Advertisement

ಬಿಡಾಡಿ ದನಗಳಿಗೆ ದಾನಿಗಳಿಂದ ಮೇವು ವಿತರಣೆ

06:24 PM Apr 13, 2020 | Naveen |

ಮುದ್ದೇಬಿಹಾಳ: ವಾರಸುದಾರರಿಲ್ಲದ ಬಿಡಾಡಿದನಗಳಿಗೆ ದಾನಿಗಳ ನೆರವಿನೊಂದಿಗೆ ಉಚಿತವಾಗಿ ಮೇವು, ನೀರು ಕೊಡುವ ವ್ಯವಸ್ಥೆಗೆ ಪಟ್ಟಣದ ತಂಗಡಗಿ ರಸ್ತೆಪಕ್ಕದ ಕೆಇಬಿ ಕಚೇರಿ ಎದುರು ರವಿವಾರ ಅಧಿಕಾರಿಗಳು, ದಾನಿಗಳು ಚಾಲನೆ ನೀಡಿದರು.

Advertisement

ಈ ವೇಳೆ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಎಸ್‌.ಸಿ.ಚೌಧರಿ ಮಾತನಾಡಿ, ತಹಸೀಲ್ದಾರ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಈ ವ್ಯವಸ್ಥೆಗೆ ಚಾಲನೆ ನೀಡಿದ್ದು, ಲಾಕ್‌ ಡೌನ್‌ ಮುಗಿಯುವವರೆಗೂ ಮುಂದುವರೆಯಲಿದೆ. ಬನೋಶಿಯ ಪ್ರಗತಿಪರ ರೈತ ಬಾಪುಗೌಡ ಗೌಡರ ನೆರವಿನ ಹಸ್ತ ಚಾಚಿದ್ದಾರೆ. ಜೈನ ಸಮುದಾಯದ ಮಾಣಿಕಚಂದ ದಂಡಾವತಿ, ಭರತೇಶ ಗೋಗಿ ಅವರೂ ನೆರವಿಗೆ ಮುಂದೆ ಬಂದಿದ್ದಾರೆ. ಒಟ್ಟಾರೆ ಲಾಕ್‌ಡೌನ್‌ ಅವಧಿಯಲ್ಲಿ ಜಾನುವಾರುಗಳಿಗೆ ಆಹಾರ, ನೀರು ಇಲ್ಲದೆ ಪರಿತಪಿಸದಂತೆ ನೋಡಿಕೊಳ್ಳಲಾಗುತ್ತದೆ ಎಂದರು.

ದಾನಿ ಬಾಪುಗೌಡ ಗೌಡರ ಮಾತನಾಡಿ, ಕೊರೊನಾ ಸಂಕಷ್ಟಕ್ಕೆ ಬಿಡಾಡಿದನಗಳು ಬಲಿಯಾಗಬಾರದು ಎಂದು ಸಂಕಲ್ಪಿಸಿ ನನ್ನ ಹೊಲದಲ್ಲಿನ ಮೇವು ಕೊಡಲು ಮುಂದೆ ಬಂದಿದ್ದೇನೆ. ಕುಡಿವ ನೀರಿನ ವ್ಯವಸ್ಥೆಯನ್ನೂ ನಾನೇ ಕಲ್ಪಿಸಿದ್ದೇನೆ. ಲಾಕ್‌ಡೌನ್‌ ಮುಗಿಯುವವರೆಗೂ ಇದನ್ನು ಮುಂದುವರೆಸುತ್ತೇನೆ. ಈ ಸೇವೆ ನನಗೆ ಸಂತೃಪ್ತಿ ತಂದುಕೊಡುತ್ತದೆ ಎಂದರು.

ತಹಸೀಲ್ದಾರ್‌ ಜಿ.ಎಸ್‌.ಮಳಗಿ, ಸಿಪಿಐ ಆನಂದ ವಾಗಮೋಡೆ, ಮುಖ್ಯ ಪಶುವೈದ್ಯಾ ಧಿಕಾರಿ ಡಾ| ಸುರೇಶ ಭಜಂತ್ರಿ, ಪುರಸಭೆ  ಆರೋಗ್ಯನಿರೀಕ್ಷಕ ಜಾವೀದ ಅಹ್ಮದ್‌ ನಾಯ್ಕೋಡಿ, ಬಿಜೆಪಿ ತಾಲೂಕು ಅಧ್ಯಕ್ಷ ಡಾ| ಪರಶುರಾಮ ಪವಾರ, ವಿದ್ಯಾಭಾರತಿ ಶಾಲೆಗಳ ಜಿಲ್ಲಾಧ್ಯಕ್ಷ ಪ್ರಭು ಕಡಿ, ರಾಜಶೇಖರ ಹೊಳಿ, ಮಹಾಂತೇಶ ಬೂದಿಹಾಳಮಠ, ದಾನಿಗಳಾದ ಮಾಣಿಕಚಂದ ದಂಡಾವತಿ, ಭರತೇಶ ಗೋಗಿ, ಪಶುವೈದ್ಯರು, ಪಶುಪರಿವೀಕ್ಷಕರು ಇದ್ದರು. ಮೇವನ್ನು ತುಂಡರಿಸಿ ಹಾಕುವ ಯಂತ್ರ, ಕುಡಿವ ನೀರಿಗಾಗಿ ಸಿಮೆಂಟ್‌ ರಿಂಗ್‌ಗಳಿಗೆ ಪ್ಲಾಸ್ಟಿಕ್‌ ಟಾರ್ಪಾಲಿನ್‌ ಹೊದಿಸಿ ಮಾಡಿದ ತಾತ್ಕಾಲಿಕ ಸೌಲಭ್ಯ, ಕಣಿಕೆ ಮುಂತಾದ ಸೌಕರ್ಯಗಳನ್ನು ಅಧಿ ಕಾರಿಗಳು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next