Advertisement

ಕೋವಿಡ್ ಹೋರಾಟದ ಸೈನಿಕರಿಗೆ ಸನ್ಮಾನ

07:03 PM May 28, 2020 | Naveen |

ಮುದ್ದೇಬಿಹಾಳ: ಕೋವಿಡ್ ಸಮಾಜದಲ್ಲಿನ ಎಲ್ಲರಿಗೂ ಸೌಹಾರ್ದತೆಯ ಪಾಠ ಕಲಿಸಿದೆ. ಕೂಡಿಬಾಳುವ ಸಂದೇಶ ನೀಡಿದೆ. ಕೋವಿಡ್ ವಾರಿಯರ್‌ಗಳು ಜೀವದ ಹಂಗು ತೊರೆದು ಮಾಡಿರುವ ಕೆಲಸ ಸದಾ ಸ್ಮರಣೀಯ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಸ್ವಾಮೀಜಿ ಹೇಳಿದ್ದಾರೆ.

Advertisement

ಕುಂಟೋಜಿಯ ಶ್ರೀಮಠದಲ್ಲಿ ರವಿವಾರ ಸಂಜೆ ಶ್ರೀಮಠದಿಂದ ಹಮ್ಮಿಕೊಂಡಿದ್ದ ಕೋವಿಡ್ ವಾರಿಯರ್‌ ಗಳಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಸೋಮವಾರ ರಂಜಾನ್‌ ಹಬ್ಬವಿದೆ. ಕೋವಿಡ್ ಕರಾಳತೆ ಹಬ್ಬದ ಕಳೆ ಕಡಿಮೆ ಮಾಡಿದ್ದು, ಗ್ರಾಮೀಣ ಭಾಗದಲ್ಲಿ ಹಿಂದೂ ಮುಸ್ಲಿಂರು ಸಹೋದರರಂತೆ ಬಾಂಧವ್ಯದಿಂದ ಹಬ್ಬ ಆಚರಿಸುವ ಸಂಪ್ರದಾಯ ಕೈಬಿಡುವುದಿಲ್ಲ. ಇಂಥ ಸಂದರ್ಭ ಕೋವಿಡ್ ವಾರಿಯರ್‌ಗಳಾಗಿ ಕೆಲಸ ಮಾಡಿರುವ ಆಶಾ ಕಾರ್ಯಕರ್ತೆಯರನ್ನು, ಕೋವಿಡ್ ಸಂಕಷ್ಟದಲ್ಲಿ ಬಡವರ ನೆರವಿಗೆ ಧಾವಿಸುತ್ತಿರುವ ಜನಪ್ರತಿನಿಧಿಗಳನ್ನು, ಸಂಘ ಸಂಸ್ಥೆಗಳ ಅಧ್ಯಕ್ಷರನ್ನು ಗೌರವಿಸುವುದು ನಮ್ಮ ಮಠಕ್ಕೆ ಹೆಮ್ಮೆಯ ಸಂಗತಿ. ಇದು ಸಮಾಜಕ್ಕೆ ಮಾದರಿ ಕಾರ್ಯ ಎಂದರು.

ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದು ಹೆಬ್ಟಾಳ ಮಾತನಾಡಿ, ಕೊರೊನಾ ಸಮಾಜಕ್ಕೆ ಸಾಕಷ್ಟು ಪಾಠ ಕಲಿಸಿದೆ. ಈ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತೆಯರ ಜತೆಗೆ ಹಲವರ ಪಾತ್ರ ಮಹತ್ವದ್ದಾಗಿದೆ. ಅನೇಕ ದಾನಿಗಳು ಬಡವರ ಸಂಕಷ್ಟಕ್ಕೆ ನೆರವಾಗಿರುವುದು ಸತ್ಸಂಪ್ರದಾಯ ಎನ್ನಿಸಿಕೊಂಡಿದೆ ಎಂದರು.

ಇದೇ ವೇಳೆ ಸ್ಥಳೀಯ ಆಶಾ ಕಾರ್ಯಕರ್ತೆಯರಾದ ಶಾರದಾ ಹಿರೇಮಠ, ಯಲ್ಲವ್ವ ಹೊಸಮನಿ, ಯಲ್ಲವ್ವ ತಳವಾರ, ರೇಣುಕಾ ತಾಮ್ರಳ್ಳಿ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕರ್ನಾಟಕ ಸೌಹಾರ್ದ ಬ್ಯಾಂಕ್‌ ಅಧ್ಯಕ್ಷ ಸತೀಶ ಓಸ್ವಾಲ್‌, ಸಿದ್ದರಾಮ ಮತ್ತು ಭಾಗ್ಯಜ್ಯೋತಿ ಅವರನ್ನು ಶ್ರೀಮಠದ ವತಿಯಿಂದ ಚನ್ನವೀರ ಸ್ವಾಮೀಜಿ, ಇಟಗಿ ಭೂ ಕೈಲಾಸ ಮೇಲಗದ್ದುಗೆ ಮಠದ ಗುರುಶಾಂತಲಿಂಗ ಶಿವಾಚಾರ್ಯರು ಸನ್ಮಾನಿಸಿ ಶುಭ ಕೋರಿದರು.

ಪ್ರವಚನಕಾರರಾದ ಸಂಗಯ್ಯಶಾಸ್ತ್ರಿಗಳು ಆಲೂರ, ಷಡಕ್ಷರಿಶಾಸ್ತ್ರಿಗಳು ಯರಗಲ್‌, ಗಣ್ಯರಾದ ಎಸ್‌. ಎಂ.ಪಾಟೀಲ, ಕೆ.ಜಿ.ಬಿರಾದಾರ, ನಯಿಮಪಾಷಾ ಇನಾಮದಾರ, ಉಸ್ಮಾನ ಇನಾಮದಾರ, ಸೋಮಣ್ಣ ಹೊಸಮನಿ, ಮಹಾಂತೇಶ ಬೂದಿಹಾಳಮಠ, ಬಸಯ್ಯ ನಂದಿಕೇಶ್ವರಮಠ, ಮಲ್ಲು ಪಲ್ಲೇದ, ಸಂಗು ಒಣರೊಟ್ಟಿ, ಪ್ರಕಾಶ ಹೂಗಾರ, ಸಂಗು ಹೂಗಾರ, ಲಿಂಗರಾಜ ಉಣ್ಣೀಭಾವಿ, ಸಂಗಮೇಶ ಗುತ್ತೇದಾರ, ಸೋಮು ಗಸ್ತಿಗಾರ, ಪ್ರಾಂಶುಪಾಲ ಡಾ| ಎನ್‌.ಬಿ.ಹೊಸಮನಿ, ಮಲ್ಲಿಕಾರ್ಜುನ ಬಾಗೇವಾಡಿ, ಶಿವಬಸ್ಸು ಸಜ್ಜನ ಸೇರಿದಂತೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next