿ ಮಹಾದೇವಿ ಪಾಟೀಲ ಹೇಳಿದರು.

Advertisement

ಇಲ್ಲಿನ ಶಾಸಕರ ದಾಸೋಹ ನಿಲಯದಲ್ಲಿ ರವಿವಾರ ನಡೆದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಗವಂತ ಎಲ್ಲೆಡೆ ಇರಲಾಗುವುದಿಲ್ಲ ಎಂದು ತಾಯಿಯನ್ನು ಸೃಷ್ಟಿಸಿದ್ದಾನೆ. ತಾಯಿಯ ತ್ಯಾಗಕ್ಕೆ ಯಾವುದೂ ಸಮನಾಗದು. ಜೀವನವಿಡೀ ತನ್ನ ಪತಿ, ಮಕ್ಕಳಿಗಾಗಿ ಜೀವನ ಸವೆಸುವ ತಾಯಿಯ ವಾತ್ಸಲ್ಯ ಅಮೃತಕ್ಕೆ ಸಮಾನವಾದದ್ದು. ಆಧುನಿಕ ಜನಾಂಗ ತಾಯಿಗೆ ಅಗೌರವ ತೋರಿಸದೆ ಆಕೆಯನ್ನು ಲಾಲಿಸಿ, ಪಾಲಿಸುವ ಗುಣ ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಾಗಬೇಕು ಎಂದರು.

ಇದೇ ವೇಳೆ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಶಾಸಕರ ತಾಯಿ ಗಂಗಮ್ಮಗೌಡತಿ ಪಾಟೀಲರ ಜೊತೆಗೂಡಿ ಮಹಾದೇವಿ ಪಾಟೀಲ ಕೇಕ್‌ ಕತ್ತರಿಸಿ, ಪರಸ್ಪರ ಸಿಹಿ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು. ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ ಮತ್ತು ಸಹನಾ ಬಡಿಗೇರ, ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರಾದ ಸುಧಾ ಪಾಟೀಲ, ಗೌರಮ್ಮ ಹುನಗುಂದ, ಬಸಮ್ಮ ಸಿದರಡ್ಡಿ, ನೀಲಮ್ಮ ಚಲವಾದಿ, ನಿರ್ಮಲಾ ಪುರಾಣಿಕಮಠ, ಶಾಂತಾ ಹಾವರಗಿ, ಶಿಲ್ಪಾ ಶರ್ಮಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next