Advertisement

MUDA Scam: ನಿವೃತ್ತ ನ್ಯಾಯಾಧೀಶರ ತನಿಖೆಯಿಂದ ಎಲ್ಲವೂ ಸ್ಪಷ್ಟ : ಬಿ.ಕೆ.ಹರಿಪ್ರಸಾದ್‌

11:51 PM Jul 28, 2024 | Team Udayavani |

ಮಂಗಳೂರು: ಮೈಸೂರಿನ ಮುಡಾ ಹಗರಣದ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ಮುಖ್ಯಮಂತ್ರಿಯವರು ಆದೇಶ ನೀಡಿದ್ದಾರೆ. ವಿಚಾರಣೆ ಬಳಿಕ ಹಾಲು ಯಾವುದು, ನೀರು ಯಾವುದು ಎಂಬುದು ಗೊತ್ತಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

Advertisement

ಮಂಗಳೂರಿನಲ್ಲಿ ರವಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬೇರೆಯವರಿಗೆ ಕಲ್ಲು ಹೊಡೆಯುವ ಮೊದಲು ಅವರು ಗಾಜಿನ ಮನೆಯಲ್ಲಿದ್ದಾರೆ ಎಂದು ತಿಳಿದುಕೊಳ್ಳಬೇಕು. ಹಗರಣ ಆಗಿದೆಯೋ ಗೊತ್ತಿಲ್ಲ, ಆದರೆ ಆಪಾದನೆ ಮಾಡಿದ್ದಾರೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಅದರಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದರು.

ರಾಜ್ಯ ಸರಕಾರಕ್ಕೆ ಮಸಿ ಬಳಿಯಲು ನಿರಂತರ ಪ್ರಯತ್ನ ನಡೆಯುತ್ತಿದೆ. ಬಿಜೆಪಿ, ಸಂಘಪರಿವಾರ ಹಾಗೂ ಕಾಂಗ್ರೆಸ್‌ ವಿರೋ ಧಿಗಳು ಈ ಕೆಲಸ ಮಾಡುತ್ತಿದ್ದಾರೆ. 2 ಜಿ, 3 ಜಿ ನಡೆದು 10 ವರ್ಷ ಕಳೆದಿದ್ದು, ಯಾರನ್ನಾದರೂ ಜೈಲಿಗೆ ಕಳುಹಿಸಿದ್ದಾರಾ? ಬಿಜೆಪಿಯ ಈ ನಾಟಕಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನತೆ ಉತ್ತರ ಕೊಟ್ಟಿದ್ದಾರೆ ಎಂದರು.

ದ್ವೇಷ ರಾಜಕಾರಣ ಮಾಡುವುದಿಲ್ಲ
ಕಾಂಗ್ರೆಸ್‌ ದ್ವೇಷ ರಾಜಕಾರಣ ಮಾಡುವುದಿಲ್ಲ. ಇದನ್ನು ರಾಹುಲ್‌ ಗಾಂಧಿ  ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಭ್ರಷ್ಟಾಚಾರದ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಎಂದು ಹೇಳಿದ್ದಾರೆ. ಪಕ್ಷ ಕಾಲಕಾಲಕ್ಕೆ ಯಾವ್ಯಾವ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು ಎಂದರು. ಬಿಜೆಪಿ ವಿರುದ್ದ ಶೇ.40 ಕಮಿಷನ್‌ ಆರೋಪದ ತನಿಖೆ ಯಾಕೆ ಇನ್ನೂ ನಡೆದಿಲ್ಲ ಎಂಬ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನು ಸಿಎಂ, ಡಿಸಿಎಂ ಮತ್ತು ಸಚಿವರನ್ನು ಕೇಳಬೇಕು. ಅವರೇ ಉತ್ತರಿಸುತ್ತಾರೆ. ನಾನು ಸರಕಾರದಲ್ಲಿ ಇಲ್ಲ ಎಂದರು.

ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯು ತೆರಳದೆ ಇರುವುದನ್ನು ಸಮರ್ಥಿಸಿದ ಅವರು, ನೀತಿ ಆಯೋಗ ಎಂಬುದು ಪ್ರಧಾನಮಂತ್ರಿಯವರ ತಾಳಕ್ಕೆ ತಕ್ಕಂತೆ ಇರುವುದು. ನೀತಿ ಆಯೋಗ ಸರಿ ಇದ್ದರೆ ಬಜೆಟ್‌ನಲ್ಲಿ ಅತಿ ಹೆಚ್ಚು ತೆರಿಗೆ ಮೂಲಕ ಖಜಾನೆ ತುಂಬಿಸುವ ರಾಜ್ಯಗಳಿಗೆ ಸಹಾಯ ಮಾಡಬೇಕಿತ್ತು. ರೋಗಗ್ರಸ್ತ ರಾಜ್ಯಗಳಿಗೆ ಹೆಚ್ಚಿನ ಹಣ ಕೊಟ್ಟಿದ್ದಾರೆ. ನಾವು ನಮ್ಮ ಪಾಲು ಕೇಳಿದ್ದೇವೆ. ಅದನ್ನು ನೀಡದ್ದಕ್ಕೆ ನೀತಿ ಆಯೋಗವನ್ನು ಬಹಿಷ್ಕರಿಸಿದ್ದೇವೆ. ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ವಿರೋಧಿಸಿದ ಬಳಿಕವೂ ಸಭೆಗೆ ಹೋಗಿರುವುದು ಅವರಿಗೆ ಬಿಟ್ಟ ವಿಚಾರ ಎಂದರು.

Advertisement

ಯೋಜನಾ ಆಯೋಗ ಎಂಬದು ಸಾವರ್ಕರ್‌ ಇರಿಸಿದ ಹೆಸರಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಉತ್ತುಂಗ ನಾಯಕ
ಸುಭಾಷ್‌ಚಂದ್ರ ಬೋಸ್‌, ಮಹಾತ್ಮಾಗಾಂಧಿ , ನೆಹರೂ ಮುಂತಾದವರು ಇರಿಸಿದ ಹೆಸರುಗಳನ್ನು ಈಗ ಬದಲಾಯಿ ಸುತ್ತಿದ್ದಾರೆ. ಸುಭಾಷ್‌ಚಂದ್ರ ಬೋಸ್‌ ಮೇಲೆ ಇವರಿಗೇನು ಕೋಪ? ಆಯೋಗದ ಹೆಸರನ್ನು ಯಾಕೆ ಬದಲಾವಣೆ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್‌ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next