Advertisement

ಪತ್ರಿಕೆ ಹಂಚುವವರ ಸಂಕಷಕ್ಕೆ ಮಿಡಿದ ಶಾಸಕ ನಡಹಳ್ಳಿ

01:35 PM Apr 23, 2020 | Naveen |

ಮುದ್ದೇಬಿಹಾಳ: ಪತ್ರಿಕೆ ಹಂಚುವ ಹುಡುಗರು, ಬಡತನದಲ್ಲಿಯೂ ಕಷ್ಟದ ಜೀವನ ನಡೆಸುತ್ತಿರುವ ಪತ್ರಿಕೆಗಳ ವಿತರಕರು ಮತ್ತು ಸ್ಥಳೀಯ ಬಡ ಪತ್ರಕರ್ತರಿಗೆ ಲಾಕ್‌ ಡೌನ್‌ ಮುಗಿಯುವವರೆಗೂ ಅವರ ಊಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ತೀರ್ಮಾನಿಸಿದ್ದೇನೆ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.

Advertisement

ಇಲ್ಲಿನ ತಮ್ಮ ದಾಸೋಹ ನಿಲಯದಲ್ಲಿ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಪತ್ರಿಕೆ ಹಂಚುವವರು, ಬಡ ಪತ್ರಕರ್ತರು ಸೇರಿ ಅಂದಾಜು 700 ಜನಕ್ಕೆ ತಲಾ 800 ರೂ. ಮೌಲ್ಯದ ಆಹಾರ ಧಾನ್ಯದ ಕಿಟ್‌ ವಿತರಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ಆತಂಕದಲ್ಲೂ ಮನೆ ಮನೆಗೆ ಪತ್ರಿಕೆ ಹಂಚುವುದು ಅಷ್ಟು ಸುಲಭವಾದ ಕೆಲಸ ಅಲ್ಲ. ನಸುಕಿನಲ್ಲಿ ಎದ್ದು ಜನಸಾಮಾನ್ಯರು ಕಣ್ಣು ತೆರೆಯುವಷ್ಟರಲ್ಲಿ ಪತ್ರಿಕೆ ಅವರ ಎದುರಿಗೆ ಇರುವಂತೆ ನೋಡಿಕೊಳ್ಳುವ ಹೊಣೆ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಇವರ ಕಷ್ಟಕ್ಕೆ ಸ್ಪಂದನೆ ಸಿಗುವುದು ಕಡಿಮೆ. ಇದನ್ನು ಮನಗಂಡು ಈ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದರು.

ಮಾಧ್ಯಮದವರ ಸುರಕ್ಷತೆಗೆ ಹೆಚ್ಚು ಗಮನ ಹರಿಸಬೇಕಿರುವುದು ಎಲ್ಲರ ಕರ್ತವ್ಯ. ವಿಜಯಪುರದಲ್ಲಿ ಕ್ರಿಯಾಶೀಲರಾಗಿರುವ ಮಾಧ್ಯಮದವರಿಗೆ, ಫೋಟೊಗ್ರಾಫರ್‌ ಗಳಿಗೆ ಎನ್‌-95 ಮಾಸ್ಕ್ ವಿತರಿಸಲು ಕ್ರಮ ಕೈಗೊಂಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next